
ಬೆಳಗಾವಿ, 16 ಫೆಬ್ರವರಿ (ಹಿ.ಸ.):
ಆ್ಯಂಕರ್:
ಗ್ರಾಮೀಣ ಜನರ ಜೀವನಾಡಿಯಾದ ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ)ವನ್ನು ದುರ್ಬಲಗೊಳಿಸುವಂತೆ ತಿದ್ದುಪಡಿ ಮಾಡಿ ‘ವಿಬಿ-ಜಿ-ರಾಮ್-ಜಿ’ ಹೆಸರಿನಲ್ಲಿ ಜಾರಿಗೆ ತಂದಿರುವ ಯೋಜನೆಯನ್ನು ತಕ್ಷಣ ರದ್ದುಗೊಳಿಸಿ, ಹಳೆಯ ಮನರೇಗಾ ಯೋಜನೆಯನ್ನು ಯಥಾವತ್ತಾಗಿ ಮುಂದುವರಿಸಬೇಕು ಎಂದು ಆಗ್ರಹಿಸಿ ಬೆಳಗಾವಿ ಜಿಲ್ಲೆಯ ರಾಯಬಾಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಘಟಕದ ವತಿಯಿಂದ ಜನಜಾಗೃತಿ ಪಾದಯಾತ್ರೆ ನಡೆಯಿತು.
ಪಾದಯಾತ್ರೆಯಲ್ಲಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಭಾಗವಹಿಸಿ ಮಾತನಾಡಿ, ಮನರೇಗಾ ಯೋಜನೆ ಗ್ರಾಮೀಣ ಬಡಜನರು, ರೈತರು ಹಾಗೂ ಕೂಲಿ ಕಾರ್ಮಿಕರಿಗೆ ಜೀವನಾಧಾರವಾಗಿದೆ. ಬರಗಾಲ ಹಾಗೂ ಆರ್ಥಿಕ ಸಂಕಷ್ಟದ ಸಂದರ್ಭಗಳಲ್ಲಿ ಸಾವಿರಾರು ಕುಟುಂಬಗಳಿಗೆ ಉದ್ಯೋಗ ಭದ್ರತೆ ಒದಗಿಸಿ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಮಹಿಳಾ ಸಬಲೀಕರಣಕ್ಕೆ ಮಹತ್ವದ ಕೊಡುಗೆ ನೀಡಿದೆ ಎಂದು ಹೇಳಿದರು.
ಗ್ರಾಮೀಣ ಅಭಿವೃದ್ಧಿ, ರೈತರ ಹಿತಾಸಕ್ತಿ ಮತ್ತು ಕಾರ್ಮಿಕರ ಭದ್ರತೆಗಾಗಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೊಹಿತೆ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಸೇರಿದಂತೆ ಡಿ.ಎಸ್. ನಾಯಕ, ಸಿದ್ಧಾರೂಡ ಬಂಡಗರ, ನಿರ್ಮಲ ಪಾಟೀಲ, ಡಾ. ಏನ್.ಎ. ಮಗದುಮ, ಅಣ್ಣಸಾಹೇಬ ಸಮಾಜೆ, ವೀರಪ್ಪ ನಿಂಗನೂರೆ, ಹಾಜಿ ಮುಲ್ಲಾ, ಅಪ್ಪಾಸಾಹೇಬ ಕುಲಗೋಡೆ, ದಿಲೀಪ ಜಮಾದಾರ, ಅರ್ಜುನ ನಾಯಕವಾಡಿ, ಶಿವನಗೌಡ ಪಾಟೀಲ, ಬಹುಸಾಹೇಬ ಪಾಟೀಲ, ವಸಂತ ಕರಿಗಾರ, ಶಿವು ಮರಾಯಿ, ಶಂಕರಗೌಡ ಪಾಟೀಲ, ರಾಜು ಕೋಟಗಿ, ಪಾಂಡುರಂಗ ಮಾಣೆ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa