ಬೀದರನ ಪಾತರಪಳ್ಳಿಯಲ್ಲಿ ನೂತನ ಮುಖ್ಯದ್ವಾರ ಉದ್ಘಾಟನೆ
ಬೀದರ್, 16 ಫೆಬ್ರವರಿ (ಹಿ.ಸ.): ಆ್ಯಂಕರ್: ಬೀದರ ದಕ್ಷಿಣ ಮತಕ್ಷೇತ್ರದ ಪಾತರಪಳ್ಳಿ ಗ್ರಾಮದಲ್ಲಿ ಸ್ಥಳೀಯ ಗ್ರಾಮಸ್ಥರಾದ ಲಕ್ಷ್ಮಣ ನಿರ್ಣಾಕರ ಅವರ ಸಹಕಾರದಿಂದ ನಿರ್ಮಿಸಲಾದ ಗ್ರಾಮದ ನೂತನ ಮುಖ್ಯದ್ವಾರವನ್ನು ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಪಾತರಪಳ್ಳಿ ಗ್
Inauguration


ಬೀದರ್, 16 ಫೆಬ್ರವರಿ (ಹಿ.ಸ.):

ಆ್ಯಂಕರ್:

ಬೀದರ ದಕ್ಷಿಣ ಮತಕ್ಷೇತ್ರದ ಪಾತರಪಳ್ಳಿ ಗ್ರಾಮದಲ್ಲಿ ಸ್ಥಳೀಯ ಗ್ರಾಮಸ್ಥರಾದ ಲಕ್ಷ್ಮಣ ನಿರ್ಣಾಕರ ಅವರ ಸಹಕಾರದಿಂದ ನಿರ್ಮಿಸಲಾದ ಗ್ರಾಮದ ನೂತನ ಮುಖ್ಯದ್ವಾರವನ್ನು ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಪಾತರಪಳ್ಳಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ತಮ್ಮ ಅನುದಾನದಡಿ ₹50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದರು. ಈ ಅನುದಾನವನ್ನು ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿ, ರಸ್ತೆ ಸುಧಾರಣೆ ಹಾಗೂ ಮೂಲಭೂತ ಸೌಲಭ್ಯಗಳ ವಿಸ್ತರಣೆಗೆ ಬಳಸಲಾಗುತ್ತದೆ ಎಂದು ತಿಳಿಸಿದರು.

ಗ್ರಾಮಗಳ ಅಭಿವೃದ್ಧಿಯೇ ರಾಜ್ಯದ ಸಮಗ್ರ ಪ್ರಗತಿಯ ಆಧಾರ ಎಂದು ಹೇಳಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು, ರಸ್ತೆ, ಒಳಚರಂಡಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande