ಬಳ್ಳಾರಿ ನಗರ : ಹೊಸ 10 ಬಸ್ ಕಾರ್ಯಾಚರಣೆ
ಬಳ್ಳಾರಿ, 16 ಫೆಬ್ರವರಿ (ಹಿ.ಸ.) : ಆ್ಯಂಕರ್ : ನಗರದ ಸಾರ್ವಜನಿಕ ಪ್ರಯಾಣಿಕರಿಗೆ ಮಿತವ್ಯಯ ದರದ ಸಮರ್ಪಕವಾದ ವ್ಯವಸ್ಥಿತ ಹಾಗೂ ಸುರಕ್ಷಿತವಾದ ನಗರ ಸಾರಿಗೆ ಸೌಲಭ್ಯವನ್ನು ಒದಗಿಸಲು ಬಳ್ಳಾರಿ ವಿಭಾಗಕ್ಕೆ 10 ನೂತನ ನಗರ ಸಾರಿಗೆ ಬಸ್ ಹಂಚಿಕೆಯಾಗಿದ್ದು, ನೂತನ ನಗರ ಸಾರಿಗೆ 10 ಬಸ್ ಗಳಿಂದ ಬಳ
ಬಳ್ಳಾರಿ ನಗರ : ಹೊಸ 10 ಬಸ್ ಕಾರ್ಯಾಚರಣೆ


ಬಳ್ಳಾರಿ, 16 ಫೆಬ್ರವರಿ (ಹಿ.ಸ.) :

ಆ್ಯಂಕರ್ : ನಗರದ ಸಾರ್ವಜನಿಕ ಪ್ರಯಾಣಿಕರಿಗೆ ಮಿತವ್ಯಯ ದರದ ಸಮರ್ಪಕವಾದ ವ್ಯವಸ್ಥಿತ ಹಾಗೂ ಸುರಕ್ಷಿತವಾದ ನಗರ ಸಾರಿಗೆ ಸೌಲಭ್ಯವನ್ನು ಒದಗಿಸಲು ಬಳ್ಳಾರಿ ವಿಭಾಗಕ್ಕೆ 10 ನೂತನ ನಗರ ಸಾರಿಗೆ ಬಸ್ ಹಂಚಿಕೆಯಾಗಿದ್ದು, ನೂತನ ನಗರ ಸಾರಿಗೆ 10 ಬಸ್ ಗಳಿಂದ ಬಳ್ಳಾರಿ ನಗರದ ಸಾರ್ವಜನಿಕ ಪ್ರಯಾಣಿಕರಿಗೆ 07 ಮಾರ್ಗಗಳಲ್ಲಿ, 10 ಅನುಸೂಚಿಗಳನ್ನು ಕಾರ್ಯಾಚರಣೆ ಮಾಡಲು ಯೋಜಿಸಲಾಗಿದೆ ಎಂದು ಕಕರಸಾ ನಿಗಮ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್ ಬಾನ್ ಅವರು ತಿಳಿಸಿದ್ದಾರೆ.

ಮಾರ್ಗ(ನಗರದಲ್ಲಿ ಮಾತ್ರ) :

ಎಸ್.ಪಿ. ಸರ್ಕಲ್-ಅಲ್ಲಿಪುರ(1 ಬಸ್): ದುರ್ಗಮ್ಮ ದೇವಸ್ಥಾನ, ಸಿಬಿಟಿ, ಗಡಗಿ ಚೆನ್ನಪ್ಪ ವೃತ್ತ, ಬಿಎಸ್‌ಎನ್‌ಎಲ್ ನಗರ ಸಾರಿಗೆ ನಿಲುಗಡೆ ಬಿಂದು, ರೈಲ್ವೇ ವೃತ, ಹೆಚ್.ಆರ್.ಜಿ. ವೃತ್ತ, ರಂಗಮAದಿರ, ವಾಲ್ಮೀಕಿ ಭವನ, ಕೌಲ್ ಬಜಾರ್, ಟಿಬಿ ಸ್ಯಾನಿಟೋರಿಯಂ, ವಿನಾಯಕನಗರ.

ಎಸ್.ಪಿ. ಸರ್ಕಲ್- ಟ್ರಾಮ ಕೇರ್ ಸೆಂಟರ್(1 ಬಸ್): ದುರ್ಗಮ್ಮ ದೇವಸ್ಥಾನ, ಸಿಬಿಟಿ, ಗಡಗಿ ಚೆನ್ನಪ್ಪ ವೃತ್ತ, ಬಿಎಸ್‌ಎನ್‌ಎಲ್ ನಗರ ಸಾರಿಗೆ ನಿಲುಗಡೆ ಬಿಂದು, ರೈಲ್ವೇ ವೃತ, ಹೆಚ್.ಆರ್.ಜಿ. ವೃತ್ತ, ರಂಗಮAದಿರ, ವಾಲ್ಮೀಕಿ ಭವನ, ಕೌಲ್ ಬಜಾರ್.

ಎಸ್.ಪಿ. ಸರ್ಕಲ್-ಬಂಡಿಹಟ್ಟಿ(1 ಬಸ್): ದುರ್ಗಮ್ಮ ದೇವಸ್ಥಾನ, ಸಿಬಿಟಿ, ಗಡಗಿ ಚೆನ್ನಪ್ಪ ವೃತ್ತ, ಬಿಎಸ್‌ಎನ್‌ಎಲ್ ನಗರ ಸಾರಿಗೆ ನಿಲುಗಡೆ ಬಿಂದು, ರೈಲ್ವೇ ವೃತ, ಹೆಚ್.ಆರ್.ಜಿ. ವೃತ್ತ, ರಂಗಮ0ದಿರ, ವಾಲ್ಮೀಕಿ ಭವನ, ಕೌಲ್ ಬಜಾರ್, ಖೂನಿಠಾನ ಮಸೀದಿ, ಕೇಂದ್ರೀಯ ವಿದ್ಯಾಲಯ. ಓಪಿಡಿ-ಬಿಸಿಲಹಳ್ಳಿ(2 ಬಸ್): ಓಪಿಡಿ ಕ್ರಾಸ್, ವಾಸವಿ ಶಾಲೆ, ಫೈರ್ ಸ್ಟೇಷನ್, ಮಹಿಳಾ ಪೊಲೀಸ್ ಠಾಣೆ, ಎಸ್.ಪಿ. ಸರ್ಕಲ್, ದುರ್ಗಮ್ಮ ದೇವಸ್ಥಾನ, ಸಿಬಿಟಿ, ಗಡಗಿ ಚೆನ್ನಪ್ಪ ವೃತ್ತ, ಬಿಡಿಎ ಗ್ರೌಂಡ್, ಸಂಗಮ್ ವೃತ್ತ, ನೂತನ ಜಿಲ್ಲಾಡಳಿತ ಭವನ ಬಳ್ಳಾರಿ, ಪಟೇಲ್‌ನಗರ, ತಾರನಾಥ ಆಸ್ಪತ್ರೆ.

ಓಪಿಡಿ-ಹುಸೇನ್ ನಗರ(2 ಬಸ್): ಓಪಿಡಿ ಕ್ರಾಸ್, ವಾಸವಿ ಶಾಲೆ, ಫೈರ್ ಸ್ಟೇಷನ್, ಮಹಿಳಾ ಪೊಲೀಸ್ ಠಾಣೆ, ಎಸ್.ಪಿ. ಸರ್ಕಲ್, ದುರ್ಗಮ್ಮ ದೇವಸ್ಥಾನ, ಸಿಬಿಟಿ, ಗಡಗಿ ಚೆನ್ನಪ್ಪ ವೃತ್ತ, ಬಿಡಿಎ ಗ್ರೌಂಡ್, ಸಂಗಮ್ ವೃತ್ತ, ನೂತನ ಜಿಲ್ಲಾಡಳಿತ ಭವನ ಬಳ್ಳಾರಿ, ಪಟೇಲ್‌ನಗರ.

ಎಸ್.ಪಿ. ಸರ್ಕಲ್- ಪ್ರಶಾಂತನಗರ(1 ಬಸ್): ದುರ್ಗಮ್ಮ ದೇವಸ್ಥಾನ, ಸಿಬಿಟಿ, ಗಡಗಿ ಚೆನ್ನಪ್ಪ ವೃತ್ತ, ಬಿಎಸ್‌ಎನ್‌ಎಲ್ ನಗರ ಸಾರಿಗೆ ನಿಲುಗಡೆ ಬಿಂದು, ರೈಲ್ವೇ ವೃತ, ಹೆಚ್.ಆರ್.ಜಿ. ವೃತ್ತ, ರಂಗಮAದಿರ, ವಾಲ್ಮೀಕಿ ಭವನ, ಕೌಲ್ ಬಜಾರ್, ಬೆಳಗಲ್ ಕ್ರಾಸ್.

ಹೊಸ ಬಸ್ ನಿಲ್ದಾಣ- ಸಂಗನಕಲ್ಲು(2 ಬಸ್): ಬಂಡಿಮೋಟ್ ಕ್ರಾಸ್, ಕೇಂದ್ರೀಯ ಬಸ್ ನಿಲ್ದಾಣ, ಹೆಚ್.ಆರ್.ಜಿ ವೃತ್ತ, ರೈಲ್ವೇ ವೃತ, ಬಿಎಸ್‌ಎನ್‌ಎಲ್ ನಗರ ಸಾರಿಗೆ ನಿಲುಗಡೆ ಬಿಂದು, ಗಡಗಿ ಚೆನ್ನಪ್ಪ ವೃತ್ತ, ಸಿಬಿಟಿ, ದುರ್ಗಮ್ಮ ದೇವಸ್ಥಾನ, ಗಾಂಧಿನಗರ, ಗಾಂಧಿನಗರ ಮಾರ್ಕೆಟ್, ಕೆ.ಇ.ಬಿ, ಸದ್ಗುರು ಕಾಲೋನಿ, ಎ.ಬಿ. ವಾಜಪೇಯಿ ನಗರ.

*ನೂತನ ನಗರ ಸಾರಿಗೆ ಬಸ್ ಗಳ ವೈಶಿಷ್ಟತೆ:*

ಹೊಸ ನಗರ ಸಾರಿಗೆ 01 ಬಸ್ಸಿನ ವೆಚ್ಚ ರೂ.39 ಲಕ್ಷ. ಪ್ರಯಾಣಿಕರ ಅನುಕೂಲಕ್ಕಾಗಿ ನಿಲುಗಡೆ ಘೋಷಣೆ ಹಾಗೂ ದೊಡ್ಡ ಗಾತ್ರದ ಎಲ್‌ಇಡಿ ಡೆಷ್ಟಿನೇಷನ್ ಬೋರ್ಡ್ ಗಳನ್ನು ಅಳವಡಿಸಲಾಗಿದೆ. ಸ್ವಯಂ ಚಾಲಿತ ಪ್ರಯಾಣಿಕರು ಇಳಿಯುವ ಹಾಗೂ ಹತ್ತುವ ಬಾಗಿಲುಗಳನ್ನು ಅಳವಡಿಸಲಾಗಿದೆ. ಈ ಬಸ್‌ಗಳು 40 ಪ್ರಯಾಣಿಕ ಆಸನಗಳನ್ನು ಹೊಂದಿವೆ. ಎಲ್‌ಇಡಿ ಟ್ಯೂಬ್ ಲೈಟ್ ಅಳವಡಿಸುವುದರೊಂದಿಗೆ ಒಳಾಂಗಣವನ್ನು ಉತ್ತಮವಾಗಿ ವಿನ್ಯಾಸಗೊಳಿಸಲಾಗಿದೆ.

ಹೊಸ ನಗರ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆಗಾಗಿ ಒಟ್ಟು 04 ಸಿ.ಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಬಸ್‌ಗಳಲ್ಲಿ ಪ್ರಯಾಣಿಸುವ ಸಾರ್ವಜನಿಕ ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಆಧುನಿಕ ತಂತ್ರಜ್ಞಾನ ಹೊಂದಿರುವ ಸ್ವಯಂ ಚಾಲಿತ ಅಗ್ನಿ ನಂದಕ ಉಪಕರಣಗಳು, ರಿವರ್ಸ್ ಪಾರ್ಕಿಂಗ್ ಅಲರಾಮ್ ವ್ಯವಸ್ಥೆ ಹಾಗೂ ಲೋಕೆಶನ್ ಟ್ರಾಕಿಂಗ್ ಪ್ಯಾನಿಕ್ ಬಟನ್‌ಗಳನ್ನು ಅಳವಡಿಸಲಾಗಿದೆ.

ಹೊಸ ನಗರ ಬಸ್‌ಗಳಿಗೆ 187 ಎಚ್.ಪಿ ಸಾಮರ್ಥ್ಯದ ಬಿಎಸ್-6 ಎಂಜಿನ್‌ಗಳನ್ನು ಅಳವಡಿಸಲಾಗಿದೆ. ಈ ಬಸ್ ಗಳನ್ನು ಆಟೋಮೋಟಿವ್ ಇಂಡಸ್ಟಿç ಸ್ಟಾö್ಯಂಡರ್ಡ್-AIS-052 ಬಸ್ ಕೋಡ್ ನಂತೆ ನಿರ್ಮಿಸಲಾಗಿದೆ.

ಪ್ರಯಾಣಿಕರಿಗಿರುವ ಸೌಲಭ್ಯ :

ಪ್ರಸ್ತುತ ಕಾರ್ಯಾಚರಣೆಯಲ್ಲಿರುವ 15 ನಗರ ಸಾರಿಗೆಗಳೊಂದಿಗೆ ಹೊಸ 10 ನಗರ ಸಾರಿಗೆ ಬಸ್ ಗಳು ಸೇರಿ ಒಟ್ಟು 25 ನಗರ ಸಾರಿಗೆ ವಾಹನಗಳು ಬಳ್ಳಾರಿ ನಗರದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕಾರ್ಯಾಚರಣೆಯಲ್ಲಿರುತ್ತವೆ. ರೂ.50 ರ ಒಂದು ದಿನದ ಬಸ್ ಪಾಸ್ ಪಡೆದ ಸಾರ್ವಜನಿಕ ಪ್ರಯಾಣಿಕರು ಈ ನಗರ ಸಾರಿಗೆ ವಾಹನಗಳಲ್ಲಿ ಎಷ್ಟು ಬಾರಿ ಬೇಕಾದರೂ ನಗರಾದ್ಯಂತ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ನಗರ ಸಾರಿಗೆ ವಾಹನಗಳಲ್ಲಿ ರೂ.810 ಸಾಮಾನ್ಯ ಪ್ರಯಾಣಿಕರಿಗೆ, ಹಿರಿಯ ನಾಗರಿಕರಿಗೆ ರೂ.725 ಮಾಸಿಕ ಬಸ್ ಪಾಸ್ ಪಡೆದು ಒಂದು ತಿಂಗಳು ನಗರ ಸಾರಿಗೆ ವಾಹನಗಳಲ್ಲಿ ಎಷ್ಟು ಬಾರಿ ಬೇಕಾದರೂ ನಗರಾದ್ಯಂತ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಬೆಳಿಗ್ಗೆ 07.15 ಗಂಟೆಯಿAದ ರಾತ್ರಿ 08.30 ಗಂಟೆಯವರೆಗೆ ನಗರ ಸಾರಿಗೆ ವಾಹನಗಳ ಪ್ರತಿ ಸರತಿ ವಯಾ ರೈಲ್ವೇ ನಿಲ್ದಾಣದ ಮುಖಾಂತರ ಕಾರ್ಯಾಚರಣೆಯಲ್ಲಿರುತ್ತವೆ.

ಈ ನಗರ ಸಾರಿಗೆ ಸೇವೆಯನ್ನು ಬಳ್ಳಾರಿ ನಗರದ ಸಾರ್ವಜನಿಕ ಪ್ರಯಾಣಿಕರು ಸದುಪಯೋಗಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande