ನವ ಕರ್ನಾಟಕ ಯುವಶಕ್ತಿ ಸಂಘಟನೆ : ಮಹಾಶಿವರಾತ್ರಿಯ ಮನೋರಂಜನೆ
ಬಳ್ಳಾರಿ, 16 ಫೆಬ್ರವರಿ (ಹಿ.ಸ.) ಆ್ಯಂಕರ್: ಕನ್ನಡ ಸಂಘಟನೆಗಳು ಕನ್ನಡ ಭಾಷೆ ಮತ್ತು ನಾಡಿನ ಬಗ್ಗೆ ಹೋರಾಟವನ್ನು ನಡೆಸುವುದು ಸಾಮಾನ್ಯವಾಗಿದ್ದು, ಬಳ್ಳಾರಿಯಲ್ಲಿ ನವ ಕರ್ನಾಟಕ ಯುವಶಕ್ತಿ ಸಂಘಟನೆ 15 ವರ್ಷಗಳಿಂದ ಶಿವರಾತ್ರಿ ದಿನದಂದು `ಮಹಾಶಿವರಾತ್ರಿ''ಯನ್ನು ವಿಶೇಷವಾಗಿ ಆಚರಿಸುತ್ತಿ
ನವ ಕರ್ನಾಟಕ ಯುವಶಕ್ತಿ ಸಂಘಟನೆ : ಮಹಾಶಿವರಾತ್ರಿಯ ಮನೋರಂಜನೆ


ನವ ಕರ್ನಾಟಕ ಯುವಶಕ್ತಿ ಸಂಘಟನೆ : ಮಹಾಶಿವರಾತ್ರಿಯ ಮನೋರಂಜನೆ


ನವ ಕರ್ನಾಟಕ ಯುವಶಕ್ತಿ ಸಂಘಟನೆ : ಮಹಾಶಿವರಾತ್ರಿಯ ಮನೋರಂಜನೆ


ಬಳ್ಳಾರಿ, 16 ಫೆಬ್ರವರಿ (ಹಿ.ಸ.)

ಆ್ಯಂಕರ್: ಕನ್ನಡ ಸಂಘಟನೆಗಳು ಕನ್ನಡ ಭಾಷೆ ಮತ್ತು ನಾಡಿನ ಬಗ್ಗೆ ಹೋರಾಟವನ್ನು ನಡೆಸುವುದು ಸಾಮಾನ್ಯವಾಗಿದ್ದು, ಬಳ್ಳಾರಿಯಲ್ಲಿ ನವ ಕರ್ನಾಟಕ ಯುವಶಕ್ತಿ ಸಂಘಟನೆ 15 ವರ್ಷಗಳಿಂದ ಶಿವರಾತ್ರಿ ದಿನದಂದು `ಮಹಾಶಿವರಾತ್ರಿ'ಯನ್ನು ವಿಶೇಷವಾಗಿ ಆಚರಿಸುತ್ತಿರುವುದು ಸ್ವಾಗತಾರ್ಹ ಎಂದು ಕಮ್ಮರಚೇಡು ಮಠದ ಕಲ್ಯಾಣ ಸ್ವಾಮಿಗಳು ತಿಳಿಸಿದ್ದಾರೆ.

ನವ ಕರ್ನಾಟಕ ಯುವಶಕ್ತಿ ಸಂಘಟನೆ ಶಿವರಾತ್ರಿಯ ದಿನ ದೊಡ್ಡಮಾರ್ಕೆಟ್ ಹತ್ತಿರ ಏರ್ಪಡಿಸಿದ `ಮಹಾಶಿವರಾತ್ರಿ ಮನೋರಂಜನೆ'ಯ ಸಾನಿಧ್ಯವಹಿಸಿ ಅವರು ಮಾತನಾಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಎನ್. ವೀರಭದ್ರಗೌಡ ಅವರು, ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ಮಹಾಶಿವರಾತ್ರಿ ಮತ್ತು ಮನೋರಂಜನೆಯ ನೆಪದಲ್ಲಿ ನವ ಕರ್ನಾಟಕ ಯುವಶಕ್ತಿ ಸಂಘಟನೆಯು ಸಾಂಸ್ಕøತಿಕ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಸಿದ್ಮಲ್ ಮಂಜುನಾಥ್ ಮತ್ತು ತಂಡ ನಿರಂತರವಾಗಿ ಇಂಥಹಾ ಕಾರ್ಯಕ್ರಮಗಳನ್ನು ನಡೆಸಲಿ ಎಂದರು.

ನವಕರ್ನಾಟಕ ಯುವಶಕ್ತಿ ಸಂಘಟನೆಯ ಕಾರ್ಯಾಧ್ಯಕ್ಷ ಸಿದ್ಮಲ್ ಮಂಜುನಾಥ್ ಅವರು, ಮಹಾಶಿವರಾತ್ರಿ - ಮನೋರಂಜನೆಯ ನೆಪದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ದ್ವಂದ್ವ, ಅಶ್ಲೀಲ ಮತ್ತು ಮಾನಹಾನಿಕಾರಕ ಭಾಷೆಯನ್ನು ಬಳಸುವುದಿಲ್ಲ. ಅತ್ಯಂತ ಶಿಸ್ತು, ಸಂಪ್ರದಾಯಕವಾಗಿ ಶಿವರಾತ್ರಿಯನ್ನು ವೇದಿಕೆಯಲ್ಲಿ ಆಚರಿಸಲಾಗುತ್ತದೆ ಎಂದರು.

ಜೂನಿಯರ್ ಅಂಬರೀಶ್ ಅವರ ಮಿಮಿಕ್ರಿ ಮತ್ತು ಹಾಸ್ಯ ಪ್ರೇಕ್ಷಕರ ಕಣ್ಮನ ಸೆಳೆಯಿತು.

ಮುಖ್ಯ ಅತಿಥಿಗಳಾಗಿ ಡಾ. ದರೂರು ಪುರುಷೋತ್ತಮಗೌಡ, ಕರ್ನಾಟಕ ಯುವಕ ಸಂಘದ ಬಸವರಾಜ್, ನವ ಕರ್ನಾಟಕ ಯುವ ಶಕ್ತಿ ಸಂಘಟನೆಯ ಬಿ. ಗಿರಿಬಾಬು, ಹೆಚ್.ರವಿಕುಮಾರ, ವೀರನಗೌಡ, ಎಂ. ದೇವೇಶ್, ಸಂತೋಷ, ವಾಮದೇವಯ್ಯ, ನೀಲಕಂಠ (ಕಂಠಿ) ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande