ಕಾಯಕ, ದಾಸೋಹ, ಸಮಾನತೆ ಬಹಳ ಮುಖ್ಯ: ತೋಂಟದಾರ್ಯ ಸ್ವಾಮೀಜಿ
ಗದಗ, 16 ಫೆಬ್ರವರಿ (ಹಿ.ಸ.): ಆ್ಯಂಕರ್: ಹನ್ನೆರಡನೆಯ ಶತಮಾನದಲ್ಲಿ ಜನಸಾಮಾನ್ಯರ ಬದುಕು ಶೋಚನೀಯವಾಗಿತ್ತು. ಬಸವಾದಿ ಶರಣರ ಕಾಯಕ, ದಾಸೋಹ, ಸಮಾನತೆ ಇಂದು ಬಹಳ ಮುಖ್ಯ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು. ಗದಗ ನಗರದಲ್ಲಿಂದು ನಡೆದ ಲಿಂಗಾಯತ ಪ್ರಗತಿಶೀಲ ಸಂಘದ 2784 ನೇ ಶಿವಾನುಭವದ
ಫೋಟೋ


ಗದಗ, 16 ಫೆಬ್ರವರಿ (ಹಿ.ಸ.):

ಆ್ಯಂಕರ್:

ಹನ್ನೆರಡನೆಯ ಶತಮಾನದಲ್ಲಿ ಜನಸಾಮಾನ್ಯರ ಬದುಕು ಶೋಚನೀಯವಾಗಿತ್ತು. ಬಸವಾದಿ ಶರಣರ ಕಾಯಕ, ದಾಸೋಹ, ಸಮಾನತೆ ಇಂದು ಬಹಳ ಮುಖ್ಯ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಗದಗ ನಗರದಲ್ಲಿಂದು ನಡೆದ ಲಿಂಗಾಯತ ಪ್ರಗತಿಶೀಲ ಸಂಘದ 2784 ನೇ ಶಿವಾನುಭವದಲ್ಲಿ ಮಾತನಾಡಿದ ಶ್ರೀಗಳು, ಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದಿದೆ. ಒಂಬೈನೂರು ವರ್ಷಗಳ ಹಿಂದೆಯೇ ಸಾಮಾಜಿಕ ಕ್ರಾಂತಿಯನ್ನು ಶರಣರು ಮಾಡಿದ್ದಾರೆ. ಇನ್ನೂ ಮೇಲು ಕೀಳು ತಾರತಮ್ಯ ಮುಂದುವರೆದಿದೆ. ಸಾಮಾಜಿಕ ಅನಿಷ್ಠಗಳಿವೆ. ಇವುಗಳನ್ನು ಹೋಗಲಾಡಿಸಲು ಬಸವಣ್ಣನವರು ಇಷ್ಟಲಿಂಗ ದೀಕ್ಷೆ ಕೊಟ್ಟರು. ಮಹಿಳೆಯರಿಗೆ ಸ್ವಾತಂತ್ರ್ಯ ಕಲ್ಪಿಸಿಕೊಟ್ಟರು. ಅಂತರಜಾತೀಯ ವಿವಾಹ ಮಾಡಿದರು. ತಾರತಮ್ಯ ರಹಿತ ಸಮಾಜ ನಿರ್ಮಾಣ ಮಾಡಿದರು ಎಂದು ಶ್ರೀಗಳು ಮಾತನಾಡಿದರು.

ಉಪನ್ಯಾಸಕರಾಗಿ ಆಗಮಿಸಿದ ಶಿರಹಟ್ಟಿಯ ಎಫ್.ಎಂ. ಡಬಾಲಿ ಕಾಲೇಜಿನ ಬಿ.ಆಯ್. ಶಿರುಂದ ಮಾತನಾಡಿ, ರಾಜ್ಯ ಸಾಮ್ರಾಜ್ಯದ ಕಾಲದಲ್ಲಿ ರಕ್ಷಣೆಗಾಗಿ, ಕಾಲ್ದಳ, ನೌಕಾದಳ, ಗಜದಳ ನಿಂತಿರುತ್ತಿದ್ದವು. ಹಾಗೆಯೇ ಸಮಸಮಾಜದ ರಕ್ಷಣೆಗಾಗಿ ಅಂದು ಶರಣರು, ಇಂದು ಮಠಾಧೀಶರು, ಜಗದ್ಗುರುಗಳು ಅವಿರತವಾಗಿ ಪರಿಶ್ರಮಿಸುತ್ತಿದ್ದಾರೆ. ತನ್ನನ್ನು ತಾನು ಅರಿತು, ಅಹಂಕಾರವನ್ನು ಮರೆತು, ನೈಜ ಬದುಕಿನ ವ್ಯಕ್ತಿತ್ವವೇ ಶರಣ. ಅತ್ಯಲ್ಪ ಅವಧಿಯಲ್ಲಿ ಸಮಾಜದಲ್ಲಿನ ಮೂಲಭೂತ ಮೌಢ್ಯದಲ್ಲಿ ಬದಲಾವಣೆ ತರುವುದೇ ಕ್ರಾಂತಿ ಎಂದರು. ಕಲ್ಲು ನಾಗರ ಮನೆಗೆ ತಂದರೆ ನಡೆಯುತ್ತಿದೆ. ನಿಜ ನಾಗರ ತಾನಾಗಿಯೇ ಬಂದರೆ, ನಡೆಯುವುದಿಲ್ಲ.ಭಾವಿಯನ್ನು ತೋಡಿ ನೀರು ಭರಿಸಲು ಅಸ್ಪ್ರಶ್ಯ ಬೇಕು. ಅದೇ ಬಾವಿಯ ನೀರು ಕುಡಿಯಲು ಬೇಡ. ಗ್ರಹಣ ಬಂದಾಗ ನೀರು ಚೆಲ್ಲುತ್ತಾರೆ ಆದರೆ ತುಪ್ಪ ಚಲ್ಲುವುದಿಲ್ಲ ಏಕೆ. ಇಂಥ ಅನೇಕ ಮೌಢ್ಯಗಳನ್ನು ತೊಡೆದು ಹಾಕಲು ಶರಣರು ವಚನಗಳ ಮೂಲಕ ಸಾಮಾಜಿಕ ಕಲ್ಯಾಣ ಮಾಡಲು ಕ್ರಾಂತಿ ಮಾಡಿದರು ಎಂದು ಅರ್ಥಪೂರ್ಣವಾಗಿ ಮಾತನಾಡಿದರು.

ವಚನ ಸಂಗೀತ ಸೇವೆಯನ್ನು ಗುರುನಾಥ್ ಸುತಾರ ಹಾಗೂ ಮೃತ್ಯುಂಜಯ ಹಿರೇಮಠ ನಡೆಸಿಕೊಟ್ಟರು. ಧಾರ್ಮಿಕ ಗ್ರಂಥಪಠಣವನ್ನು ಕುಮಾರಿ ಮೇಘಾ ಚಂದಪ್ಪನವರ, ವಚನ ಚಿಂತನವನ್ನು ಪೂಜಾ ಹೊನ್ನಳ್ಳಿ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಚನ್ನಬಸಪ್ಪ ಶರಣಬಸಪ್ಪ ನಂದಿಹಾಳ ಸಿದ್ದಲಿಂಗೇಶ್ವರ ಆಯಿಲ್ ಮಿಲ್ ಗಜೇಂದ್ರಗಡ ಇವರು ವಹಿಸಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ ಉಪಾಧ್ಯಕ್ಷ ಡಾ ಉಮೇಶ ಪುರದ ಹಾಗೂ ವಿದ್ಯಾ ಪ್ರಭು ಗಂಜಿಹಾಳ ಕಾರ್ಯದರ್ಶಿ ವೀರಣ್ಣ ಗೋಟಡಕಿ ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ ಹಾಗೂ ನಾಗರಾಜ್ ಹಿರೇಮಠ ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹಚೇರ್ಮನ್ ಶಿವಾನಂದ ಹೊಂಬಳ ಹಾಗೂ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರ್ಮನ್ ಐ ಬಿ ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande