ತೋರಣಗಲ್ಲು ಜೆಎಸ್ ಡಬ್ಲ್ಯೂ ; ಶಾಲಾ ಶೌಚಾಲಯ ನಿರ್ಮಾಣ
ತೋರಣಗಲ್ಲು, 16 ಫೆಬ್ರವರಿ (ಹಿ.ಸ.) : ಆ್ಯಂಕರ್ : ಜೆ ಎಸ್ ಡಬ್ಲ್ಯೂ ಪೇಂಟ್ಸ್ ಮತ್ತು ಜೆ ಎಸ್ ಡಬ್ಲ್ಯೂ ಫೌಂಡೇಶನ್ ಕಾಪೋರೇಟ್ ಪರಿಸರ ಜವಾಬ್ದಾರಿ 2025 -2026 ರ ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳ ಅಡಿಯಲ್ಲಿ ತೋರಣಗಲ್ಲು ಅಂಕಾಳಮ್ಮ ವಾರ್ಡ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ
ತೋರಣಗಲ್ಲು : ಜೆಎಸ್ ಡಬ್ಲ್ಯೂ : ಶಾಲಾ ಶೌಚಾಲಯ ನಿರ್ಮಾಣ


ತೋರಣಗಲ್ಲು : ಜೆಎಸ್ ಡಬ್ಲ್ಯೂ : ಶಾಲಾ ಶೌಚಾಲಯ ನಿರ್ಮಾಣ


ತೋರಣಗಲ್ಲು : ಜೆಎಸ್ ಡಬ್ಲ್ಯೂ : ಶಾಲಾ ಶೌಚಾಲಯ ನಿರ್ಮಾಣ


ತೋರಣಗಲ್ಲು, 16 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಜೆ ಎಸ್ ಡಬ್ಲ್ಯೂ ಪೇಂಟ್ಸ್ ಮತ್ತು ಜೆ ಎಸ್ ಡಬ್ಲ್ಯೂ ಫೌಂಡೇಶನ್ ಕಾಪೋರೇಟ್ ಪರಿಸರ ಜವಾಬ್ದಾರಿ 2025 -2026 ರ ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳ ಅಡಿಯಲ್ಲಿ ತೋರಣಗಲ್ಲು ಅಂಕಾಳಮ್ಮ ವಾರ್ಡ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಶೌಚಾಲಯ ನಿರ್ಮಾಣ ಮಾಡಲಾಗಿದ್ದು ಇದರ ಉದ್ಘಾಟನಾ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.

ಶೌಚಾಲಯ ಉದ್ಘಾಟನೆ ಮಾಡಿ ಮಾತನಾಡಿದ ಜೆ ಎಸ್ ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ನ ಹಿರಿಯ ಉಪಾಧ್ಯಕ್ಷ ಸುನಿಲ್ ರಾಲ್ಫ್ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಶೌಚಾಲಯ ನಿರ್ಮಿಸಿದ್ದು ಶಾಲಾ ಆಡಳಿತ ಮತ್ತು ಎಸ್ ಡಿ ಎಂ ಸಿ ಸದಸ್ಯರು ನಿರ್ವಹಣೆ ಮಾಡಿಕೊಂಡು ಉತ್ತಮ ಶಿಕ್ಷಣ ಒದಗಿಸುವಲ್ಲಿ ಸಹಕರಿಸಬೇಕು ಎಂದು ತಿಳಿಸಿದರು

ಶಾಲಾ ಮುಖ್ಯ ಶಿಕ್ಷಕ ಬಂದೇನವಾಜ್ ಮಾತನಾಡಿ ಪ್ರಸ್ತುತ 600 ಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದು ಶೌಚಾಲಯ ನಿರ್ಮಾಣದಿಂದ ವಿದ್ಯಾರ್ಥಿಗಳು ಆವರಣ ಬಿಟ್ಟು ಹೋಗುವುದು ತಪ್ಪುತ್ತದೆ ಮತ್ತು ವಿಶೇಷವಾಗಿ ಹೆಣ್ಣು ಮಕ್ಕಳ ಸ್ವಚ್ಛತೆ ಹಾಗೂ ಸುರಕ್ಷತೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಜೆ ಎಸ್ ಡಬ್ಲ್ಯೂ ಫೌಂಡೇಶನ್ ದಕ್ಷಿಣ ವಲಯ ಮುಖ್ಯಸ್ಥ ಪೆದ್ದಣ್ಣ ಬೀಡಲಾ, ಶ್ರೀನಿವಾಸ್ ರಾವ್, ಭವಾನಿ ಸಿಂಗ್ ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷ ಭಗವಂತಪ್ಪ, ವಾರ್ಡ್ ಸದಸ್ಯ ಪುಲಿಕೊಂಡ ಹಾಗು ಮದೀನ ಕಂಟ್ರಾಕ್ಟರ್ ಶುಭಾನ್ ಭಾಷಾ ಮತ್ತು ಶಿಕ್ಷಕರು ಹಾಗು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande