ನಿಖಿಲ್ ನೇತೃತ್ವದಲ್ಲಿ ಸಭೆ
ವಿಜಯಪುರ, 16 ಫೆಬ್ರವರಿ (ಹಿ.ಸ.) : ಆ್ಯಂಕರ್ : ವಿಜಯಪುರ ಜಿಲ್ಲೆಯ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯದ ಭವನದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಕಿತ್ತೂರು ಕರ್ನಾಟಕ ವಿಭಾಗದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಇದೇ ತಿಂಗಳು ಫೆ.27 ರಂದು ನಡೆಯಲಿರುವ ಕಿತ್ತೂ
ಸಭೆ


ವಿಜಯಪುರ, 16 ಫೆಬ್ರವರಿ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲೆಯ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯದ ಭವನದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಕಿತ್ತೂರು ಕರ್ನಾಟಕ ವಿಭಾಗದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಇದೇ ತಿಂಗಳು ಫೆ.27 ರಂದು ನಡೆಯಲಿರುವ ಕಿತ್ತೂರು ಕರ್ನಾಟಕ ಭಾಗದ ಪಕ್ಷದ ರಜತ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿ, ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಿದರು.

ಈ ಸಂದರ್ಭದಲ್ಲಿ ಕೋರ್ ಕಮಿಟಿ ಅಧ್ಯಕ್ಷರಾದ ಜೆ.ಕೆ.ಕೃಷ್ಣಾರೆಡ್ಡಿ ಅವರು, ಮಾಜಿ ಸಚಿವರಾ ವೆಂಕಟರಾವ್ ನಾಡಗೌಡ ಅವರು, ದೇವರಹಿಪ್ಪರಗಿ ಶಾಸಕರಾದ ರಾಜುಗೌಡ ಪಾಟೀಲ್‌ ಅವರು, ಮಾಜಿ ಶಾಸಕರಾದ ದೇವಾನಂದ ಚವ್ಹಾಣ್ ಅವರು,ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಜ್ಯೋತಿ ಪ್ರಕಾಶ್ ಮಿರ್ಜಿ, ಪಕ್ಷದ ಮುಖಂಡರಾದ ಬಿ.ಡಿ. ಪಾಟೀಲ್, ಸೋಮನಗೌಡ ಪಾಟೀಲ್, ಶ್ರೀಮತಿ ಸುನೀತಾ ಚವ್ಹಾಣ, ಶ್ರೀಮತಿ ಅಪ್ಸರಾಬೇಗಂ ಛಪ್ಪರಬಂದ, ಮಲ್ಲಿಕಾರ್ಜುನ್ , ಜಿಲ್ಲಾಧ್ಯಕ್ಷರಾದ ಶ್ರೀ ಬಸನಗೌಡ ಮಾಡಗಿ, ಶಂಕರ ಮಾಡಲಗಿ, ಕೆ.ಪಿ. ಮಗೆಣ್ಣನವರ, ಹನಮಂತ ಮಾವಿನಮರದ,ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande