ಜನ ವಿರೋಧಿ ಕಾರ್ಯಗಳೇ ಸರಕಾರದ ಸಾಧನೆ: ಗೋವಿಂದಗೌಡ್ರ
ಗದಗ, 16 ಫೆಬ್ರವರಿ (ಹಿ.ಸ.) ಆ್ಯಂಕರ್: ಸಾವಿರ ದಿನಗಳ ಸಾಧನೆ ಎಂದು ಲಕ್ಷಾಂತರ ರೂಪಾಯಿಗಳ ತೆರಿಗೆ ಹಣವನ್ನು ಖರ್ಚು ಮಾಡಿ ಸಮಾವೇಶ ಮಾಡಿದ್ದು ಯಾವ ಪುರುಷಾರ್ಥಕ್ಕೆ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್ ಗೋವಿಂದಗೌಡ್ರ ಸರಕಾರದ ಸಾಧನೆ ಸಮಾವೇಶವನ್ನು ಲೇವಡಿ ಮಾಡಿದ್ದಾರೆ. ಈ ಕಾಂಗ್ರೆ
ಫೋಟೋ


ಗದಗ, 16 ಫೆಬ್ರವರಿ (ಹಿ.ಸ.)

ಆ್ಯಂಕರ್: ಸಾವಿರ ದಿನಗಳ ಸಾಧನೆ ಎಂದು ಲಕ್ಷಾಂತರ ರೂಪಾಯಿಗಳ ತೆರಿಗೆ ಹಣವನ್ನು ಖರ್ಚು ಮಾಡಿ ಸಮಾವೇಶ ಮಾಡಿದ್ದು ಯಾವ ಪುರುಷಾರ್ಥಕ್ಕೆ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್ ಗೋವಿಂದಗೌಡ್ರ ಸರಕಾರದ ಸಾಧನೆ ಸಮಾವೇಶವನ್ನು ಲೇವಡಿ ಮಾಡಿದ್ದಾರೆ.

ಈ ಕಾಂಗ್ರೆಸ್ ಸರ್ಕಾರ ಸುಳ್ಳಿನ ಮೇಲೆ ಅಧಿಕಾರಕ್ಕೆ ಬಂದು ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಾ ಬಂದಿದ್ದಾರೆ, ಶ್ರೀಸಾಮಾನ್ಯನಿಗೆ ಬೆಲೆ ಏರಿಕೆ ಹೊರೆಯನ್ನು ಹೊರಿಸಿ ತೆರಿಗೆ ಹಣದಲ್ಲಿ ಸರಕಾರದ ಈ ಡೊಂಬರಾಟ ಯಾರಿಗೂ ಮನಸ್ಸಿಗೆ ಬಂದಿಲ್ಲ. ರೈತ ಸಂಕಟದಲ್ಲಿದ್ದಾನೆ, ಕೈಗಾರಿಕೆಗಳು ಸಂಕಟದಲ್ಲಿವೆ, ಯುವಕರು ಉದ್ಯೋಗ ಸಿಗದೆ ಸಂಕಟದಲ್ಲಿದ್ದಾರೆ, ಮಹಿಳೆಯರ ವಿರುದ್ಧ ದೌರ್ಜನ್ಯಗಳು ಈ ಸರಕಾರದಲ್ಲಿ ಹೆಚ್ಚಾಗಿ ಮಹಿಳೆಯರು ಕೂಡ ಸಂಕಟದಲ್ಲಿದ್ದಾರೆ.

ಅಭಿವೃದ್ಧಿಗೆ ಹಣದ ಕೊರತೆ ಹಾಗೂ ಸಾಮಾಜಿಕ ಕಾರ್ಯಗಳು ಕೂಡ ಈ ಸರಕಾರದಲ್ಲಿ ಹಣ ಇಲ್ಲದೆ ಎಲ್ಲರೂ ಸಂಕಟಕ್ಕೆ ಸಿಲುಕಿದ್ದಾರೆ ಇನ್ನು ಯಾವ ಪುರುಷಾರ್ಥಕ್ಕೆ ಈ ಸಾಧನೆಯ ಸಮಾವೇಶ ವೆಂದು ಅವರು ಪ್ರಶ್ನಿಸಿದ್ದಾರೆ. ಎಲ್ಲಾ ಇಲಾಖೆಗಳಲ್ಲಿ ಹಗರಣಗಳು ಹಾಗೂ ಲಂಚಾವತಾರ ತಾಂಡವ ಆಡುತ್ತಿದ್ದು ಇವುಗಳಿಗೆ ಲಗಾಮು ಹಾಕದಿರುವುದೇ ಈ ಸರ್ಕಾರದ ಸಾಧನೆ ದುಂದು ವೆಚ್ಚ ಮಾಡಿ ಸಮಾವೇಶವನ್ನು ಮಾಡಿರುವುದನ್ನು ಜೆಡಿಎಸ್ ಪಕ್ಷದ ರಾಜ್ಯ ವಕ್ತರ ವೆಂಕನಗೌಡ ಆರ್ ಗೋವಿಂದಗೌಡ್ರ ಖಂಡಿಸಿದ್ದಾರೆ.

ಹಗರಣಗಳಲ್ಲಿ ಸಿಲುಕಿರುವ ಮಂತ್ರಿಗಳನ್ನು ರಕ್ಷಿಸುವುದರಲ್ಲಿ ಹಾಗೂ ಅಧಿಕಾರಿಗಳನ್ನು ಬಲಿ ಕೊಡುವುದರಲ್ಲಿ ಸಾವಿರ ದಿನಗಳು ಕಳೆದು ಹೋಗಿವೆ ವಿರೋಧ ಪಕ್ಷದಲ್ಲಿದ್ದಾಗ ಎಲ್ಲ ಮಂತ್ರಿಗಳ ರಾಜೀನಾಮೆಯನ್ನು ಕೇಳುತ್ತಿದ್ದ ಈಗಿನ ಮುಖ್ಯಮಂತ್ರಿಗಳು ತಮ್ಮ ಸರಕಾರದ ಮಂತ್ರಿಗಳ ವಿರುದ್ಧ ಲಂಚದ ಹಗರಣದ ಆರೋಪಗಳು ಬಂದರೂ ಕೂಡ ಜಾಣ ಕುರುಡುತನ ವೈಸುತ್ತಿದ್ದಾರೆ ಎಂದು ಎಂದು ಜಿಲ್ಲಾ ಪಂಚಾಯತನ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ವಿರಅಣ್ಣಗೌಡ ನಾಡಗೌಡ್ರ ಸರ್ಕಾರದ ಈ ಸಾಧನಾ ಸಮಾವೇಶವನ್ನು ತರಾಟೆಗೆ ತೆಗೆದುಕೊಂಡರು.

ಗೋವಿಂದಗೌಡರ ಅಪಾರ್ಟ್ಮೆಂಟ್ನ ಸಭಾಂಗಣದಲ್ಲಿ ನಡೆದ ಗದಗ ಜಿಲ್ಲಾ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಈ ನಾಯಕರು ಮಾತನಾಡಿದರು ವೇದಿಕೆಯ ಮೇಲೆ ಬಸವರಾಜ ಅಪ್ಪಣ್ಣವರ, ಜಿಕೆ ಕೊಳ್ಳಿಮಠ, ಪ್ರಪುಲ ಪುಣೇಕರ, ಪ್ರಭುರಾಜಗೌಡ ಪಾಟೀಲ, ರಮೇಶ್ ಹುಣಸಿಮರಾಜ, ಸಂತೋಷ್ ಪಾಟೀಲ, ರಾಜಣ್ಣ ಸಂಶಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಗದಗ್ ಬೆಟಿಗೇರಿಯ ವಿವಿಧ ವಾರ್ಡುಗಳಿಂದ ಯುವಕರು ಹಾಗೂ ಮಹಿಳೆಯರು ಪಕ್ಷಕ್ಕೆ ಸೇರ್ಪಡೆಗೊಂಡರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande