ಪ್ರತಿ ಮಗುವಿನಲ್ಲೂ ಪ್ರತಿಭೆ ಇದೆ : ಶ್ರೀಮತಿ ಇಂದಿರಾ ಪ್ರಿಯದರ್ಶಿನಿ
ಬಳ್ಳಾರಿ, 16 ಫೆಬ್ರವರಿ (ಹಿ.ಸ.) : ಆ್ಯಂಕರ್ : ಪ್ರತಿ ಮಗುವಿನಲ್ಲೂ ಅಸಾಧಾರಣ ಪ್ರತಿಭೆ ಇದ್ದು, ಅದನ್ನು ಗುರುತಿಸಿ ಬೆಳೆಸುವುದು ಶಿಕ್ಷಕರ ಹಾಗೂ ಪೆÇೀಷಕರ ಜವಾಬ್ದಾರಿ ಎಂದು ಶ್ರೀಮತಿ ಇಂದಿರಾ ಪ್ರಿಯದರ್ಶಿನಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶ್ರೀ ವಾಸವಿ ವಿದ್ಯಾಲಯದಲ್ಲಿ ಯುಕೆಜಿ
ಪ್ರತಿ ಮಗುವಿನಲ್ಲೂ ಪ್ರತಿಭೆ ಇದೆ : ಶ್ರೀಮತಿ ಇಂದಿರಾ ಪ್ರಿಯದರ್ಶಿನಿ


ಬಳ್ಳಾರಿ, 16 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಪ್ರತಿ ಮಗುವಿನಲ್ಲೂ ಅಸಾಧಾರಣ ಪ್ರತಿಭೆ ಇದ್ದು, ಅದನ್ನು ಗುರುತಿಸಿ ಬೆಳೆಸುವುದು ಶಿಕ್ಷಕರ ಹಾಗೂ ಪೆÇೀಷಕರ ಜವಾಬ್ದಾರಿ ಎಂದು ಶ್ರೀಮತಿ ಇಂದಿರಾ ಪ್ರಿಯದರ್ಶಿನಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶ್ರೀ ವಾಸವಿ ವಿದ್ಯಾಲಯದಲ್ಲಿ ಯುಕೆಜಿ ವಿದ್ಯಾರ್ಥಿಗಳ ಗ್ರಾಜ್ಯುಏಷನ್ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಾಥಮಿಕ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿದಲ್ಲಿ ಅವರು ಭವಿಷ್ಯದಲ್ಲಿ ಉನ್ನತ ಸಾಧನೆಗಳನ್ನು ಮಾಡಲು ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿದ್ದ ಶ್ರೀಮತಿ ಸೊರಪ್ಪು ಲಲಿತಾ ಅವರು, ಮಕ್ಕಳನ್ನು ಪ್ರೀತಿಯಿಂದ ಪೆÇ್ರೀತ್ಸಾಹಿಸಿದಲ್ಲಿ ಅವರು ಕಲಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಅಲ್ಲದೇ, ಗುರಿಗಳನ್ನು ತಲುಪುವಲ್ಲಿ ಪ್ರಯತ್ನಿಸುತ್ತಾರೆ ಎಂದರು.

ಮುಖ್ಯೋಪಾಧ್ಯರಾದ ವೀರೇಶ್ .ಯು. ಅವರು, ವಿದ್ಯಾರ್ಥಿಗಳಲ್ಲಿ ಚಿಕ್ಕ ವಯಸ್ಸಿನಿಂದಲೇ ಆತ್ಮವಿಶ್ವಾಸ, ಸೃಜನಶೀಲತೆ ಹಾಗೂ ಮೌಲ್ಯಗಳನ್ನು ಬೆಳೆಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಸಾಕಷ್ಟು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಸ್ಪೀಕ್ ಅಂಡ್ ಶೈನ್ ಇನ್ ಸ್ಟಾಪೇಸ್ಟ್ -2026 ಸ್ಫರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಚೆಕ್ ವಿತರಣೆ ಮಾಡಲಾಯಿತು.

ವಾಸವಿ ಎಜ್ಯುಕೇಷನ್ ಟ್ರಸ್ಟ್ ನ ಅಧ್ಯಕ್ಷರಾದ ವಿಠ್ಠ ಕೃಷ್ಣಕುಮಾರ್, ಕಾರ್ಯದರ್ಶಿಗಳಾದ ಪಿ.ಎನ್. ಸುರೇಶ್ ವೇದಿಕೆಯಲ್ಲಿದ್ದರು. ಕಿಂಡರ್ ಗಾರ್ಟನ್ ವಿದ್ಯಾರ್ಥಿಗಳು ಸಾಂಸ್ಕøತಿಕ ಚಟುವಟಿಕೆಗಳನ್ನು ಪ್ರದರ್ಶನ ಮಾಡಿದರು. ಶ್ರೀಮತಿ ಜಬೀನಾ ಬೇಗಂ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande