
ಕೊಪ್ಪಳ, 16 ಫೆಬ್ರವರಿ (ಹಿ.ಸ.)
ಆ್ಯಂಕರ್: ೧೦೯ನೇ ದಿನದ ಬಲ್ಡೋಟ ಕಾರ್ಖಾನೆ ವಿಸ್ತರಣೆ ವಿರೋಧಿ ಧರಣೆ ಬೆಂಬಲಿಸಿ ಧಾರವಾಡ ನಿವಾಸಿ, ಸಾಹಿತಿ ಮಲ್ಲಿಕಾರ್ಜುನ ಹಿರೇಮಠ ಮಾತನಾಡಿ, ನಮ್ಮ ಆರೋಗ್ಯ ನಮ್ಮ ಜೀವ ಉಳಿಸಿಕೊಳ್ಳಲು ಸುದೀರ್ಘ ಕಾಲದ ಹೋರಾಟ ಅನಿವಾರ್ಯವಾಗಿದೆ. ಉದ್ಯೋಗ ಎನ್ನುವುದು ನಮ್ಮ ಜೀವ, ಆರೋಗ್ಯ ಕೆಡಿಸುವಂತಿರಬಾರದು. ಅಭಿವೃದ್ಧಿ ಬಗ್ಗೆ ಮಾತನಾಡುವ ಜನರು ಇಲ್ಲಿನ ನೈಜ ಸ್ಥಿತಿ ತಿಳಿಯಬೇಕು. ಇಲ್ಲಿರುವ ಜನರು ಹೋರಾಟ ಮಾಡಿ ಜೀವ ಉಳಿಸಿಕೊಳ್ಳುವುದು ಅನಿವಾರ್ಯ ಎಂದರು.
ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ್ ಮಾತನಾಡಿ, ಮುಂದಿನ ಭವಿಷ್ಯದ ದೃಷ್ಟಿಯಿಂದ ಫೆಬ್ರವರಿ ೨೪ ರ ಬಂದ್ ಯಶಸ್ವಿ ಮಾಡಬೇಕು, ಸರ್ಕಾರದ ಮೇಲೆ ಒತ್ತಡ ಹೇರಲು ಇದೊಂದು ನಮಗಿರುವ ಮಾರ್ಗ, ಜನರು ಬೀದಿಗೆ ಬಂದು ವಾಣಿಜ್ಯ ಚಟುವಟಿಕೆಗಳನ್ನು ಒಂದು ದಿನದ ಮಟ್ಟಿಗೆ ಸ್ವಯಂ ಪ್ರೇರಣೆಯಿಂದ ಸ್ಥಗಿತ ಮಾಡಿ ಹೋರಾಡೋಣ ಎಂದರು.
ಧರಣಿ ನೇತೃತ್ವವಹಿಸಿದ್ದ ಮತ್ತೊಬ್ಬ ಹಿರಿಯ ಸಾಹಿತಿ ಎ.ಎಂ.ಮದರಿ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಎಸ್.ಬಿ.ರಾಜೂರು, ವೀರಣ್ಣ ಹುರಕಡ್ಲಿ, ಶಾಂತಯ್ಯ ಅಂಗಡಿ, ಈರಯ್ಯಸ್ವಾಮಿ ಸಾಲಿಮಠ, ಗಂಗಾಧರ ಖಾನಾಪೂರ, ಇಂದುಮತಿ ಬ್ಯಾಲಹುಣಸಿ, ಮಲ್ಲಪ್ಪ ಮಾಲಿಪಾಟೀಲ, ಜಿ.ಬಿ.ಪಾಟೀಲ, ಎಲ್.ಎಫ್.ಪಾಟೀಲ, ಬಿ.ಜಿ.ಕರಿಗಾರ, ಮೂಕಪ್ಪ ಮೇಸ್ತ್ರಿ ಬಸಾಪುರ, ರಾಜಶೇಖರ ಏಳುಬಾವಿ, ಸೋಮಶೇಖರ್ ಆರಾಳ, ಸುಭಾನ್ ಸಾಬ್ ನೀರಲಗಿ, ಮಂಜುನಾಥ ಹಂಡಿ, ಗವಿಸಿದ್ದಪ್ಪ ಮಾಲಿಪಾಟೀಲ, ಮಹಾದೇವಪ್ಪ ಮಾವಿನಮಾಡು, ನಾಗರಾಜ ಕುಷ್ಟಗಿ, ಶಿವಪ್ಪ ಜಲ್ಲಿ, ಮಖ್ಬುಲ್ ರಾಯಚೂರು ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್