ಬಳ್ಳಾರಿಯ ಕೊಟ್ಟೂರುಸ್ವಾಮಿ ಮಠದಲ್ಲಿ ಸೋಮವಾರ ಕಾರ್ತಿಕೋತ್ಸವ
ಬಳ್ಳಾರಿ, 28 ನವೆಂಬರ್ (ಹಿ.ಸ.) ಬಳ್ಳಾರಿಯ ಕೊಟ್ಟೂರುಸ್ವಾಮಿ ಮಠದಲ್ಲಿ ನವೆಂಬರ್ 30ರ ಸೋಮವಾರ ಸಂಜೆ ಶ್ರೀ ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಹಾಗೂ 15ನೇ ಶಿವಾನುಭವ ಸಂಪದ ನಡೆಯಲಿದೆ. ಕೊಟ್ಟೂರುಸ್ವಾಮಿ ಮಠದ ವ್ಯವಸ್ಥಾಪಕರಾದ ದೇವೇಂದ್ರಗೌಡ ಅವರು ಈ ಮಾಹಿತಿಯನ್ನು ನೀಡಿದ್ದು, ಜಗದ್ಗುರು ಕೊಟ್ಟೂ
ಬಳ್ಳಾರಿಯ ಕೊಟ್ಟೂರುಸ್ವಾಮಿ ಮಠದಲ್ಲಿ ಸೋಮವಾರ ಕಾರ್ತಿಕೋತ್ಸವ


`ಬಸವಮಂಟಪ’ ಮನುಕುಲಕ್ಕೆ ದ್ರೋಹ : ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು


ಬಳ್ಳಾರಿ, 28 ನವೆಂಬರ್ (ಹಿ.ಸ.)

ಬಳ್ಳಾರಿಯ ಕೊಟ್ಟೂರುಸ್ವಾಮಿ ಮಠದಲ್ಲಿ ನವೆಂಬರ್ 30ರ ಸೋಮವಾರ ಸಂಜೆ ಶ್ರೀ ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಹಾಗೂ 15ನೇ ಶಿವಾನುಭವ ಸಂಪದ ನಡೆಯಲಿದೆ.

ಕೊಟ್ಟೂರುಸ್ವಾಮಿ ಮಠದ ವ್ಯವಸ್ಥಾಪಕರಾದ ದೇವೇಂದ್ರಗೌಡ ಅವರು ಈ ಮಾಹಿತಿಯನ್ನು ನೀಡಿದ್ದು, ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸೋಮವಾರ ಸಂಜೆ 6 ಗಂಟೆಗೆ ಶ್ರೀಮಠದಲ್ಲಿ ಶಿವಾನುಭವ ಸಂಪದ ಹಾಗೂ ಶ್ರೀ ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕೋತ್ಸವವು ನಡೆಯಲಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಗದಗ ಜಿಲ್ಲಾ ಅಧ್ಯಕ್ಷರಾಗಿರುವ ಶ್ರೀಮತಿ ಬಸವರಾಜ ಮೇಟಿ ಅವರು ಮುಖ್ಯ ಉಪನ್ಯಾಸಕರಾಗಿ `ವಚನಗಳು ಬದುಕಿನ ದಾರಿ ದೀಪಗಳು' ವಿಷಯದ ಉಪನ್ಯಾಸ ನೀಡಲಿದ್ದಾರೆ. ಬಿಎಂಸಿಆರ್ಸಿಯ ಉಪನ್ಯಾಸಕರಾಗಿರುವ ಶ್ರೀಮತಿ ಡಾ. ಉಮಾಮಹೇಶ್ವರಿ ಎಸ್. ಹಾಗೂ ಶ್ರೀಮತಿ ಡಾ. ಮೇಧಿನಿ ಅಲ್ಲಂ ಅವರು ಮುಖ್ಯ ಅತಿಥಿಗಳಾಗಿದ್ದಾರೆ.

ಜ್ಹೀ ಕನ್ನಡ ವಾಹಿನಿಯ ಸರಿಗಮಪ ಗಾಯಕಿ ಕುಮಾರಿ ಜಯಲಕ್ಷ್ಮಿ ಎಂ.ಎಸ್ ಅವರು ಸಂಗೀತ ಸೇವೆ ಸಲ್ಲಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande