ಕನಕದಾಸರಿಗೆ ಜಾತಿಯ ಬಣ್ಣ ಹಚ್ಚಬೇಡಿ:ಸಿಎಂ ಡಿ.ಕೆ. ಶಿವಕುಮಾರ್
ಕನಕದಾಸರಿಗೆ ಜಾತಿಯ ಬಣ್ಣ ಹಚ್ಚಬೇಡಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಹಾವೇರಿಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು, ವರದಾ-ಬೇಡ್ತಿ ನದಿ ಜೋಡಣೆ ಹಾಗೂ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು, ಕಾಗಿನೆಲೆ ಮಾರ್ಗಮಧ್ಯೆ ಸಂಚಾರಿ ಕುರಿಗಾಹಿಗಳನ್ನು ಭೇಟಿಯಾಗಿ ಅ
dk-shivakumar-kanakadasa-caste-remark-meets-shepherds-in-haveri


ಹಾವೇರಿ, 27 ನವೆಂಬರ್ (ಹಿ.ಸ.):

ಕನಕದಾಸರ ಹೆಸರಿನಲ್ಲಿ ಜಾತಿಯ ವಿಚಾರಗಳನ್ನು ಮುನ್ನೆಲೆಗೆ ತರಬಾರದು. ಕನಕದಾಸರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬಾರದು ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಹಾವೇರಿಯ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನಕದಾಸರು ಜಾತಿ ಜಾತಿ ಎನ್ನುವುದನ್ನು ಬಿಡಿ ಎಂದು ಸಂದೇಶ ನೀಡಿದ್ದಾರೆ.

ಅವರ ಜೀವನದಲ್ಲಿ ಭಕ್ತಿಗೆ ಹೆಚ್ಚಿನ ಮಹತ್ವವಿತ್ತು. ಶ್ರೀಕೃಷ್ಣನನ್ನು ಒಲಿಸಿಕೊಂಡು ಸಮಾಜದ ಎಲ್ಲಾ ವರ್ಗದ ಜನರಿಗೆ ಮಾರ್ಗದರ್ಶನ ನೀಡಿದ್ದಾರೆ. ಹೀಗಾಗಿ ಕನಕದಾಸರ ವ್ಯಕ್ತಿತ್ವಕ್ಕೆ ಜಾತಿಯ ಬಣ್ಣ ಹಚ್ಚುವುದು ಸರಿಯಲ್ಲ ಎಂದರು.

ಕಾಗಿನೆಲೆ ಮಠದ ಶ್ರೀಗಳು ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನಿಸಿದ್ದರಿಂದ ತಾವು ಬಂದಿರುವುದಾಗಿ ತಿಳಿಸಿದರು.

ಕುರುಬ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ವಿಚಾರ

ಕುರುಬ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಈ ವಿಚಾರವನ್ನು ನೀವೇ ಹೇಳುತ್ತಿದ್ದೀರಿ, ಯಾರೂ ನನ್ನ ಬಳಿ ಈ ಬಗ್ಗೆ ಹೇಳಿಲ್ಲ. ಈ ಹಿಂದೆ ಕೆಲವು ವಿಚಾರಗಳಿದ್ದವು. ಆದರೆ ಸಚಿವ ಸ್ಥಾನದ ಆಕಾಂಕ್ಷಿಗಳಾಗಿ ಇನ್ನೂ ಸಾಕಷ್ಟು ಶಾಸಕರಿದ್ದಾರೆ. ಶಾಸಕ ಶಿವಣ್ಣನವರ್ ಅವರನ್ನು ನಾನೇ ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡು ಬಂದಿದ್ದೇನೆ ಎಂದು ಹೇಳಿದರು.

ವರದಾ-ಬೇಡ್ತಿ ನದಿ ಜೋಡಣೆಗೆ ಸಮ್ಮತಿ

ವರದಾ-ಬೇಡ್ತಿ ನದಿ ಜೋಡಣೆ ಯೋಜನೆ ವಿಚಾರವಾಗಿ ಮಾತನಾಡಿದ ಅವರು, ಈ ಯೋಜನೆಗೆ ಈಗಾಗಲೇ ನಮ್ಮ ಸಮ್ಮತಿ ನೀಡಿದ್ದೇವೆ. ಈ ಹಿಂದೆ ಮೂವರು ಮುಖ್ಯಮಂತ್ರಿಗಳು ಕೂಡ ಈ ಸಂಬಂಧ ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದರು.

ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಕುರಿತು

ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಆಶಾ ಕಾರ್ಯಕರ್ತೆಯರಿಗೆ ವಿಚಾರ ಅರ್ಥವಾಗಿದೆ. ಆದರೆ ಕೆಲವು ಸಂಘಟನೆಗಳಿಂದ ಅವರ ಮೇಲೆ ಒತ್ತಡವಿದೆ. ಪಾಪ, ಪ್ರತಿಭಟನೆಯಲ್ಲಿ ಭಾಗವಹಿಸಿರುವವರು ಒಳ್ಳೆಯವರೇ. ಕೇಂದ್ರ ಸರ್ಕಾರ ಮೊದಲು ಆಶಾ ಕಾರ್ಯಕರ್ತೆಯರಿಗೆ ನೀಡಬೇಕಾದ ಹಣವನ್ನು ಬಿಡುಗಡೆ ಮಾಡಲಿ ಎಂದು ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande