ವನ್ಯಜೀವಿಗಳು ಸಹಜವಾಗಿ ಬುದ್ಧಿವಂತ ಜೀವಿಗಳು: ಜೆ.ಸಿ. ಆದಿತ್ಯ ವಟ್ಟಂ
ಬಳ್ಳಾರಿ, 27 ನವೆಂಬರ್ (ಹಿ.ಸ.) ವನ್ಯಜೀವಿಗಳಿಗೆ ಮನುಷ್ಯರಿಂದ ಮಾತ್ರವೇ ತೊಂದರೆ ಉಂಟಾಗುತ್ತದೆಯೇ ಹೊರತು ಬೇರೆ ಜೀವಿಗಳಿಂದಲ್ಲ ಎಂದು ಜೆ.ಸಿ. ಆದಿತ್ಯ ವಟ್ಟಂ ಅಭಿಪ್ರಾಯಪಟ್ಟರು. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಜರುಗಿದ ''ಯೂಫೋರಿಯಾ-26'' ಕಾರ್ಯಕ್ರಮ
ವನ್ಯಜೀವಿಗಳು ಸಹಜವಾಗಿ ಬುದ್ಧಿವಂತ ಜೀವಿಗಳು: ಜೆ.ಸಿ. ಆದಿತ್ಯ ವಟ್ಟಂ


ವನ್ಯಜೀವಿಗಳು ಸಹಜವಾಗಿ ಬುದ್ಧಿವಂತ ಜೀವಿಗಳು: ಜೆ.ಸಿ. ಆದಿತ್ಯ ವಟ್ಟಂ


ವನ್ಯಜೀವಿಗಳು ಸಹಜವಾಗಿ ಬುದ್ಧಿವಂತ ಜೀವಿಗಳು: ಜೆ.ಸಿ. ಆದಿತ್ಯ ವಟ್ಟಂ


ಬಳ್ಳಾರಿ, 27 ನವೆಂಬರ್ (ಹಿ.ಸ.)

ವನ್ಯಜೀವಿಗಳಿಗೆ ಮನುಷ್ಯರಿಂದ ಮಾತ್ರವೇ ತೊಂದರೆ ಉಂಟಾಗುತ್ತದೆಯೇ ಹೊರತು ಬೇರೆ ಜೀವಿಗಳಿಂದಲ್ಲ ಎಂದು ಜೆ.ಸಿ. ಆದಿತ್ಯ ವಟ್ಟಂ ಅಭಿಪ್ರಾಯಪಟ್ಟರು.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಜರುಗಿದ 'ಯೂಫೋರಿಯಾ-26' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಬಳ್ಳಾರಿ ಪ್ರದೇಶವು ವಿಶೇಷವಾದ ಸ್ವಾಭಾವಿಕ ಪರಿಸರವನ್ನು ಹೊಂದಿದ್ದು, ಇಲ್ಲಿನ ವನ್ಯಜೀವಿಗಳು ವಿಭಿನ್ನವಾಗಿವೆ. ಸಂಡೂರು ಪ್ರದೇಶದಲ್ಲಿ ಸುಮಾರು 106ಕ್ಕೂ ಹೆಚ್ಚು ಗಣಿಗಾರಿಕೆ ಕಂಪನಿಗಳಿದ್ದರೂ ವನ್ಯಜೀವಿಗಳು ನೂರಾರು ವರ್ಷಗಳಿಂದ ಪರಿಸರದೊಂದಿಗೆ ಹೊಂದಿಕೊಂಡು ಬದುಕುತ್ತಿವೆ ಎಂದು ತಿಳಿಸಿದರು.

ಬಳ್ಳಾರಿಯ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಚಿರತೆ (ಲೆಪರ್ಡ್), ವಿವಿಧ ಬಗೆಯ ಕೀಟಗಳು, ತೋಳ, ನರಿ, ಹದ್ದು, ಕೃಷ್ಣಮೃಗ (ಬ್ಲ್ಯಾಕ್ ಬಕ್), ಉಡ, ಕರಡಿ ಹಾಗೂ ವೈವಿಧ್ಯಮಯ ಸರೀಸೃಪ ಪ್ರಭೇದಗಳನ್ನು ಗುರುತಿಸಲಾಗಿದ್ದು, ಇವುಗಳ ಸಂರಕ್ಷಣೆಯ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ವಿಜ್ಞಾನ ವಿಭಾಗದ ಡೀನ್ ಡಾ. ಉದಯಕುಮಾರ್ ಖಡಕೆ ಅವರು ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸನ್ನದ್ಧರಾಗಬೇಕೆಂದು ಕರೆ ನೀಡಿದರು.

ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನಾಗಭೂಷಣ ಚರಂತಿಮಠ ಅವರು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ '5-ಎಲ್ ಫಾರ್ ಲಾಂಜಿಟ್ಯೂಡಿನಲ್ ಗ್ರೋಥ್' ಸೂತ್ರವನ್ನು ವಿವರಿಸಿದರು.

ಇದೇ ಸಂದರ್ಭದಲ್ಲಿ ಪ್ರಾಯೋಗಿಕ ಇ-ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು ಹಾಗೂ ನಾಗರಹಾವಿನ ಪ್ರಾತ್ಯಕ್ಷಿಕೆಯೂ ನಡೆಯಿತು.

ವಿಭಾಗದ ಮುಖ್ಯಸ್ಥ ಡಾ. ನಾಗಭೂಷಣ ಚರಂತಿಮಠ, ಡಾ. ಸ್ನೇಹಾ ಹೆಗಡೆ, ಅತಿಥಿ ಉಪನ್ಯಾಸಕರಾದ ಶಾರದಾ, ಕೀರ್ತನಾ, ಜೆ.ಸಿ. ರಾಜೇಶ್ ವಟ್ಟಂ, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande