
ಹಾವೇರಿ, 27 ನವೆಂಬರ್ (ಹಿ.ಸ.):
ಕುರಿಗಾಹಿಗಳ ಬೆವರಿನ ಹನಿಗಳಲ್ಲಿ ಗ್ರಾಮೀಣ ಆರ್ಥಿಕತೆಯ ಬಲ ಅಡಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಕ್ಸನಲ್ಲಿ ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುವ ಮಾರ್ಗಮಧ್ಯೆ ಕುರುಬ ಸಮುದಾಯದ ಕುರಿಗಾಹಿಗಳೊಂದಿಗೆ ಅವರು ಆತ್ಮೀಯವಾಗಿ ಸಮಯ ಕಳೆದರು.
ಈ ಸಂದರ್ಭದಲ್ಲಿ ಕುರಿಗಾಹಿಗಳ ಕಷ್ಟ-ಸುಖಗಳನ್ನು ಆಲಿಸಿದ ಮುಖ್ಯಮಂತ್ರಿ, ಕುರಿ ಸಾಕಾಣಿಕೆಯಲ್ಲಿ ಅವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ಅಲ್ಲದೆ, ಅವರ ಅಹವಾಲುಗಳನ್ನು ಸ್ವೀಕರಿಸಿದರು.
ಕುರಿಗಾಹಿಗಳು ತೋರಿದ ಪ್ರೀತಿ ಮತ್ತು ಆತ್ಮೀಯ ಆತಿಥ್ಯ ಮನಮುಟ್ಟುವಂತಿತ್ತು. ಕುರಿಮರಿಯನ್ನು ಉಡುಗೊರೆಯಾಗಿ ನೀಡಿ, ಕಂಬಳಿ ಹೊದಿಸಿ ಗೌರವಿಸಿದ ಅವರ ಅಭಿಮಾನಕ್ಕೆ ಹೃದಯ ತುಂಬಿ ಬಂತು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಚಿವ ರುದ್ರಪ್ಪ ಲಮಾಣಿ, ಶಾಸಕರಾದ ಪ್ರಕಾಶ್ ಕೋಳಿವಾಡ, ಶ್ರೀನಿವಾಸ್ ಮಾನೆ, ಬಸವರಾಜ ನೀಲಪ್ಪ ಶಿವಣ್ಣನವರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.