
ಹುಬ್ಬಳ್ಳಿ, 27 ನವೆಂಬರ್ (ಹಿ.ಸ.):
ಕನಕದಾಸ ಜಯಂತಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಜನ್ಮದಿನದ ಅಂಗವಾಗಿ ಹುಬ್ಬಳ್ಳಿ ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರ ಆಯೋಜಿಸಲಾಗಿತ್ತು.
ಗ್ರಾಮದ ಸರ್ಕಾರಿ ಕನ್ನಡ ಶಾಲೆಯಲ್ಲಿ ನಡೆದ ಶಿಬಿರದಲ್ಲಿ ನೂರಾರು ಜನರು ಪಾಲ್ಗೊಂಡು ನೇತ್ರ ತಪಾಸಣೆ ಮಾಡಿಸಿಕೊಂಡು ಪ್ರಯೋಜನ ಪಡೆದರು.
ಕುಂದಗೋಳ ಕಲ್ಯಾಣಪುರ ಮಠದ ಶ್ರೀ ಅಭಿನವ ಬಸವಣ್ಣ ಅಜ್ಜನವರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಂಡಲ ಅಧ್ಯಕ್ಷ ಮಂಜುನಾಥ ಗಣಿ, ಷಣ್ಮುಖ ಗುರಿಕಾರ, ನಾಗಾರ್ಜುನ ಪಾಟೀಲಮುನೇನಕೊಪ್ಪ, ವೀರಪಾಕ್ಷಗೌಡ ಭರಮನಗೌಡ, ವೀರಪಾಕ್ಷಗೌಡ ಬಾವಿಕಟ್ಟಿ, ಸಿದ್ಧಣ್ಣ ಕಮತರ, ಷಣ್ಮುಖ ಗುಂಜಳ, ಪ್ರಮೋದ ಯಡ್ರಾವಿ, ಕೆಂಚಪ್ಪ ಮಲ್ಲಮನವರ, ಗಂಗನಗೌಡ, ರಾಜು ಸಂಕರೆಡ್ಡಿ, ಮಂಜು ಗಡಿಯಣ್ಣನವರ, ಮುತ್ತು ಚಾಕಲಬ್ಬಿ, ಸಂತೋಷ ಜೀವನಗೌಡ್ರ, ಗುರುಪಾದಗೌಡ್ರ, ಹನಮಂತಗೌಡ್ರ, ಸಿದ್ರಾಮೇಶ ಹೆಬ್ಬಳ್ಳಿ ಹಾಗೂ ಶಂಭು ಅಗಡಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.