
ಹುಬ್ಬಳ್ಳಿ, 27 ನವೆಂಬರ್ (ಹಿ.ಸ.):
ಚಳಿಗಾಲ ಮತ್ತು ಹಬ್ಬದ ಋತುವಿನಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆ ಆರು ಜೋಡಿ ಸಾಪ್ತಾಹಿಕ ವಿಶೇಷ ರೈಲುಗಳ ಸಂಚಾರ ಅವಧಿಯನ್ನು ವಿಸ್ತರಿಸಿದೆ.
ವಿಸ್ತರಿಸಲಾದ ರೈಲುಗಳ ವಿವರ:
ಯಶವಂತಪುರ–ಜೈಪುರ (06543/06544): ಯಶವಂತಪುರದಿಂದ ಡಿಸೆಂಬರ್ 2ರಿಂದ 30ರವರೆಗೆ ಪ್ರತಿ ಬುಧವಾರ ಹಾಗೂ ಜೈಪುರದಿಂದ ಡಿಸೆಂಬರ್ 5ರಿಂದ ಜನವರಿ 2ರವರೆಗೆ ಪ್ರತಿ ಶನಿವಾರ ಸಂಚರಿಸಲಿದೆ. ಈ ರೈಲಿನ ಬಮ್ನಿಯಾ ನಿಲುಗಡೆಯನ್ನು ರದ್ದುಗೊಳಿಸಲಾಗಿದೆ.
ಹುಬ್ಬಳ್ಳಿ–ಖತಿಪುರ (07371/07372): ಹುಬ್ಬಳ್ಳಿಯಿಂದ ಡಿಸೆಂಬರ್ 12ರಿಂದ 26ರವರೆಗೆ ಪ್ರತಿ ಶನಿವಾರ ಹಾಗೂ ಖತಿಪುರದಿಂದ ಡಿಸೆಂಬರ್ 14ರಿಂದ 28ರವರೆಗೆ ಪ್ರತಿ ಸೋಮವಾರ ಸಂಚರಿಸಲಿದೆ.
ಯಶವಂತಪುರ–ವಿಜಯಪುರ (06577/06578): ಯಶವಂತಪುರದಿಂದ ಡಿಸೆಂಬರ್ 5ರಿಂದ 26ರವರೆಗೆ ಪ್ರತಿ ಶನಿವಾರ ಹಾಗೂ ವಿಜಯಪುರದಿಂದ ಡಿಸೆಂಬರ್ 6ರಿಂದ 27ರವರೆಗೆ ಪ್ರತಿ ಭಾನುವಾರ ಸಂಚರಿಸಲಿದೆ.
ಪ್ರಯಾಗರಾಜ್–ಹುಬ್ಬಳ್ಳಿ (04113/04114): ಪ್ರಯಾಗರಾಜ್ನಿಂದ ಡಿಸೆಂಬರ್ 19ರಿಂದ 26ರವರೆಗೆ ಪ್ರತಿ ಶನಿವಾರ ಹಾಗೂ ಹುಬ್ಬಳ್ಳಿಯಿಂದ ಡಿಸೆಂಬರ್ 22ರಿಂದ 29ರವರೆಗೆ ಪ್ರತಿ ಮಂಗಳವಾರ ಸಂಚರಿಸಲಿದೆ. ಈ ರೈಲಿನಲ್ಲಿ ಎರಡು ಹವಾನಿಯಂತ್ರಿತ ಮೂರು ಹಂತದ ಬೋಗಿಗಳು, 11 ಮಲಗುವ ದರ್ಜೆಯ ಬೋಗಿಗಳು, ಎಂಟು ಸಾಮಾನ್ಯ ದರ್ಜೆಯ ಬೋಗಿಗಳು ಹಾಗೂ ವಿಶೇಷ ಸೌಲಭ್ಯವುಳ್ಳ ಎರಡು ಲಗೇಜು ಮತ್ತು ಬ್ರೇಕ್ ವ್ಯಾನ್ ಬೋಗಿಗಳು ಇರಲಿವೆ.
ಹುಬ್ಬಳ್ಳಿ–ರಾಮೇಶ್ವರಂ (07355/07356): ಹುಬ್ಬಳ್ಳಿಯಿಂದ ಡಿಸೆಂಬರ್ 13ರಿಂದ ಜನವರಿ 24ರವರೆಗೆ ಪ್ರತಿ ಭಾನುವಾರ ಹಾಗೂ ರಾಮೇಶ್ವರಂನಿಂದ ಡಿಸೆಂಬರ್ 14ರಿಂದ ಜನವರಿ 25ರವರೆಗೆ ಪ್ರತಿ ಸೋಮವಾರ ಸಂಚರಿಸಲಿದೆ.
ರಾಮೇಶ್ವರಂ ರೈಲಿನ ಸಮಯ ಬದಲಾವಣೆ
ಜನವರಿ 3, 2027ರಿಂದ ಜಾರಿಗೆ ಬರುವಂತೆ ಹುಬ್ಬಳ್ಳಿ–ರಾಮೇಶ್ವರಂ ವಿಶೇಷ ರೈಲಿನ ಸಮಯವನ್ನು ಭಾಗಶಃ ಪರಿಷ್ಕರಿಸಲಾಗಿದೆ. ಹುಬ್ಬಳ್ಳಿಯಿಂದ ಹೊರಡುವ ಮತ್ತು ಪುದುಕ್ಕೋಟೈವರೆಗಿನ ಸಮಯದಲ್ಲಿ ಬದಲಾವಣೆ ಇರುವುದಿಲ್ಲ.
ಪರಿಷ್ಕೃತ ವೇಳಾಪಟ್ಟಿಯಂತೆ ಕಾರೈಕುಡಿಗೆ ರಾತ್ರಿ 2.08ಕ್ಕೆ ಆಗಮಿಸಿ 2.10ಕ್ಕೆ ನಿರ್ಗಮಿಸಲಿದೆ. ಶಿವಗಂಗಾಕ್ಕೆ 2.43ಕ್ಕೆ ಆಗಮಿಸಿ 2.45ಕ್ಕೆ ಹೊರಡಲಿದೆ. ಮಾನಾಮದುರೈಗೆ 3.05ಕ್ಕೆ ಆಗಮಿಸಿ 3.10ಕ್ಕೆ ನಿರ್ಗಮಿಸಲಿದೆ. ರಾಮನಾಥಪುರಂಗೆ 3.58ಕ್ಕೆ ಆಗಮಿಸಿ 4 ಗಂಟೆಗೆ ಹೊರಟು ಬೆಳಿಗ್ಗೆ 5.45ಕ್ಕೆ ರಾಮೇಶ್ವರಂ ತಲುಪಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.