ಪಶುಸಂಗೋಪನೆ ಸಾಲ ರೈತರಿಗೆ ಶೀಘ್ರ ತಲುಪಿಸಿ: ಹೋರಾಟಗಾರ ರಾಜು ನದಾಫ್ ಆಗ್ರಹ
ಬಾಗಲಕೋಟೆ , 27 ನವೆಂಬರ್ (ಹಿ.ಸ.) ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ ಬ್ಯಾಂಕ್) ವತಿಯಿಂದ ರೈತರಿಗೆ ನೀಡಲಾಗುವ ಪಶುಸಂಗೋಪನೆ ಸಾಲವನ್ನು ಯಾವುದೇ ವಿಳಂಬ ಮಾಡದೆ ಶೀಘ್ರವಾಗಿ ಫಲಾನುಭವಿ ರೈತರಿಗೆ ತಲುಪಿಸಬೇಕು ಎಂದು ಹೋರಾಟಗಾರ ರಾಜು ನದಾಫ್ ಆಗ್ರಹಿಸಿದ್ದಾರೆ. ಈ ಕುರಿತು ಮಾತನಾಡಿದ
ಆಗ್ರಹ


ಬಾಗಲಕೋಟೆ , 27 ನವೆಂಬರ್ (ಹಿ.ಸ.)

ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ ಬ್ಯಾಂಕ್) ವತಿಯಿಂದ ರೈತರಿಗೆ ನೀಡಲಾಗುವ ಪಶುಸಂಗೋಪನೆ ಸಾಲವನ್ನು ಯಾವುದೇ ವಿಳಂಬ ಮಾಡದೆ ಶೀಘ್ರವಾಗಿ ಫಲಾನುಭವಿ ರೈತರಿಗೆ ತಲುಪಿಸಬೇಕು ಎಂದು ಹೋರಾಟಗಾರ ರಾಜು ನದಾಫ್ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಪಶುಸಂಗೋಪನೆ ರೈತರ ಆರ್ಥಿಕ ಜೀವನಕ್ಕೆ ಪ್ರಮುಖ ಆಧಾರವಾಗಿದೆ. ಹೈನುಗಾರಿಕೆ ಹಾಗೂ ಇತರ ಪಶುಸಂಗೋಪನೆ ಚಟುವಟಿಕೆಗಳನ್ನು ಕೈಗೊಳ್ಳಲು ರೈತರಿಗೆ ಆರ್ಥಿಕ ನೆರವಿನ ಅಗತ್ಯವಿದೆ. ಈ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್ ಮೂಲಕ ನೀಡಲಾಗುವ ಪಶುಸಂಗೋಪನೆ ಸಾಲ ರೈತರಿಗೆ ಸಾಕಷ್ಟು ಅನುಕೂಲ ಕಲ್ಪಿಸಲಿದೆ ಎಂದರು.

ಈಗಾಗಲೇ ಪಶುಸಂಗೋಪನೆ ಸಾಲವನ್ನು ರೈತರಿಗೆ ವಿತರಿಸಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪಿಕೆಪಿಎಸ್) ಆಡಳಿತ ಮಂಡಳಿ ಹಾಗೂ ಅಧಿಕಾರಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಆದರೆ, ಇನ್ನೂ ಕೆಲವು ಪಿಕೆಪಿಎಸ್ಗಳಲ್ಲಿ ಅರ್ಹ ರೈತರಿಗೆ ಸಾಲ ವಿತರಣೆ ಮಾಡಿಲ್ಲ ಎಂಬ ದೂರುಗಳಿವೆ ಎಂದು ತಿಳಿಸಿದರು.

ಸಾಲಕ್ಕಾಗಿ ಕಾಯುತ್ತಿರುವ ರೈತರಿಗೆ ಅನಗತ್ಯ ವಿಳಂಬ ಮಾಡದೆ, ಬಾಕಿ ಇರುವ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸಿ ಸಾಲದ ಮೊತ್ತವನ್ನು ಫಲಾನುಭವಿಗಳಿಗೆ ತಲುಪಿಸಬೇಕು. ರೈತರ ಹಿತದೃಷ್ಟಿಯಿಂದ ಸಂಬಂಧಪಟ್ಟ ಪಿಕೆಪಿಎಸ್ ಅಧಿಕಾರಿಗಳು ಹಾಗೂ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಕೂಡಲೇ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ರೈತರಿಗೆ ಸಕಾಲದಲ್ಲಿ ಆರ್ಥಿಕ ನೆರವು ದೊರೆತಾಗ ಮಾತ್ರ ಪಶುಸಂಗೋಪನೆ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಮುಂದುವರಿಸಲು ಸಾಧ್ಯ. ಆದ್ದರಿಂದ ಬಾಕಿ ಇರುವ ಎಲ್ಲ ಅರ್ಹ ರೈತರಿಗೆ ಶೀಘ್ರ ಸಾಲ ವಿತರಣೆ ಮಾಡಬೇಕು ಎಂದು ರಾಜು ನದಾಫ್ ಒತ್ತಾಯಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande