ಡಾ. ವಿ.ಕೆ. ಜಹಗೀರದಾರ್ ನಿಧನ
ಬಳ್ಳಾರಿ, 20 ನವೆಂಬರ್ (ಹಿ.ಸ.) ರಾಯಚೂರು ಜಿಲ್ಲೆಯ ಮೂಲ ನಿವಾಸಿಗಳಾಗಿ, ಬಳ್ಳಾರಿಯ ಗಾಂಧಿನಗರ ನಿವಾಸಿಗಳಾಗಿದ್ದ ಡಾ. ವಿ.ಕೆ. ಜಹಗೀರದಾರ್ (85) ಅವರು ಗುರುವಾರ ರಾತ್ರಿ ನಿಧನರಾಗಿದ್ದು, ಶುಕ್ರವಾರ ಅವರ ಅಂತ್ಯಕ್ರಿಯೆ ನೆರವೇರಿದೆ. ಮೃತರು ಪತ್ನಿ, ಹಿರಿಯ ಪತ್ರಕರ್ತ ರಮೇಶ್ ಜಹಗೀರದಾರ್ ಸೇರಿ ನಾಲ್ವರ
ಡಾ. ವಿ.ಕೆ. ಜಹಗೀರದಾರ್ ನಿಧನ


ಬಳ್ಳಾರಿ, 20 ನವೆಂಬರ್ (ಹಿ.ಸ.)

ರಾಯಚೂರು ಜಿಲ್ಲೆಯ ಮೂಲ ನಿವಾಸಿಗಳಾಗಿ, ಬಳ್ಳಾರಿಯ ಗಾಂಧಿನಗರ ನಿವಾಸಿಗಳಾಗಿದ್ದ ಡಾ. ವಿ.ಕೆ. ಜಹಗೀರದಾರ್ (85) ಅವರು ಗುರುವಾರ ರಾತ್ರಿ ನಿಧನರಾಗಿದ್ದು, ಶುಕ್ರವಾರ ಅವರ ಅಂತ್ಯಕ್ರಿಯೆ ನೆರವೇರಿದೆ.

ಮೃತರು ಪತ್ನಿ, ಹಿರಿಯ ಪತ್ರಕರ್ತ ರಮೇಶ್ ಜಹಗೀರದಾರ್ ಸೇರಿ ನಾಲ್ವರು ಪುತ್ರರನ್ನು ಅಗಲಿದ್ದಾರೆ.

ಸಮಾಜಸೇವೆ, ಸಂಗೀತ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ಬಳ್ಳಾರಿಯಲ್ಲಿ ಪ್ರತಿವರ್ಷ ಗುರುಶ್ರೀಶ ವಿಠ್ಠಲ ದಾಸರ ಆರಾಧನೆಯನ್ನು ಆಯೋಜಿಸುತ್ತಿದ್ದರು. ಅವರ ನಿಧನಕ್ಕೆ ಗಣ್ಯರು ಹಾಗೂ ಬಂಧುಮಿತ್ರರು ಸಂತಾಪ ಸೂಚಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande