ಉತ್ತರಾಖಂಡನಲ್ಲಿ ಭೀಕರ ರಸ್ತೆ ಅಪಘಾತ:ಎಂಟು ಮಂದಿ ಸಾವು, 26 ಜನರಿಗೆ ಗಾಯ
ಡೆಹ್ರಾಡೂನ್, 17 ನವೆಂಬರ್ (ಹಿ.ಸ.): ಉತ್ತರಾಖಂಡದ ಟೆಹ್ರಿ ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ಮಂದಿ ಮೃತಪಟ್ಟಿದ್ದು, 26 ಜನರು ಗಾಯಗೊಂಡಿದ್ದಾರೆ. ಹರಿದ್ವಾರದಿಂದ ಚಮೋಲಿಗೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಗೂಲರ್ ಮಾರುಕಟ್ಟೆ ಸಮೀಪ ಚಾಲಕನ ನಿಯಂ
दुर्घटना ग्रस्त बस।


ಡೆಹ್ರಾಡೂನ್, 17 ನವೆಂಬರ್ (ಹಿ.ಸ.):

ಉತ್ತರಾಖಂಡದ ಟೆಹ್ರಿ ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ಮಂದಿ ಮೃತಪಟ್ಟಿದ್ದು, 26 ಜನರು ಗಾಯಗೊಂಡಿದ್ದಾರೆ.

ಹರಿದ್ವಾರದಿಂದ ಚಮೋಲಿಗೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಗೂಲರ್ ಮಾರುಕಟ್ಟೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಗೂಲರ್ ಸೇತುವೆಯಿಂದ ಸುಮಾರು 100 ಮೀಟರ್ ಆಳದ ಕಂದಕಕ್ಕೆ ಉರುಳಿದೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಪೊಲೀಸರು ಹಾಗೂ ಸ್ಥಳೀಯರು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.

ಎಸ್‌ಡಿಆರ್‌ಎಫ್ ನೀಡಿದ ಮಾಹಿತಿಯ ಪ್ರಕಾರ, ಮಂಗಳವಾರ ಬೆಳಗಿನ ಜಾವ ಸುಮಾರು 4.30ಕ್ಕೆ ಈ ದುರಂತ ಸಂಭವಿಸಿದೆ. ಮಾಹಿತಿ ದೊರೆತ ತಕ್ಷಣ ಬ್ಯಾಶಿ ಎಸ್‌ಡಿಆರ್‌ಎಫ್ ಶಿಬಿರದಿಂದ ಉಪನಿರೀಕ್ಷಕ ಸಾವರ್ ಸಿಂಗ್ ನೇತೃತ್ವದ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿತು.

ಅಪಘಾತದ ತೀವ್ರತೆಯನ್ನು ಗಮನಿಸಿ ಎಸ್‌ಡಿಆರ್‌ಎಫ್ ಕಮಾಂಡೆಂಟ್ ಅರ್ಪಣ್ ಯಾದವಂಶಿ ಅವರ ಸೂಚನೆಯಂತೆ ಢಾಲ್ವಾಲಾ ಶಿಬಿರ ಹಾಗೂ ಪಡೆ ಮುಖ್ಯ ಕಚೇರಿಯಿಂದ ಹೆಚ್ಚುವರಿ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು. ನಿರೀಕ್ಷಕ ಕವೀಂದ್ರ ಸಜ್ವಾಣ್ ನೇತೃತ್ವದಲ್ಲಿ ರಕ್ಷಣಾ ಸಿಬ್ಬಂದಿ ದುರ್ಗಮ ಭೂಪ್ರದೇಶ ಹಾಗೂ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಕಾರ್ಯಾಚರಣೆ ನಡೆಸಿದರು.

ಬಸ್‌ನಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ಸಿಬ್ಬಂದಿ ತೀವ್ರ ಪರಿಶ್ರಮದ ಬಳಿಕ ಹೊರತೆಗೆದರು. ಗಾಯಗೊಂಡಿದ್ದ ಒಟ್ಟು 26 ಜನರನ್ನು ಸ್ಟ್ರೆಚರ್‌ಗಳ ಸಹಾಯದಿಂದ ದುರ್ಗಮ ಹಾದಿಯಲ್ಲಿ ಹೊತ್ತು ತಂದು ರಸ್ತೆಗೆ ತಲುಪಿಸಲಾಯಿತು. ಬಳಿಕ ಆಂಬುಲೆನ್ಸ್‌ಗಳ ಮೂಲಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಪಘಾತದಲ್ಲಿ ಮೃತಪಟ್ಟ ಎಂಟು ಮಂದಿಯ ಮೃತದೇಹಗಳನ್ನೂ ಬಸ್‌ನಿಂದ ಹೊರತೆಗೆದು ರಸ್ತೆಗೆ ತಂದು ಆಸ್ಪತ್ರೆಗೆ ರವಾನಿಸಲಾಯಿತು.

ಅಪಘಾತ ನಡೆದ ಸ್ಥಳ ಹಾಗೂ ಸುತ್ತಮುತ್ತಲಿನ ಸಂಭವನೀಯ ಪ್ರದೇಶಗಳಲ್ಲಿ ರಕ್ಷಣಾ ತಂಡಗಳು ತೀವ್ರ ಶೋಧ ಕಾರ್ಯಾಚರಣೆ ನಡೆಸಿದವು. ಪೊಲೀಸರು, ಆಡಳಿತಾಧಿಕಾರಿಗಳು, ಇತರ ರಕ್ಷಣಾ ಸಂಸ್ಥೆಗಳು ಹಾಗೂ ಸ್ಥಳೀಯರ ಸಮನ್ವಯದೊಂದಿಗೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳಿಸಲಾಯಿತು.

ಗಾಯಾಳುಗಳ ವಿವರ

* ಮೊಹಮ್ಮದ್ ವಹಾಬ್ ಅನ್ಸಾರಿ (22), ದುಂಬಾ ಜಿಲ್ಲೆ, ಜಾರ್ಖಂಡ್.

* ರಾಹುಲ್ ಕುಮಾರ್ (24), ಪಾಟ್ನಾ, ಬಿಹಾರ.

* ಅಭಿಷೇಕ್ (28), ಜಸ್ಪುರ್, ಉದಮ್ ಸಿಂಗ್ ನಗರ.

* ಪ್ರತ್ಯೂಷ್ (23), ಖಟಿಮಾ, ಉದಮ್ ಸಿಂಗ್ ನಗರ.

* ಅರ್ಜುನ್ ಸೌರನ್ (34), ದುಂಬಾ ಜಿಲ್ಲೆ, ಜಾರ್ಖಂಡ್.

* ಬುಧನ್ ಮುರ್ಮು (50), ದುಂಬಾ ಜಿಲ್ಲೆ, ಜಾರ್ಖಂಡ್.

* ಆಯ್ರಾ (3), ಗುವಾಹಟಿ, ಅಸ್ಸಾಂ.

* ನೂರ್ ಜಹಾನ್ (26), ಗುವಾಹಟಿ, ಅಸ್ಸಾಂ.

* ರಾಜ್‌ಕುಮಾರ್ (32), ದುಂಬಾ ಜಿಲ್ಲೆ, ಜಾರ್ಖಂಡ್.

* ಜತಿನ್ (21), ಶಹದಾರಾ, ದೆಹಲಿ.

* ಪಂಕಜ್ ನೇಗಿ (31), ರುದ್ರಪ್ರಯಾಗ.

* ಸಂತೋಷ್ ಕುಮಾರ್ (38), ಜಹಾನಾಬಾದ್, ಬಿಹಾರ.

* ವೀರೇಂದ್ರ ಸಿಂಗ್ (58), ಕರ್ಣಪ್ರಯಾಗ, ಚಮೋಲಿ.

* ಮುನ್ನಾ ಸಿಂಗ್ (28), ದುಂಬಾ ಜಿಲ್ಲೆ, ಜಾರ್ಖಂಡ್.

* ಸಾಗರ್ (21), ಪ್ರತಾಪಗಢ, ಉತ್ತರ ಪ್ರದೇಶ.

* ಖುಷಿ ಭಟ್ (19), ಪಿಥೋರಾಗಢ.

* ಹೆಸರು ಮತ್ತು ವಿಳಾಸ ತಿಳಿಯದ ವ್ಯಕ್ತಿಯೊಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ. ಅವರ ಬಳಿ ಯಾವುದೇ ಗುರುತಿನ ಚೀಟಿ ಪತ್ತೆಯಾಗಿಲ್ಲ.

* ಪರೇಶ್ ಮರಾಠಿ, ದುಂಬಾ ಜಿಲ್ಲೆ, ಜಾರ್ಖಂಡ್.

* ಆಸಾಪಂತ್ (64), ಹಲ್ದ್ವಾನಿ, ನೈನಿತಾಲ್.

* ಪಂಕಜ್ ಕಾಂಡಪಾಲ್ (42), ಹಲ್ದ್ವಾನಿ, ನೈನಿತಾಲ್.

* ಅಂಜು (32), ಹಲ್ದ್ವಾನಿ, ನೈನಿತಾಲ್.

* ಆರ್ಯನ್ ಗುಪ್ತಾ, ಮಧ್ಯಪ್ರದೇಶ.

* ರಮೇಶ್ ಚಂದ್, ಕೋಲ್ಕತ್ತಾ.

* ದರ್ಶನ್ ಸಿಂಗ್, ಹಲ್ದ್ವಾನಿ, ನೈನಿತಾಲ್.

* ರಾಮ ಪ್ರಸಾದ್ ಘೋಷ್ (62), ಕೋಲ್ಕತ್ತಾ.

* ನವೀನ್ (31), ಹಲ್ದ್ವಾನಿ, ನೈನಿತಾಲ್.

ಅಪಘಾತದಲ್ಲಿ ಒಟ್ಟು 26 ಮಂದಿ ಗಾಯಗೊಂಡಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande