ವಿಜಯನಗರ ವಿವಿ ಘಟಿಕೋತ್ಸವ: 42 ವಿದ್ಯಾರ್ಥಿಗಳ ಮುಡಿಗೆ 50 ಚಿನ್ನದ ಪದಕ
ಬಳ್ಳಾರಿ, 16 ನವೆಂಬರ್ (ಹಿ.ಸ.) ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 2024-25ನೇ ಸಾಲಿನ 14ನೇ ವಾರ್ಷಿಕ ಘಟಿಕೋತ್ಸವದಲ್ಲಿ ಶೈಕ್ಷಣಿಕ ಸಾಧನೆ ಮೆರೆದ 42 ವಿದ್ಯಾರ್ಥಿಗಳಿಗೆ ಒಟ್ಟು 50 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ 52 ಸಂಶೋಧನಾರ್ಥಿಗಳಿಗೆ ಡಾಕ್ಟರೇಟ್ ಪದವಿ ಹ
ವಿಎಸ್ಕೆಯು ಘಟಿಕೋತ್ಸವ : 50 ಚಿನ್ನದ ಪದಕ ಪ್ರದಾನ


ವಿಎಸ್ಕೆಯು ಘಟಿಕೋತ್ಸವ : 50 ಚಿನ್ನದ ಪದಕ ಪ್ರದಾನ


ವಿಎಸ್ಕೆಯು ಘಟಿಕೋತ್ಸವ : 50 ಚಿನ್ನದ ಪದಕ ಪ್ರದಾನ


ವಿಎಸ್ಕೆಯು ಘಟಿಕೋತ್ಸವ : 50 ಚಿನ್ನದ ಪದಕ ಪ್ರದಾನ


ವಿಎಸ್ಕೆಯು ಘಟಿಕೋತ್ಸವ : 50 ಚಿನ್ನದ ಪದಕ ಪ್ರದಾನ


ವಿಎಸ್ಕೆಯು ಘಟಿಕೋತ್ಸವ : 50 ಚಿನ್ನದ ಪದಕ ಪ್ರದಾನ


ವಿಎಸ್ಕೆಯು ಘಟಿಕೋತ್ಸವ : 50 ಚಿನ್ನದ ಪದಕ ಪ್ರದಾನ


ವಿಎಸ್ಕೆಯು ಘಟಿಕೋತ್ಸವ : 50 ಚಿನ್ನದ ಪದಕ ಪ್ರದಾನ


ವಿಎಸ್ಕೆಯು ಘಟಿಕೋತ್ಸವ : 50 ಚಿನ್ನದ ಪದಕ ಪ್ರದಾನ


Teaser Launch Film Columbus Marathi


ಬಳ್ಳಾರಿ, 16 ನವೆಂಬರ್ (ಹಿ.ಸ.)

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 2024-25ನೇ ಸಾಲಿನ 14ನೇ ವಾರ್ಷಿಕ ಘಟಿಕೋತ್ಸವದಲ್ಲಿ ಶೈಕ್ಷಣಿಕ ಸಾಧನೆ ಮೆರೆದ 42 ವಿದ್ಯಾರ್ಥಿಗಳಿಗೆ ಒಟ್ಟು 50 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ 52 ಸಂಶೋಧನಾರ್ಥಿಗಳಿಗೆ ಡಾಕ್ಟರೇಟ್ ಪದವಿ ಹಾಗೂ 137 ವಿದ್ಯಾರ್ಥಿಗಳಿಗೆ ರ್ಯಾಂಕ್ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ವಿಶ್ವವಿದ್ಯಾಲಯದ ವ್ಯಾಪ್ತಿಯ ವಿವಿಧ ಮಹಾವಿದ್ಯಾಲಯಗಳ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಪಡೆದು ಗಮನ ಸೆಳೆದರು. ಸ್ನಾತಕ ವಿಭಾಗದ 66 ಹಾಗೂ ಸ್ನಾತಕೋತ್ತರ ವಿಭಾಗದ 71 ವಿದ್ಯಾರ್ಥಿಗಳು ರ್ಯಾಂಕ್ ಗಳಿಸಿದ್ದಾರೆ.

ಸ್ನಾತಕೋತ್ತರ ವಿಭಾಗದಲ್ಲಿ ಬಳ್ಳಾರಿಯ ಶ್ರೀ ಗುರು ತಿಪ್ಪೇರುದ್ರ ಕಾಲೇಜಿನ ವಾಣಿಜ್ಯಶಾಸ್ತ್ರ ವಿದ್ಯಾರ್ಥಿನಿ ಸವಿತಾ ನಾಲ್ಕು ಚಿನ್ನದ ಪದಕಗಳನ್ನು ಪಡೆದು ಅಗ್ರ ಸಾಧನೆ ಮಾಡಿದರು. ವಿಶ್ವವಿದ್ಯಾಲಯದ ಮುಖ್ಯ ಆವರಣದ ಔದ್ಯೋಗಿಕ ರಸಾಯನಶಾಸ್ತ್ರ ವಿಭಾಗದ ತಸ್ಮಿಯಾಬಾನು ಆರ್. ಮೂರು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು.

ಭೌತಶಾಸ್ತ್ರ ವಿಭಾಗದ ಉಜ್ಜನಿ ಈಶ್ವರ, ರಸಾಯನಶಾಸ್ತ್ರ ವಿಭಾಗದ ಸಮ್ರೀನ್, ಸಮಾಜಕಾರ್ಯ ವಿಭಾಗದ ಪದ್ಮಾವತಿ ಕೆ. ಹಾಗೂ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮಹಾಲಿಂಗಪ್ಪ ತಂಬ್ರಹಳ್ಳಿ ತಲಾ ಎರಡು ಚಿನ್ನದ ಪದಕಗಳನ್ನು ಪಡೆದರು.

ಸ್ನಾತಕ ವಿಭಾಗದಲ್ಲಿ ಬಳ್ಳಾರಿಯ ಬಿಬಿಸಿ ಕಾಲೇಜಿನ ವಾಣಿಜ್ಯ ಪದವಿ ವಿದ್ಯಾರ್ಥಿನಿ ಪೂಜಾ, ಹಗರಿಬೊಮ್ಮನಹಳ್ಳಿಯ ಜಿವಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ಪದವಿ ವಿದ್ಯಾರ್ಥಿ ಅಜಯ್, ಬಳ್ಳಾರಿಯ ಜ್ಞಾನಭಾರತಿ ಪದವಿ ಕಾಲೇಜಿನ ಕಲಾ ವಿಭಾಗದ ಬಸಮ್ಮ ಹಾಗೂ ಕೊಟ್ಟೂರಿನ ಗಂಗೋತ್ರಿ ಪದವಿ ಕಾಲೇಜಿನ ಸಮಾಜಕಾರ್ಯ ಪದವಿ ವಿದ್ಯಾರ್ಥಿನಿ ಬಿ. ಕಾವ್ಯ ಚಿನ್ನದ ಪದಕ ಗಳಿಸಿದರು.

ಶೇ.95.33ರಷ್ಟು ಉತ್ತೀರ್ಣ ಫಲಿತಾಂಶ

ವಿಶ್ವವಿದ್ಯಾಲಯವು ಈ ಬಾರಿ ಒಟ್ಟಾರೆ ಶೇ.95.33ರಷ್ಟು ಫಲಿತಾಂಶ ದಾಖಲಿಸಿದೆ. ಸ್ನಾತಕ ಪದವಿ ಪರೀಕ್ಷೆಯಲ್ಲಿ 13,346 ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಮತ್ತು ಡಿಪ್ಲೊಮಾ ವಿಭಾಗಗಳಲ್ಲಿ 1,448 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೈಕ್ಷಣಿಕ ಸಾಧನೆ, ಸಂಶೋಧನೆ ಮತ್ತು ಪರೀಕ್ಷಾ ಫಲಿತಾಂಶದಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುವುದು ವಿಶ್ವವಿದ್ಯಾಲಯದ ಶೈಕ್ಷಣಿಕ ಪ್ರಗತಿಯನ್ನು ಪ್ರತಿಬಿಂಬಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande