ಎಚ್. ವೀರಾಪುರದ ಬಾಲಕರಿಬ್ಬರು ನೀರಿನಲ್ಲಿ ಮುಳುಗಿ ಸಾವು:ಪ್ರಕರಣ ದಾಖಲು
ಕುರುಗೋಡು, 16 ನವೆಂಬರ್ (ಹಿ.ಸ.) ಕುರುಗೋಡು ತಾಲೂಕಿನ ಎಚ್.ವೀರಾಪುರ ಗ್ರಾಮದ ಇಬ್ಬರು ಬಾಲಕರು ಹೊಸಪೇಟೆ ತಾಲೂಕಿನ ಬುಕ್ಕಸಾಗರದ ಬಳಿ ಎಲ್ಎಲ್ಸಿ ಕಾಲುವೆಗೆ ಈಜಲು ಹೋಗಿ, ಮುಳಗಿ ಮೃತಪಟ್ಟಿದ್ದಾರೆ. ಮೃತರು ಸತೀಶ್ (16) ಮತ್ತು ಫಕ್ಕೀರಪ್ಪ (12). ಮೃತರ ದೇಹಗಳನ್ನು ಭಾನುವಾರ ರಾತ್ರಿ ಎಚ್. ವೀರಾಪುರ ಗ್
ಎಚ್. ವೀರಾಪುರದ ಬಾಲಕರಿಬ್ಬರು ನೀರಿನಲ್ಲಿ ಮುಳುಗಿ ಸಾವು:ಪ್ರಕರಣ ದಾಖಲು


ಕುರುಗೋಡು, 16 ನವೆಂಬರ್ (ಹಿ.ಸ.)

ಕುರುಗೋಡು ತಾಲೂಕಿನ ಎಚ್.ವೀರಾಪುರ ಗ್ರಾಮದ ಇಬ್ಬರು ಬಾಲಕರು ಹೊಸಪೇಟೆ ತಾಲೂಕಿನ ಬುಕ್ಕಸಾಗರದ ಬಳಿ ಎಲ್ಎಲ್ಸಿ ಕಾಲುವೆಗೆ ಈಜಲು ಹೋಗಿ, ಮುಳಗಿ ಮೃತಪಟ್ಟಿದ್ದಾರೆ.

ಮೃತರು ಸತೀಶ್ (16) ಮತ್ತು ಫಕ್ಕೀರಪ್ಪ (12). ಮೃತರ ದೇಹಗಳನ್ನು ಭಾನುವಾರ ರಾತ್ರಿ ಎಚ್. ವೀರಾಪುರ ಗ್ರಾಮಕ್ಕೆ ತಂದು, ಸೋಮವಾರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.

ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರು ಮೃತರ ಮನೆಗಳಿಗೆ ಭೇಟಿ ನೀಡಿ, ಪೋಷಕರು ಮತ್ತು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande