


ಬಳ್ಳಾರಿ, 16 ನವೆಂಬರ್ (ಹಿ.ಸ.)
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಪ್ರತೀ ವರ್ಷ ನೀಡುವ `ಸಹಕಾರ ರತ್ನ' ಪ್ರಶಸ್ತಿಯನ್ನು ಸ್ವೀಕರಿಸಿರುವ
ಬಳ್ಳಾರಿಯ ಜನತಾಬಜಾರ್ನ ಮಾಜಿ ಅಧ್ಯಕ್ಷರೂ, ನಿರ್ದೇಶಕರೂ ಆಗಿರುವ ಜಿ. ನೀಲಕಂಠಪ್ಪ ಅವರಿಗೆ ಜನತಾಬಜಾರ್ನ ಆಡಳಿತ ಮಂಳಡಿ ನಿರ್ದೇಶಕರು ಸೋಮವಾರ ಗೌರವಿಸಿ, ಅಭಿನಂದಿಸಿದ್ದಾರೆ.
73ನೇ ಸಹಕಾರ ಸಪ್ತಾಹ - 2026 ಅನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ `ಸಹಕಾರ ರತ್ನ' ಪ್ರಶಸ್ತಿ ಸ್ವೀಕರಿಸಿದ್ದ ಜಿ. ನೀಲಕಂಠಪ್ಪ ಅವರಿಗೆ ಸೋಮವಾರ ನಡೆದ ಜನತಾ ಬಜಾರ್ನ ನಿರ್ದೇಶಕ ಮಂಡಳಿಯ ಸಭೆಯಲ್ಲಿ ಅಭಿನಂದಿಸಿ, ಗೌರವಿಸಲಾಯಿತು.
ಅಭಿನಂದನೆಗಳನ್ನು ಸ್ವೀಕರಿಸಿ ಮಾತನಾಡಿದ ಜಿ. ನೀಲಕಂಠಪ್ಪ ಅವರು, ಐದು ದಶಕಗಳ ಕಾಲ ಸಹಕಾರಿ ಕ್ಷೇತ್ರದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿರುವ ನನಗೆ `ಸಹಕಾರ ರತ್ನ' ಸಿಕ್ಕಿದೆ. ಸಹಕಾರ ಕ್ಷೇತ್ರದಲ್ಲಿ ಇರುವ ಪ್ರತಿಯೊಬ್ಬರೂ ಈ ಪ್ರಶಸ್ತಿಗೆ ಅರ್ಹರಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲರಿಗೂ ಈ ಪ್ರಶಸ್ತಿ ಸಿಗುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ಜನತಾ ಬಜಾರ್ ಹಂಗಾಮಿ ಅಧ್ಯಕ್ಷರಾದ ಕೇದಾರನಾಥ್, ಮಾಜಿ ಅಧ್ಯಕ್ಷರಾದ ಪಲ್ಲೇದ ಮೈತ್ರಿ, ಮಾಜಿ ಉಪಾಧ್ಯಕ್ಷರಾದ ಪಿ. ದಾನರೆಡ್ಡಿ ಮತ್ತು ನಸೀಮಾ ಬೇಗಂ, ನಿರ್ದೇಶಕರುಗಳಾದ ವೆಂಕಟೇಶ ಹೆಗಡೆ, ಚನ್ನಬಸಪ್ಪ ಕೋರಿ, ನರೇಶ್, ಭರಮರೆಡ್ಡಿ, ವೆಂಕಟಸ್ವಾಮಿ, ಜೆ.ಬಿ. ಮುಜಾಹಿದ್ ಅಲಿ, ಪ್ರದೀಪ್ ರೆಡ್ಡಿ, ಎಚ್.ಎಂ. ಮಹೇಂದ್ರ ಕುಮಾರ್, ಅಧಿಕಾರಿ ರಾಮು ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್