ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರಜ್ಞೆ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಎಬಿವಿಪಿ ಪಾತ್ರ ಮಹತ್ವದ್ದು
ವಿಜಯಪುರ, 16 ನವೆಂಬರ್ (ಹಿ.ಸ.) ವಿದ್ಯಾರ್ಥಿ ಶಿಕ್ಷಣ ಸೇವಾ ಟ್ರಸ್ಟ್ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಬೆಳಗಾವಿ ವಿಭಾಗದ ನೂತನ ಕಾರ್ಯಾಲಯವಾಗಿ ಬೆಳಗಾವಿಯ ಭಾಗ್ಯನಗರದಲ್ಲಿ ನಿರ್ಮಾಣಗೊಂಡಿರುವ ‘ಸ್ವರಾಜ್ಯ’ ಕಾರ್ಯಾಲಯದ ಉದ್ಘಾಟನಾ ಸಮಾರಂಭಕ್ಕೆ ಬಿಜೆಪಿ ಮುಖಂಡರಾದ ಭರತ್ ಕೋಳಿ ಅವರು ಪ್
ಕಾರ್ಯಾಲಯ


ವಿಜಯಪುರ, 16 ನವೆಂಬರ್ (ಹಿ.ಸ.)

ವಿದ್ಯಾರ್ಥಿ ಶಿಕ್ಷಣ ಸೇವಾ ಟ್ರಸ್ಟ್ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಬೆಳಗಾವಿ ವಿಭಾಗದ ನೂತನ ಕಾರ್ಯಾಲಯವಾಗಿ ಬೆಳಗಾವಿಯ ಭಾಗ್ಯನಗರದಲ್ಲಿ ನಿರ್ಮಾಣಗೊಂಡಿರುವ ‘ಸ್ವರಾಜ್ಯ’ ಕಾರ್ಯಾಲಯದ ಉದ್ಘಾಟನಾ ಸಮಾರಂಭಕ್ಕೆ ಬಿಜೆಪಿ ಮುಖಂಡರಾದ ಭರತ್ ಕೋಳಿ ಅವರು ಪ್ರಕಟಣೆ ಮೂಲಕ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿದ್ಯಾರ್ಥಿ ಸಮುದಾಯದ ಸಂಘಟನೆ ಮತ್ತು ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೀಡುತ್ತಿರುವ ಕೊಡುಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ರಾಷ್ಟ್ರ ಪುನರ್ನಿರ್ಮಾಣದಲ್ಲಿ ಎಬಿವಿಪಿ ಪಾತ್ರ ಶ್ಲಾಘನೀಯ

“ಜ್ಞಾನ, ಶೀಲ ಮತ್ತು ಏಕತೆ” ಎಂಬ ಉದಾತ್ತ ಧ್ಯೇಯವಾಕ್ಯದೊಂದಿಗೆ ರಾಷ್ಟ್ರ ಪುನರ್ನಿರ್ಮಾಣದ ಸಂಕಲ್ಪವನ್ನು ಹೊತ್ತು ಸಾಗುತ್ತಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ವಿಚಾರಧಾರೆ, ಭಾರತೀಯ ಸಂಸ್ಕೃತಿ, ಗುಣಮಟ್ಟದ ಶಿಕ್ಷಣ, ಸಂಸ್ಕಾರ, ರಾಷ್ಟ್ರಪ್ರೇಮ, ನಾಯಕತ್ವದ ಗುಣಗಳು ಹಾಗೂ ಸಾಮಾಜಿಕ ಬದ್ಧತೆಯನ್ನು ಬೆಳೆಸುವ ಅತ್ಯಂತ ಮಹತ್ವದ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ ಎಂದು ಭರತ್ ಕೋಳಿ ಅವರು ಬಣ್ಣಿಸಿದ್ದಾರೆ.

ಯುವಶಕ್ತಿಯ ಸಂಘಟನೆ ಮತ್ತು ರಾಷ್ಟ್ರಪ್ರಜ್ಞೆಯ ಕೇಂದ್ರವಾಗಲಿ

ನೂತನ ಕಾರ್ಯಾಲಯದ ಮಹತ್ವದ ಕುರಿತು ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಭಾಗ್ಯನಗರದಲ್ಲಿ ಉದ್ಘಾಟನೆಗೊಂಡಿರುವ 'ಸ್ವರಾಜ್ಯ’ ಕಾರ್ಯಾಲಯವು ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರಜ್ಞೆ ಮೂಡಿಸುವ, ಯುವಶಕ್ತಿಯನ್ನು ಸಕಾರಾತ್ಮಕವಾಗಿ ಸಂಘಟಿಸುವ ಹಾಗೂ ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮನೋಭಾವವನ್ನು ಬೆಳೆಸುವ ಪ್ರಮುಖ ಕೇಂದ್ರವಾಗಿ ರೂಪುಗೊಳ್ಳಲಿ ಎಂದು ಆಶಯ ವ್ಯಕ್ತಪಡಿಸಿದರು.

ರಾಷ್ಟ್ರ ಪುನರ್ನಿರ್ಮಾಣದ ಮಹತ್ಕಾರ್ಯಕ್ಕೆ ಹೊಸ ಆಯಾಮ ನೀಡುವ ಈ ನೂತನ ಕಾರ್ಯಾಲಯವು ಯುವಜನತೆಗೆ ನಿರಂತರ ಸ್ಫೂರ್ತಿ, ಪ್ರೇರಣೆ ಹಾಗೂ ಸಂಘಟನಾ ಶಕ್ತಿಯ ಕೇಂದ್ರವಾಗಿ ಬೆಳೆಯಲಿ. ಆ ಮೂಲಕ ಭವಿಷ್ಯದ ಯುವ ಪೀಳಿಗೆಯಲ್ಲಿ ರಾಷ್ಟ್ರಾಭಿಮಾನ, ಸಾಮಾಜಿಕ ಜವಾಬ್ದಾರಿ ಮತ್ತು ನಿಸ್ವಾರ್ಥ ಸೇವಾ ಮನೋಭಾವವನ್ನು ಮತ್ತಷ್ಟು ಬಲಪಡಿಸಲಿ ಎಂದು ಮನಃಪೂರ್ವಕವಾಗಿ ಹಾರೈಸುತ್ತೇನೆ ಎಂದು ಬಿಜೆಪಿ ಮುಖಂಡ ಭರತ್ ಕೋಳಿ ಅವರು ತಮ್ಮ ಶುಭ ಸಂದೇಶದಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande