ಕೌಶಲ್ಯ ತರಬೇತಿ ಪಡೆದ 65 ವಿದ್ಯಾರ್ಥಿನಿಯರಿಗೆ ಪ್ರಮಾಣಪತ್ರ ವಿತರಣೆ
ತೋರಣಗಲ್ಲು, 16 ನವೆಂಬರ್ (ಹಿ.ಸ.) ಜೆಎಸ್‌ಡಬ್ಲ್ಯು ಫೌಂಡೇಶನ್‌ನ ‘ಸ್ಕಿಲ್ ಸ್ಪಾರ್ಕ್’ ಯೋಜನೆಯಡಿ 45 ದಿನಗಳ ಕಾಲ ಮೊಬೈಲ್ ಜೋಡಣೆ, ಚಿಲ್ಲರೆ ವ್ಯಾಪಾರ ನಿರ್ವಹಣೆ ಹಾಗೂ ಕೃತಕ ಬುದ್ಧಿಮತ್ತೆ ತರಬೇತಿ ಪಡೆದ 65 ವಿದ್ಯಾರ್ಥಿನಿಯರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ನಾಲ್ಕನೇ ತಂಡದ ತರಬೇ
ಜೆಎಸ್ಡಬ್ಲ್ಯು ಫೌಂಡೇಶನ್ : 65 ವಿದ್ಯಾರ್ಥಿನಿಯರಿಗೆ ಪ್ರಮಾಣಪತ್ರ, 42 ಮಂದಿಗೆ ಉದ್ಯೋಗ


ಜೆಎಸ್ಡಬ್ಲ್ಯು ಫೌಂಡೇಶನ್ : 65 ವಿದ್ಯಾರ್ಥಿನಿಯರಿಗೆ ಪ್ರಮಾಣಪತ್ರ, 42 ಮಂದಿಗೆ ಉದ್ಯೋಗ


ತೋರಣಗಲ್ಲು, 16 ನವೆಂಬರ್ (ಹಿ.ಸ.)

ಜೆಎಸ್‌ಡಬ್ಲ್ಯು ಫೌಂಡೇಶನ್‌ನ ‘ಸ್ಕಿಲ್ ಸ್ಪಾರ್ಕ್’ ಯೋಜನೆಯಡಿ 45 ದಿನಗಳ ಕಾಲ ಮೊಬೈಲ್ ಜೋಡಣೆ, ಚಿಲ್ಲರೆ ವ್ಯಾಪಾರ ನಿರ್ವಹಣೆ ಹಾಗೂ ಕೃತಕ ಬುದ್ಧಿಮತ್ತೆ ತರಬೇತಿ ಪಡೆದ 65 ವಿದ್ಯಾರ್ಥಿನಿಯರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ನಾಲ್ಕನೇ ತಂಡದ ತರಬೇತಿ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಯಿತು.

ತರಬೇತಿ ಪಡೆದ 65 ವಿದ್ಯಾರ್ಥಿನಿಯರ ಪೈಕಿ 42 ಮಂದಿಗೆ ಉದ್ಯೋಗ ದೊರೆತಿದ್ದು, ಅವರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು. ಬೆಂಗಳೂರು, ಬಳ್ಳಾರಿ ಹಾಗೂ ಹೊಸಪೇಟೆಯ ಫಾಕ್ಸ್‌ಕಾನ್, ಬ್ಯಾಂಕ್ ಆಫ್ ಬರೋಡಾ, ಮಹೀಂದ್ರಾ ವಾಹನ ಮಾರಾಟ ಮಳಿಗೆ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರು ಉದ್ಯೋಗ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಜೆಎಸ್‌ಡಬ್ಲ್ಯು ಫೌಂಡೇಶನ್‌ನ ದಕ್ಷಿಣ ವಲಯದ ಮುಖ್ಯಸ್ಥ ಪೆದ್ದಣ್ಣ ಬೀಡಾಲ ಮಾತನಾಡಿ, ಯುವತಿಯರು ಆತ್ಮವಿಶ್ವಾಸದಿಂದ ಮುನ್ನಡೆಯುವುದರ ಜತೆಗೆ ನಿರಂತರವಾಗಿ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜೆಎಸ್‌ಡಬ್ಲ್ಯು ಸ್ಟೀಲ್ಸ್‌ನ ಸಾಂಸ್ಥಿಕ ವ್ಯವಹಾರಗಳ ಪ್ರತಿನಿಧಿ ಮಲ್ಲಿಕಾರ್ಜುನ, ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ವಿಭಾಗದ ಮುಖ್ಯಸ್ಥೆ ಭಾರತಿ ಪಳನಿಸ್ವಾಮಿ, ಹೆಡ್ಸ್ ಹೆಲ್ಡ್ ಹೈ ಫೌಂಡೇಶನ್‌ನ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥೆ ಕೆ. ವಲ್ಲಿ, ಜೆಎಸ್‌ಡಬ್ಲ್ಯು ಫೌಂಡೇಶನ್‌ನ ಕೌಶಲ್ಯ ಮತ್ತು ಜೀವನೋಪಾಯ ವಿಭಾಗದ ಮುಖ್ಯಸ್ಥೆ ಶ್ರೇಷ್ಠಾ ಭಟ್ಟಾಚಾರ್ಜಿ, ಕಾರ್ಯಕ್ರಮ ವ್ಯವಸ್ಥಾಪಕ ರವಿ ತಳವಾರ್ ಸೇರಿದಂತೆ ತರಬೇತುದಾರರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande