ಗಾಳಿಯಲ್ಲಿ ಗುಂಡು ಹೊಡೆದ ಸಿಎಂ: ಆರ್. ಅಶೋಕ್ ವಾಗ್ದಾಳಿ
ಬೆಂಗಳೂರು, 08 ಅಕ್ಟೋಬರ್ (ಹಿ.ಸ.): ಮಾರುವೇಷದ ಕಾರ್ಯಾಚರಣೆ, ರಹಸ್ಯ ರೆಕಾರ್ಡಿಂಗ್ ಹಾಗೂ ಸಚಿವರನ್ನು ‘ಖೆಡ್ಡಾ’ಕ್ಕೆ ಬೀಳಿಸುವ ಸಂಚು ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿರುವುದನ್ನು ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ. ಈ ಕುರಿತು ‘ಎಕ್ಸ್‌’ನಲ್ಲಿ ಹೇಳಿ
ಪ್ರತಿಪಕ್ಷ ನಾಯಕ ಅಶೋಕ ಸಂಗ್ರಹ ಚಿತ್ರ


ಬೆಂಗಳೂರು, 08 ಅಕ್ಟೋಬರ್ (ಹಿ.ಸ.):

ಮಾರುವೇಷದ ಕಾರ್ಯಾಚರಣೆ, ರಹಸ್ಯ ರೆಕಾರ್ಡಿಂಗ್ ಹಾಗೂ ಸಚಿವರನ್ನು ‘ಖೆಡ್ಡಾ’ಕ್ಕೆ ಬೀಳಿಸುವ ಸಂಚು ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿರುವುದನ್ನು ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಹೇಳಿಕೆ ನೀಡಿರುವ ಅಶೋಕ್, ಸಾಂವಿಧಾನಿಕ ಹುದ್ದೆಯಲ್ಲಿರುವ ಮುಖ್ಯಮಂತ್ರಿಗಳು ಈ ರೀತಿ ಗಾಳಿಯಲ್ಲಿ ಗುಂಡು ಹೊಡೆದಂತೆ ಮಾತನಾಡಬಾರದು. ನಿರ್ದಿಷ್ಟವಾಗಿ ಯಾರು ತಪ್ಪು ಮಾಡಿದ್ದಾರೆ ಎಂಬುದು ತಿಳಿಯಬೇಕು ಎಂದು ಹೇಳಿದ್ದಾರೆ.

‘ಖೆಡ್ಡಾ’ ರಾಜಕಾರಣದ ಪಾಠವನ್ನು ಕರ್ನಾಟಕಕ್ಕೆ ಪರಿಚಯಿಸಿದವರು ಯಾರು? ಹಿಂದೆ ಯಾರನ್ನೆಲ್ಲ ಇದೇ ರೀತಿಯ ತಂತ್ರಗಳಿಂದ ಸಿಲುಕಿಸಲು ಪ್ರಯತ್ನಿಸಲಾಗಿದೆ ಎಂಬುದನ್ನು ರಾಜ್ಯದ ಜನ ಮರೆತಿಲ್ಲ ಎಂದು ಅವರು ಹೇಳಿದ್ದಾರೆ.

ಈಗ ಅದೇ ತಂತ್ರ ತಮ್ಮ ಸರ್ಕಾರದ ಸಚಿವರ ಮೇಲೆಯೇ ನಡೆಯುತ್ತಿದೆ ಎಂದು ಮುಖ್ಯಮಂತ್ರಿಗಳೇ ಹೇಳುತ್ತಿರುವುದು ವಿಪರ್ಯಾಸವಲ್ಲವೇ ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ಖಾಸಗಿ ಏಜೆನ್ಸಿಗಳು ಯಾರ ಪರವಾಗಿ ಕೆಲಸ ಮಾಡುತ್ತಿವೆ, ಯಾರ ಹಣ, ಯಾರ ಸೂಚನೆ ಹಾಗೂ ಯಾರ ರಾಜಕೀಯ ಲಾಭಕ್ಕಾಗಿ ಈ ಕಾರ್ಯಾಚರಣೆ ನಡೆಯುತ್ತಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಆರೋಪ-ಪ್ರತ್ಯಾರೋಪಗಳ ರಾಜಕಾರಣ ಸಾಕು. ರಾಜ್ಯದ ಜನರಿಗೆ ಸತ್ಯವನ್ನು ಬಹಿರಂಗಪಡಿಸಬೇಕು. ಜನರ ಸರ್ಕಾರ ಜನರ ಮುಂದೆ ಪಾರದರ್ಶಕವಾಗಿರಬೇಕು; ಮಾರುವೇಷದ ರಾಜಕಾರಣದ ಹಿಂದೆ ಅಡಗಿಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಅಶೋಕ್ ಒತ್ತಾಯಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande