ನಕಲಿ ಜಾತಿ ಪ್ರಮಾಣ ಪತ್ರದ ಮೂಲಕ ಸರ್ಕಾರದ ಅನುದಾನ ದುರ್ಬಳಕೆ:ಮಹಿಳೆಗೆ ಜೈಲು ಶಿಕ್ಷೆ ಹಾಗೂ ದಂಡ
ಬಳ್ಳಾರಿ, 07 ಅಕ್ಟೋಬರ್ (ಹಿ.ಸ.) ನಕಲಿ ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ) ಸೃಷ್ಟಿಸಿ ಸರ್ಕಾರದಿಂದ ಅಕ್ರಮವಾಗಿ ಅನುದಾನ ಪಡೆದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರಿಗೆ ಜಿಲ್ಲಾ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ಒಟ್ಟು ರೂ.25,000 ದಂಡ ವಿಧಿಸಿ ಆದೇಶ ಹೊರಡಿಸಿದೆ
ನಕಲಿ ಜಾತಿ ಪ್ರಮಾಣ ಪತ್ರದ ಮೂಲಕ ಸರ್ಕಾರದ ಅನುದಾನ ದುರ್ಬಳಕೆ:ಮಹಿಳೆಗೆ ಜೈಲು ಶಿಕ್ಷೆ ಹಾಗೂ ದಂಡ


ಬಳ್ಳಾರಿ, 07 ಅಕ್ಟೋಬರ್ (ಹಿ.ಸ.)

ನಕಲಿ ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ) ಸೃಷ್ಟಿಸಿ ಸರ್ಕಾರದಿಂದ ಅಕ್ರಮವಾಗಿ ಅನುದಾನ ಪಡೆದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರಿಗೆ ಜಿಲ್ಲಾ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ಒಟ್ಟು ರೂ.25,000 ದಂಡ ವಿಧಿಸಿ ಆದೇಶ ಹೊರಡಿಸಿದೆ.

ಪ್ರಕರಣದ ಹಿನ್ನೆಲೆ:

ಪ್ರಕರಣದ ಪ್ರಮುಖ ಆರೋಪಿತಳಾದ ಬಿ. ಗೀತಾ ಅಲಿಯಾಸ್ ಗೀತಮ್ಮ (ಗಂಡ: ನಾಗೇಶ) ಅವರ ತಾಯಿ ಪ್ರವರ್ಗ-3(ಎ) ವರ್ಗದ ‘ಬಲಿಜ’ ಜಾತಿಗೆ ಹಾಗೂ ತಂದೆ ಹನುಮಂತರೆಡ್ಡಿ ಪ್ರವರ್ಗ-3(ಎ) ವರ್ಗದ ‘ಹಿಂದೂ ರೆಡ್ಡಿ’ ಜಾತಿಗೆ ಸೇರಿದವರಾಗಿದ್ದಾರೆ. ಆರೋಪಿತಳಾಗಲಿ ಅಥವಾ ಆಕೆಯ ತಂದೆ-ತಾಯಿಯಾಗಲಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಲ್ಲದಿದ್ದರೂ, ನಕಲಿ ಜಾತಿ ಪ್ರಮಾಣ ಪತ್ರ ಸೃಷ್ಟಿಸಿ ಸರ್ಕಾರದ ಅನುದಾನವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಬಳ್ಳಾರಿಯ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಗುನ್ನೆ ಸಂ: 93/2020) ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ ಹೆಚ್.ಎ. ಮೋಹನ್ ಅವರು, ಆರೋಪಿತಳಿಗೆ ಭಾ.ದಂ.ಸ0. ಕಲಂ 198 ಅಡಿಯಲ್ಲಿ 2 ವರ್ಷಗಳ ಸಾದಾ ಕಾರಗೃಹ ಶಿಕ್ಷೆ ಮತ್ತು 10,000 ದಂಡ. ಕಲಂ 3(1)(ಕ್ಯೂ) ಎಸ್.ಸಿ./ಎಸ್.ಟಿ. ಕಾಯ್ದೆ 2015ರ ಅಡಿಯಲ್ಲಿ 1 ವರ್ಷ ಸಾದಾ ಕಾರಗೃಹ ಶಿಕ್ಷೆ ಮತ್ತು 5,000 ದಂಡ ಸೇರಿದಂತೆ ಒಟ್ಟು 25,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ತನಿಖಾ ಸಮಯದಲ್ಲಿ 4ನೇ ಆರೋಪಿ ಮೃತಪಟ್ಟಿದ್ದರಿಂದ ಅವರ ವಿರುದ್ಧದ ಪ್ರಕರಣ ರದ್ದಾಗಿದ್ದು, 2ನೇ ಮತ್ತು 3ನೇ ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷಾö್ಯಧಾರಗಳು ಸಾಬೀತಾಗದ ಕಾರಣ ಅವರನ್ನು ನ್ಯಾಯಾಲಯ ಬಿಡುಗಡೆ ಮಾಡಿದೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶೇಖರಪ್ಪ ಹಾಗೂ ಲಕ್ಷಿದೇವಿ ಪಾಟೀಲ್ ಅವರು ವಾದ ಮಂಡಿಸಿದ್ದರು. ಅಂದಿನ ಬ್ರೂಸ್ಪೇಟೆ ಠಾಣೆಯ ಆರ್. ನಾಗರಾಜ ಪ್ರಕರಣ ದಾಖಲಿಸಿಕೊಂಡಿದ್ದು, ದಾವಣಗೆರೆ ಸಿಐಡಿಯ ಪಿ.ಐ. ಹನುಮಂತಪ್ಪ ಶಿರಿಹಳ್ಳಿ ಹಾಗೂ ಪಿ.ಐ. ಎ. ಕೃಷ್ಣಾನಾಯಕ್ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಡಿವೈಎಸ್ಪಿ ವಿ. ರಘುಕುಮಾರ್ ಅವರ ಮಾರ್ಗದರ್ಶನದಲ್ಲಿ ಮುಖ್ಯ ಪೇದೆಗಳಾದ ಪಾಂಡುರ0ಗ.ಕೆ ಹಾಗೂ ವೀರೇಶ್ ಬಾಬು ಅವರು ಸಾಕ್ಷಿಗಳನ್ನು ಹಾಜರುಪಡಿಸಲು ಸಹಕರಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande