ಬಳ್ಳಾರಿ : ಮೆಡಿಕಲ್ ಮಾಫಿಯಾ ತಡೆಗಟ್ಟಲು ಆಗ್ರಹ
ಬಳ್ಳಾರಿ, 07 ಅಕ್ಟೋಬರ್ (ಹಿ.ಸ.) ಬಳ್ಳಾರಿಯಲ್ಲಿ ಮೆಡಿಕಲ್ ಮಾಫಿಯಾ ಎಗ್ಗಿಲ್ಲದಂತೆ ನಡೆದಿದ್ದು ಅಧಿಕಾರಿಗಳು ತ್ವರಿತವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಆಗ್ರಹಿಸಿದೆ. ಕರ್ನಾಟಕ ರಕ್ಷಣಾ ವೇದಿಕೆ, (ಶಿವರಾಮೇಗೌಡ ಬಣ)ದ ಬಳ್ಳಾರಿ - ವಿಜಯನಗರ ಜಿಲ್ಲೆಯ
ಬಳ್ಳಾರಿ : ಮೆಡಿಕಲ್ ಮಾಫಿಯಾ ತಡೆಗಟ್ಟಲು ಆಗ್ರಹ


ಬಳ್ಳಾರಿ : ಮೆಡಿಕಲ್ ಮಾಫಿಯಾ ತಡೆಗಟ್ಟಲು ಆಗ್ರಹ


ಬಳ್ಳಾರಿ, 07 ಅಕ್ಟೋಬರ್ (ಹಿ.ಸ.)

ಬಳ್ಳಾರಿಯಲ್ಲಿ ಮೆಡಿಕಲ್ ಮಾಫಿಯಾ ಎಗ್ಗಿಲ್ಲದಂತೆ ನಡೆದಿದ್ದು ಅಧಿಕಾರಿಗಳು ತ್ವರಿತವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಆಗ್ರಹಿಸಿದೆ.

ಕರ್ನಾಟಕ ರಕ್ಷಣಾ ವೇದಿಕೆ, (ಶಿವರಾಮೇಗೌಡ ಬಣ)ದ ಬಳ್ಳಾರಿ - ವಿಜಯನಗರ ಜಿಲ್ಲೆಯ ಅಧ್ಯಕ್ಷರಾದ ಜಿ. ರಾಜಶೇಖರ್ ಅವರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿ, ಮನಸೋ ಇಚ್ಚೆ ಔಷಧಗಳ ಬೆಲೆಯನ್ನು ನಿಗದಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ರೋಗಿಗಳನ್ನು ಆರ್ಥಿಕವಾಗಿ ಶೋಷಣೆ ಮಾಡಲಾಗುತ್ತಿದೆ. ಸರ್ಕಾರ ಔಷಧಿ ಕ್ಷೇತ್ರದಲ್ಲಿಯ ಮಾಫಿಯಾ, ಶೋಷಣೆಗಳನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.

ಅನೇಕ ಕ್ಲಿನಿಕ್ ಮತ್ತು ಮೆಡಿಕಲ್ ಶಾಪ್ಗಳ ಮಧ್ಯೆ ಹೊಂದಾಣಿಕೆ, ಧರ ನಿಗಧಿಪಡಿಸುವಿಕೆ ; ಕೊಡು -ಕೊಳ್ಳುವ ವ್ಯವಸ್ಥೆಗಳಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು, ಲ್ಯಾಬ್ಗಳಲ್ಲಿಯ ತಜ್ಞರು ಹಾಗೂ ಕೆಲ ತಾಂತ್ರಿಕ ಸಿಬ್ಬಂದಿಗಳು ಖಾಸಗಿಯಾಗಿ ಕ್ಲಿನಿಕ್ಗಳನ್ನು ಹೊಂದಿದ್ದಾರೆ. ಇನ್ನೂ ಕೆಲವರು ನರ್ಸಿಂಗ್ ಹೋಂಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯು ರೋಗಿಗಳು ಮತ್ತು ಅವರ ಕುಟುಂಬದ ಸದಸ್ಯರನ್ನು ಶೋಷಿಸುತ್ತಿರುವುದನ್ನು ತಪ್ಪಿಸಲು ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳು ತ್ವರಿತವಾಗಿ ಕ್ರಮಕೈಗೊಳ್ಳಬೇಕು ಎಂದು ಕೋರಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande