1 ಕೋಟಿಗೆ ರೆಡ್ ಸ್ಯಾಂಡ್ ಬೋವಾ ಹಾವು ಮಾರಾಟಕ್ಕೆ ಯತ್ನ; ಓರ್ವನ ಬಂಧನ
ಮೂಢನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ₹1 ಕೋಟಿಗೆ ರೆಡ್ ಸ್ಯಾಂಡ್ ಬೋವಾ ಹಾವು ಮಾರಾಟಕ್ಕೆ ಯತ್ನಿಸಿದ ಆರೋಪಿಯನ್ನು ಸಿಸಿಬಿ ಬಂಧಿಸಿದೆ. ಮತ್ತೊಂದು ಪ್ರಕರಣದಲ್ಲಿ 970 ಸಾಫ್ಟ್ ಕೋರಲ್ ಸೀ ಫ್ಯಾನ್ಗಳ ಅಕ್ರಮ ವ್ಯಾಪಾರಕ್ಕೆ ಯತ್ನಿಸಿದ ಆರು ಮಂದಿಯನ್ನು ಬಂಧಿಸಲಾಗಿದೆ.
red-sand-boa-snake-sold-for-rs-1-crore-ccB-arrests-accused


ಬೆಂಗಳೂರು, 06 ಅಕ್ಟೋಬರ್ (ಹಿ.ಸ.):

ಸಾರ್ವಜನಿಕರಲ್ಲಿರುವ ಮೂಢನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಅಪರೂಪದ ರೆಡ್ ಸ್ಯಾಂಡ್ ಬೋವಾ ಹಾವನ್ನು ₹1 ಕೋಟಿಗೆ ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ಸಿಸಿಬಿ ವಿಶೇಷ ತನಿಖಾ ತಂಡ ಓರ್ವ ಆರೋಪಿಯನ್ನು ಬಂಧಿಸಿದೆ.

ಆರೋಪಿಯು ರೆಡ್ ಸ್ಯಾಂಡ್ ಬೋವಾ ಹಾವಿಗೆ ಹೆಚ್ಚಿನ ಬೆಲೆಯಿದೆ ಎಂದು ನಂಬಿಸಿ ಮಾರಾಟಕ್ಕೆ ಮುಂದಾಗಿದ್ದ ಎನ್ನಲಾಗಿದೆ.

ಕಾರ್ಯಾಚರಣೆ ನಡೆಸಿದ ಸಿಸಿಬಿ ಅಧಿಕಾರಿಗಳು ಒಂದು ಜೀವಂತ ಹಾವು ಹಾಗೂ ಒಂದು ಮೊಬೈಲ್ ಫೋನ್ನ್ನು ವಶಪಡಿಸಿಕೊಂಡಿದ್ದಾರೆ.

ಇದೇ ವೇಳೆ ಮತ್ತೊಂದು ಪ್ರಕರಣದಲ್ಲಿ ಕೋರಲ್ ಸೀ ಫ್ಯಾನ್ಗಳನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ 970 ಸಾಫ್ಟ್ ಕೋರಲ್ ಸೀ ಫ್ಯಾನ್ಗಳು ಹಾಗೂ ಮೂರು ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಲಾಗಿದೆ.

ಅಪರೂಪದ ಜೀವಿಗಳು ಹಾಗೂ ಸಮುದ್ರ ಜೀವಿಗಳ ಅಕ್ರಮ ಸಂಗ್ರಹ, ಸಾಗಣೆ ಮತ್ತು ವ್ಯಾಪಾರವನ್ನು ತಡೆಯುವ ನಿಟ್ಟಿನಲ್ಲಿ ಸಿಸಿಬಿ ವಿಶೇಷ ತನಿಖಾ ತಂಡ ಕಾರ್ಯಾಚರಣೆ ಮುಂದುವರಿಸಿದೆ.

“ಸಾರ್ವಜನಿಕರ ಮೂಢನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಅಪರೂಪದ ಜೀವಿಗಳ ಅಕ್ರಮ ವ್ಯಾಪಾರ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಅಪರೂಪದ ಜೀವಿಗಳು ಮತ್ತು ಸಮುದ್ರ ಜೀವಿಗಳ ಅಕ್ರಮ ವ್ಯಾಪಾರವನ್ನು ಮಟ್ಟಹಾಕಲು ಸಿಸಿಬಿ ಸದಾ ಸನ್ನದ್ಧವಾಗಿರಲಿದೆ ಎಂದು ಪ್ರಕಟಣೆ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande