ಈಶಾನ್ಯ ಶಿಕ್ಷಕರ ಕ್ಷೇತ್ರ : ಆರು ಅಭ್ಯರ್ಥಿ - 10 ನಾಮಪತ್ರ
ಬಳ್ಳಾರಿ, 06 ಅಕ್ಟೋಬರ್ (ಹಿ.ಸ.) ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಒಂದು ಸ್ಥಾನ ಆಯ್ಕೆಯ ಚುನಾವಣೆಗೆ ಅ.05 (ಸೋಮವಾರ) ಆರು ಅಭ್ಯರ್ಥಿಗಳಿಂದ 10 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಹೀರಾ ನಸೀಮ್
ಈಶಾನ್ಯ ಶಿಕ್ಷಕರ ಕ್ಷೇತ್ರ : ಆರು ಅಭ್ಯರ್ಥಿ - 10 ನಾಮಪತ್ರ


ಈಶಾನ್ಯ ಶಿಕ್ಷಕರ ಕ್ಷೇತ್ರ : ಆರು ಅಭ್ಯರ್ಥಿ - 10 ನಾಮಪತ್ರ


ಬಳ್ಳಾರಿ, 06 ಅಕ್ಟೋಬರ್ (ಹಿ.ಸ.)

ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಒಂದು ಸ್ಥಾನ ಆಯ್ಕೆಯ ಚುನಾವಣೆಗೆ ಅ.05 (ಸೋಮವಾರ) ಆರು ಅಭ್ಯರ್ಥಿಗಳಿಂದ 10 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಹೀರಾ ನಸೀಮ್ ಅವರು ತಿಳಿಸಿದ್ದಾರೆ.

ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಶಶೀಲ್ ಜಿ. ನಮೋಶಿ ತಂದೆ ಗಂಗಾಧರ ನಮೋಶಿ ಮತ್ತು ಭಾರತೀಯ ರಾಷ್ಟಿಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಶರಣಪ್ಪ ಮಟ್ಟೂರ ತಂದೆ ಹಣಮಂತಪ್ಪ ಅವರು ತಲಾ ಮೂರು ನಾಮಪತ್ರ ಸಲ್ಲಿಸಿದ್ದಾರೆ.

ಇನ್ನು ಪಕ್ಷೇತರ ಅಭ್ಯರ್ಥಿಯಾಗಿ ಮಹೆಬೂಬ್ ತಂದೆ ಮಹ್ಮದ್ ಖಾಜಿ ಹುಸೇನ ವಂಟೆಳಿ, ರಾಹಕುಮಾರ ತಂದೆ ಮಾಣಿಕಪ್ಪ, ಶಿವಶಂಕರ ತಂದೆ ಅಣ್ಣಪ್ಪ ಹಾಗೂ ತುಳಸಪ್ಪ ದಾಸರ ತಂದೆ ಕರಿಯಪ್ಪ ದಾಸರ ಅವರು ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.

ಇದರಿಂದ ಇದುವರೆಗೆ ಒಂಭತ್ತು ಅಭ್ಯರ್ಥಿಗಳಿಂದ ಹದಿನೈದು ನಾಮಪತ್ರ ಸಲ್ಲಿಕೆಯಾದಂತಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande