
ಬಳ್ಳಾರಿ, 06 ಅಕ್ಟೋಬರ್ (ಹಿ.ಸ.)
ನಗರದ ಜೆಸ್ಕಾಂ ವ್ಯಾಪ್ತಿಯಲ್ಲಿ ಲಿಂಕ್ ಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಕ್ಟೋಬರ್ 8 ರಂದು ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.
ಜೆಸ್ಕಾಂ ನಗರ ಉಪವಿಭಾಗ-1 ರ ವ್ಯಾಪ್ತಿಗೆ ಒಳಪಡುವ 220/11 ಕೆವಿ ಅಲ್ಲೀಪುರ ವಿದ್ಯುತ್ ವಿತರಣಾ ಕೇಂದ್ರದ ಬ್ಯಾಂಕ್-2 ರ ಎಫ್-34 ಫೀಡರ್ನಲ್ಲಿ ತುರ್ತು ಲಿಂಕ್ ಲೈನ್ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅ.08 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
ಫಸ್ಟ್ ಗೇಟ್, ಕೊರಚ ಸ್ಟ್ರೀಟ್, ಉರ್ದು ಟ್ರೈನಿಂಗ್ ಸ್ಕೂಲ್, ಕಡಪಗೆರೆ, ಟೈಲರ್ ಸ್ಟ್ರೀಟ್, ವಡ್ಡೇ ನಾಗಪ್ಪ ಕಾಲೋನಿ, ತಿಲಕ್ ನಗರ್, ವಿನಾಯಕ ನಗರ, ಐಶ್ವರ್ಯ ಕಾಲೋನಿ, ಐಟಿಐ ಕಾಲೇಜ್, ರೇಡಿಯೋ ಪಾರ್ಕ್, ಕೌಲ್ ಬಜಾರ್ ಮುಖ್ಯ ರಸ್ತೆ.
ಸಾರ್ವಜನಿಕರು ಜೆಸ್ಕಾಂ ಜೊತೆ ಸಹಕರಿಸಬೇಕಾಗಿ ಬಳ್ಳಾರಿಯ ನಗರ ಉಪವಿಭಾಗ-1 ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್