ಮಲ್ಲಿಕಾರ್ಜುನ ಖರ್ಗೆ ಭೇಷರತ್ತ ಕ್ಷಮೆ ಕೇಳಲು ಮಾಜಿ ಶಾಸಕ ಸೋಮಶೇಖರ ರೆಡ್ಡಿ ಆಗ್ರಹ
ಬಳ್ಳಾರಿ, 27 ಅಕ್ಟೋಬರ್ (ಹಿ.ಸ.) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಂದೆಯವರ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಪೇಕ್ಷಾರ್ಹವಾಗಿ ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಜಿಲ್ಲಾ ಬಿಜೆಪಿ, ಖರ್ಗೆಯವರು ದೇಶದ ಕ್ಷಮೆ ಕೇಳಬೇಕು ಎಂದು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದೆ. ಪ್
ಮಲ್ಲಿಕಾರ್ಜುನ ಖರ್ಗೆಯವರು ಭೇಷರತ್ತಾಗಿ ಕ್ಷಮೆ ಕೇಳಲು ಆಗ್ರಹ : ಜಿಎಸ್ಆರ್


ಬಳ್ಳಾರಿ, 27 ಅಕ್ಟೋಬರ್ (ಹಿ.ಸ.)

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಂದೆಯವರ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಪೇಕ್ಷಾರ್ಹವಾಗಿ ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಜಿಲ್ಲಾ ಬಿಜೆಪಿ, ಖರ್ಗೆಯವರು ದೇಶದ ಕ್ಷಮೆ ಕೇಳಬೇಕು ಎಂದು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದೆ.

ಪ್ರತಿಭಟನೆಯ ನೇತೃತ್ವವಹಿಸಿದ್ದ ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ಉನ್ನತ ಸ್ಥಾನಕ್ಕೆ ಹೋಗಿದ್ದರೂ, ಅವರ ಕೀಳುಮಟ್ಟದ ಚಿಂತನೆಗಳನ್ನು ಬಿಟ್ಟಿಲ್ಲ. ತುಚ್ಛವಾಗಿ ಹೀಯಾಳಿಸಿ, ಅವಮಾನಿಸುವುದನ್ನು ಬಿಟ್ಟಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಆಕ್ಷೇಪಾರ್ಹವಾಗಿ ಆಡಿರುವ ಮಾತುಗಳಿಗೆ ದೇಶದ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಹೇಳಿಕೆಗೆ ದೇಶದ ಬೇಷರತ್ ಕ್ಷಮೆ ಕೇಳಬೇಕು. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ನೀಡಬೇಕು. ರಾಜಕೀಯದಲ್ಲಿ ವೈಯಕ್ತಿಕ ನಿಂದನೆಗೆ ಕಡಿವಾಣ ಹಾಕಬೇಕು. ವಿಶ್ವವೇ ಕೊಂಡಾಡುವ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕಾಂಗ್ರೆಸ್ ಭ್ರಮನಿರಸಗೊಂಡಿದೆ. ಕಾಂಗ್ರೆಸ್ನ ಸಂಸ್ಕøತಿಯನ್ನು - ಸಂಸ್ಕಾರವನ್ನು ಖರ್ಗೆ ಅವರ ಮಾತುಗಳು ಪ್ರತಿನಿಧಿಸುತ್ತಿವೆ ಎಂದರು.

ಮುಖಂಡರಾದ ಎಸ್. ಮಲ್ಲನಗೌಡ, ಕೆ.ಎಂ. ಮಹೇಶ್ವರಸ್ವಾಮಿ, ಎಸ್. ಗುರುಲಿಂಗನಗೌಡ, ಕೆ.ಎಸ್. ದಿವಾಕರ, ಮೋತ್ಕರ್ ಶ್ರೀನಿವಾಸ್, ಡಾ. ರೇಣುಕಾ ಮಂಜುನಾಥ್, ಕೆ.ಎ. ವೇಮಣ್ಣ, ಪಿ.ಎಸ್. ಸೋಮಲಿಂಗನಗೌಡ, ದರೂರು ಶಾಂತನಗೌಡ, ಕೋಳೂರು ಚಂದ್ರಶೇಖರ ಗೌಡ, ಮಲ್ಲಕಾರ್ಜುನಗೌಡ, ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande