



ಬಳ್ಳಾರಿ, 26 ಅಕ್ಟೋಬರ್ (ಹಿ.ಸ.)
ಹೈದರಾಬಾದ್ - 2026 ರ 20ನೇ ರಾಷ್ಟ್ರೀಯ ಟ್ರೈನ್-ಇನ್-ಇಂಟರ್-ಡಿಸ್ಟ್ರಿಕ್ಟ್ ಚಾಂಫಿಯನ್ಶಿಪ್ಗಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳ ಆಯ್ಕೆಗಾಗಿ ನಡೆದ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಈ ಪ್ರತಿಭಾವಂತರು ಆಯ್ಕೆಯಾಗಿದ್ದಾರೆ.
ಬಳ್ಳಾರಿ ಜಿಲ್ಲಾ ಅಥ್ಲೆಟಿಕ್ ಸಂಘದ ಮುಖಂಡರಾದ ಡಾ. ಎಸ್. ರವಿಶಂಕರ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.
14 ವರ್ಷದೊಳಗಿನ ಬಾಲಕರು ಮತ್ತು ಬಾಲಕಿಯರ `ಟ್ರಯಥ್ಲಾನ್ ಎ' ಗುಂಪಿನಲ್ಲಿ ತೆಕ್ಕಲಕೋಟೆಯ ಕನಕನಿಕೇತನ ಶಾಲೆಯ ಕೆ. ವೀರೇಂದ್ರ, ಬಳ್ಳಾರಿಯ ವಿಸ್ಡಂ ಲ್ಯಾಂಡ್ ಶಾಲೆಯ ವಿದ್ಯಾರ್ಥಿನಿಯ ಎಂ. ವೈಷ್ಣವಿ. `ಟ್ರಯಥ್ಲಾನ್ ಬಿ' ಗುಂಪಿನಲ್ಲಿ ಸಿರುಗುಪ್ಪದ ರನ್ ಫಾರ್ ಲೈಫ್ ಅಥ್ಲೆಟಿಕ್ಸ್ ಸ್ಪೋರ್ಟ್ ಕ್ಲಬ್ನ ಸ್ಮಣ್ವಿ ಪಾಟೀಲ್ ಮತ್ತು ಬಳ್ಳಾರಿಯ ವಿಸ್ಡಂ ಲ್ಯಾಂಡ್ ಶಾಲೆಯ ವಿದ್ಯಾರ್ಥಿ ಮೌಂಟ್. `ಟ್ರಯಥ್ಲಾನ್ ಸಿ' ಗುಂಪಿನ ಬಳ್ಳಾರಿಯ ವಿಸ್ಡಂ ಲ್ಯಾಂಡ್ ಶಾಲೆಯ ವಿದ್ಯಾರ್ಥಿ ಜಿ. ಅರವಿಂದ ಕುಮಾರ್ ಮತ್ತು ಬಳ್ಳಾರಿಯ ವಿಸ್ಡಂ ಲ್ಯಾಂಡ್ ಶಾಲೆಯ ವಿದ್ಯಾರ್ಥಿನಿ ಎಸ್. ಶೈಲಾ ಅವರು ಆಯ್ಕೆಯಾಗಿದ್ದಾರೆ.
16 ವರ್ಷದೊಳಗಿನ ಬಾಲಕರು ಮತ್ತು ಬಾಲಕಿಯರ ಸ್ಪರ್ಧೆಯಲ್ಲಿ ಸಿರುಗುಪ್ಪದ ರನ್ ಫಾರ್ ಲೈಫ್ ಅಥ್ಲೆಟಿಕ್ಸ್ ಸ್ಪೋರ್ಟ್ ಕ್ಲಬ್ನ ಭಾಗ್ಯಲಕ್ಮಿ ಸನಾ, ಹೊಸಪೇಟೆಯ ಚಿತ್ತವಾಡ್ಗಿಯ ಸರ್ಕಾರಿ ಪಿವಿಸಿ ಕಾಲೇಜಿನ ವಿದ್ಯಾರ್ಥಿ ಜಂಬನಹಳ್ಳಿ ಬಸವರಾಜ್, ಬಳ್ಳಾರಿಯ ಶ್ರೀ ವಿಶ್ವೇಶ್ವರಯ್ಯ ಪ್ರೌಢಶಾಲೆಯ ವಿದ್ಯಾರ್ಥಿ ಬಿ.ಎಸ್. ಪ್ರದೀಪ್, ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ವಿದ್ಯಾರ್ಥಿನಿ ಅನು, ತೋರಣಗಲ್ಲುನ ಜೆವಿಎಂ ಪ್ರೌಢಶಾಲೆಯ ವಿದ್ಯಾರ್ಥಿ ಅಂಕುಶರಾಜ್, ಸಿರಿಗೇರಿಯ ವಿದ್ಯಾರ್ಥಿನಿ ಜೆಪಿಸಿ ಬೊಪ್ಪಣ್ಣ ವರ್ಣಿಕಾ, ಬಳ್ಳಾರಿಯ ಡ್ರೀಂವಲ್ರ್ಡ್ ಶಾಲೆಯ ಹಫ್ಸಾ ಶೇಖ್ ಅವರು ಆಯ್ಕೆಯಾಗಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್