
ಬೆಂಗಳೂರು, 26 ಅಕ್ಟೋಬರ್ (ಹಿ.ಸ.):
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ತಂದೆಯವರ ಬಗ್ಗೆ ಮಾಡಿರುವಂತಹ ಹೇಳಿಕೆ ಅದು ಅವರ ಹಿರಿತನಕ್ಕೆ ಮತ್ತು ಅವರ ಘಣತೆಗೆ ತಕ್ಕುದಾಗಿದ್ದಲ್ಲ. ಇದು ಅತ್ಯಂತ ಖಂಡನೀಯ.
ಇದು ಕಾಂಗ್ರೆಸ್ ಪಕ್ಷ ಮತ್ತು ಅವರ ನಾಯಕರ ಹತಾಶ ಮನೋಭಾವನೆ ತೋರಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಯಾರನ್ನು ಚುನಾವಣೆಯಲ್ಲಿ ಸೋಲಿಸಲು ಆಗುವುದಿಲ್ಲ, ಈ ರೀತಿ ನಿಂದಿಸುವಂತಹ ಕೀಳುಮಟ್ಟದ ರಾಜಕಾರಣವನ್ನು ಕಾಂಗ್ರೆಸ್ ಪಕ್ಷ ಮಾಡುತ್ರಿದೆ. ಈಗಾಗಲೇ ಹಿಂದೆಯೂ ಈ ರೀತಿಯ ಟೀಕೆಗಳಿಗೆ ಜನ ಉತ್ತರ ಕೊಟ್ಟಿದ್ದಾರೆ. ಮುಂದು ಕೂಡ ಜನ ಉತ್ತರ ಕೊಡುತ್ತಾರೆ ಎಂದು ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಆ ಹಿಂದೆ ಈ ರೀತಿ ಹೇಳಿದಾಗ ಯಾವ ರೀತಿ ಜನ ಉತ್ತರ ಕೊಟ್ಟಿದ್ದಾರೆ ಅನ್ನುವುದನ್ನು ಗಮನಿಸಿ ಅವರು ಪ್ರತಿಕ್ರಿಯೆಯನ್ನು ಕೊಡಬೇಕು. ಆದರೆ, ಬಹಳ ದುರ್ದೈವ ವಶಾತ್ ಪ್ರಧಾನಮಂತ್ರಿಗಳ ತಂದೆಯವರನ್ನು, ತಾಯಿಯವರನ್ನು ಮಧ್ಯೆ ತರುವಂತದ್ದು ಇದು ಕಾಂಗ್ರೆಸ್ ಪಕ್ಷ ಒಂದು ರಾಜಕೀಯ ಪಕ್ಷವಾಗಿ ಉಳಿದಿಲ್ಲ. ಇದೊಂದು ಹತಾಶವಾಗಿರುವಂತಹ ಒಂದು ಕೆಟ್ಟ ಸಂಪ್ರದಾಯವನ್ನು ಹಾಕಿಕೊಂಡಿರುವಂತಹ ಒಂದು ಅನೈತಿಕ ಕೂಟ ಆಗಿದೆ. ಇದನ್ನು ಎಲ್ಲರೂ ಕೂಡ ಖಂಡಿಸುತ್ತಿರುವಂತದ್ದು ಸರ್ವವಿದಿತ ಎಂದು ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.