ದಸರಾ ಆಚರಣೆಯಲ್ಲಿ ಅಸ್ಪೃಶ್ಯತಾ ಆಚರಣೆ ; ಡಾ. ಅಶ್ವತ್ಥ ಅಂತ್ಯಜ ಖಂಡನೆ
ದಸರಾ ಆಚರಣೆಯಲ್ಲಿ ಅಸ್ಪೃಶ್ಯತಾ ಆಚರಣೆ ; ಡಾ. ಅಶ್ವತ್ಥ ಅಂತ್ಯಜ ಖಂಡನೆ
ಅಶ್ವತ್ಥ ಅಂತ್ಯಜ


ಕೋಲಾರ, ೨೪ ಅಕ್ಟೋಬರ್ (ಹಿ.ಸ) : ಮೈಸೂರು ದಸರಾ ಆಚರಣೆಯಲ್ಲಿ ನಂದಿಧ್ವಜ ಪೂಜೆ ಕಾರ್ಯಕ್ರಮದಲ್ಲಿ ದಲಿತ ಸಮುದಾಯದ ಭೋವಿ ಸಮಾಜದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿಗಳಾದ ಶಿವರಾಜ ತಂಗಡಗಿ, ಕೃಷಿ ಸಚಿವ ಬಲಗೈ ಸಮಾಜದ ನರೇಂದ್ರಸ್ವಾಮಿ ಹಾಗೂ ಎಡಗೈ ಸಮುದಾಯದ ಮುಜರಾಯಿ ಸಚಿವ ಬಸವಂತಪ್ಪ ರವರಿಗೆ ಪ್ರವೇಶವನ್ನು ನೀಡದೆ ನಂದಿಧ್ವಜ ಪೂಜೆ ಮಾಡಿರುವುದು ಅಮಾನಿಯವಾದ, ಕನ್ನಡನಾಡು ತಲೆ ತಗ್ಗಿಸುವಂತಹ ಅಸ್ಪೃಶ್ಯತಾ ಆಚರಣೆಯಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಯೋಜಕ ರಾಜ್ಯ ಅಧ್ಯಕ್ಷರಾದ ಡಾ. ಆರ್. ಅಶ್ವತ್ಥ ಅಂತ್ಯಜ ಕಳವಳ ವ್ಯಕ್ತಪಡಿಸಿದ್ದಾರೆ.

ಇಂತಹ ಮಾನವವಿರೋಧಿ ಕೃತ್ಯವನ್ನು ಗಂಭೀರವಾಗಿ ಪರಿಗಣಿಸದೆ ಸಂಬAಧಪಟ್ಟ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಕೃತ್ಯವನ್ನು ಮುಚ್ಚಿಹಾಕುವ ಪ್ರಯತ್ನವಾಗಿದೆ. ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಇದರ ಹೊಣೆಯನ್ನು ಹೊರಬೇಕಾಗಿದೆ. ಜೊತೆಗೆ ವಿರೋಧ ಪಕ್ಷದ ನಾಯಕರಾದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಇಂತಹ ಘಟನೆಯನ್ನು ಖಂಡಿಸುವಲ್ಲಿ ವಿಫಲವಾಗಿವೆ ಎಂದು ಸಾಹಿತಿ ಹಾಗೂ ರಾಜ್ಯ ಸಂಯೋಜಕಿ, ಎಸ್.ಸಿ. ಶೈಲಜ ಮತ್ತು ಕೇಂದ್ರ ಸಮಿತಿ ಸದಸ್ಯರು ಸಾಹಿತಿ, ಚಿಂತಕ ಮಾಸ್ತಿ ಜಗನ್ನಾಥರವರು ಖಂಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande