
ಹೊನ್ನಾಳಿ, 21 ಅಕ್ಟೋಬರ್ (ಹಿ.ಸ.):
ನಾಡಿನ ಶಾಂತಿ, ಸಮೃದ್ಧಿ ಹಾಗೂ ಸಕಲ ಜೀವಿಗಳ ಕಲ್ಯಾಣಕ್ಕಾಗಿ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಹೊನ್ನಾಳಿ ನಗರದ ಚನ್ನಪ್ಪ ಸ್ವಾಮಿ ಹಿರೇಕಲ್ಮಠದಲ್ಲಿ 27ನೇ ವರ್ಷದ ಚಂಡಿಕಾ ಹೋಮವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು.
ದಸರಾ ನವರಾತ್ರಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಚಂಡಿಕಾ ಹೋಮದಲ್ಲಿ ಆದಿಶಕ್ತಿ ತಾಯಿ ಚಂಡಿಕಾದೇವಿಯನ್ನು ವಿಶೇಷವಾಗಿ ಆರಾಧಿಸಿ, ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳ ಆಶೀರ್ವಾದವನ್ನು ಎಂ.ಪಿ. ರೇಣುಕಾಚಾರ್ಯ ಅವರು ಪಡೆದರು.
ನಾಡಿನ ಒಳಿತಿಗಾಗಿ ಹಾಗೂ ಲೋಕಕಲ್ಯಾಣದ ಉದ್ದೇಶದಿಂದ ಪ್ರತಿವರ್ಷ ಚಂಡಿಕಾ ಹೋಮವನ್ನು ಆಯೋಜಿಸಲಾಗುತ್ತಿದ್ದು, ಈ ಬಾರಿಯೂ 27ನೇ ವರ್ಷದ ಪೂಜಾ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು. ತಾಯಿ ಚಂಡಿಕಾದೇವಿಯ ಕೃಪೆಯಿಂದ ನಾಡಿನಲ್ಲಿ ಶಾಂತಿ, ಸಮೃದ್ಧಿ ನೆಲೆಸಬೇಕು. ರೈತಾಪಿ ವರ್ಗಕ್ಕೆ ಉತ್ತಮ ಮಳೆ-ಬೆಳೆಯಾಗಬೇಕು ಹಾಗೂ ಜನರ ಬದುಕಿನಲ್ಲಿ ನೆಮ್ಮದಿ ನೆಲೆಸಬೇಕು ಎಂದು ಪ್ರಾರ್ಥಿಸಲಾಯಿತು.
ಚಂಡಿಕಾ ಹೋಮದ ಮೂಲಕ ನಾಡಿನ ಸುಖ-ಶಾಂತಿ, ಜನರ ಏಳಿಗೆ ಮತ್ತು ಸಕಲ ಜೀವಿಗಳ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ತಾಯಿ ಚಂಡಿಕಾದೇವಿಯ ದಿವ್ಯ ಕೃಪೆ ಸರ್ವರ ಮೇಲಿರಲಿ, ನಾಡಿಗೆ ಒಳಿತಾಗಲಿ ಹಾಗೂ ಲೋಕದಲ್ಲಿ ಶಾಂತಿ ನೆಲೆಸಲಿ ಎಂಬ ಆಶಯದೊಂದಿಗೆ ಧಾರ್ಮಿಕ ಕಾರ್ಯಕ್ರಮ ನಡೆಯಿತು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R