
ಬಾಗಲಕೋಟೆ, 21 ಅಕ್ಟೋಬರ್ (ಹಿ.ಸ.)
ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿ ಭಾರತೀಯ ತತ್ವಶಾಸ್ತ್ರಕ್ಕೆ ಅಪಾರ ಕೊಡುಗೆ ನೀಡಿದ ಮಹಾನ್ ದಾರ್ಶನಿಕ ಹಾಗೂ ಕುಲಗುರು ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ಜಮಖಂಡಿಯ ಮಿನಿ ವಿಧಾನಸೌಧದಲ್ಲಿ ಪ್ರಥಮ ಬಾರಿಗೆ ಸರ್ಕಾರದ ಮಟ್ಟದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಜಮಖಂಡಿ ತಾಲ್ಲೂಕು ಬ್ರಾಹ್ಮಣ ಸಂಘ ಹಾಗೂ ಹುನ್ನುರು ಬ್ರಾಹ್ಮಣ ಸಂಘದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಮಧ್ವಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಗೌರವ ನಮನ ಸಲ್ಲಿಸಲಾಯಿತು. ಮಧ್ವಾಚಾರ್ಯರ ತತ್ವ, ಆದರ್ಶ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಲಾಯಿತು.
ಕಾರ್ಯಕ್ರಮದಲ್ಲಿ ಜಮಖಂಡಿಯ ಉಪ ತಹಸೀಲ್ದಾರ್ ಎಸ್.ಬಿ. ಕಾಂಬಳೆ ಹಾಗೂ ತಹಸೀಲ್ದಾರ್ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ವೇಮೂಪಂ ಶ್ರೀ ಸುಜೀಯಿಂದ್ರ ಆಚಾರ್ಯ ಮನಗೂಳಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಜಮಖಂಡಿ ಬ್ರಾಹ್ಮಣ ಸಂಘದ ಅಧ್ಯಕ್ಷ ಉಮೇಶ ದೇಸಾಯಿ ಸೇರಿದಂತೆ ಸಮಾಜದ ಹಲವು ಗಣ್ಯರು ಪಾಲ್ಗೊಂಡಿದ್ದರು.
ರಾಘವೇಂದ್ರ ಉಮರ್ಜಿ, ನಿತಿನ್ ಹುಳ್ಯಾಳಕರ, ಅಶೋಕ ಕುಲಕರ್ಣಿ, ಪ್ರವೀಣ ದಾಸೋಪಂತ ಕುಲಕರ್ಣಿ, ಭೀಮ ಮೋಕಾಶಿ, ಕೃಷ್ಣ ತೋಳ, ರಾಘವೇಂದ್ರ ಕುಲಕರ್ಣಿ, ಆರ್.ಜಿ. ಕುಲಕರ್ಣಿ, ಜಿ.ಜಿ. ಕೌಜಲಗಿ, ಶ್ರೀಪೂರ್ಣ ಬೀಡಕರ, ರಾಘು ತೇರದಾಳ, ಕೃಷ್ಣ ಕಾರಕೂನ, ವಿಲಾಸ ಕುಲಕರ್ಣಿ, ಆನಂದ ಕುಲಕರ್ಣಿ, ಪ್ರಶಾಂತ ಕುಲಕರ್ಣಿ, ಶ್ರೀಕಾಂತ ಕುಲಕರ್ಣಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬ್ರಾಹ್ಮಣ ಸಮಾಜದ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ಕೃಷ್ಣಾಚಾರ್ಯ ಪುರೋಹಿತ, ರಮೇಶ ಕನಕೇರಿ, ಮುಕುಂದ ಆಚಾರ್ಯ ನ್ಯಾಮಣ್ಣ, ವೇಂಕಣ ಆಚಾರ್ಯ ಅಧ್ಯಾಪಕ, ಪ್ರವೀಣ ಬಬಲಾದಿ, ವಿಠ್ಠಲ ದೇಶಪಾಂಡೆ, ಗುಂಡು ಕುಲಕರ್ಣಿ, ವಿವೇಕ ನಾಯಕ ಸೇರಿದಂತೆ ಸಮಾಜದ ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಬ್ರಾಹ್ಮಣ ಸಮಾಜದ ಹಿರಿಯರಾದ ರಾಜೇಂದ್ರ ಹುಳ್ಯಾಳಕರ ನೆರವೇರಿಸಿದರು. ಪತ್ರಕರ್ತರಾದ ಗೋಪಾಲ ಪಾಟೀಲ, ಪ್ರವೀಣ ಕುಲಕರ್ಣಿ, ಕೇಶವ ಕುಲಕರ್ಣಿ ಸೇರಿದಂತೆ ಅನೇಕ ಸಮಾಜದ ಮುಖಂಡರು, ಹಿರಿಯರು ಹಾಗೂ ಯುವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಮಧ್ವಾಚಾರ್ಯರಿಗೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸ ಕೃಷ್ಣಾಚಾರ್ಯ ಪುರೋಹಿತ ಅವರು, ಜಮಖಂಡಿಯಲ್ಲಿ ಪ್ರಥಮ ಬಾರಿಗೆ ಶ್ರೀ ಮಧ್ವಾಚಾರ್ಯ ಜಯಂತಿಯನ್ನು ಸರ್ಕಾರದ ಮಟ್ಟದಲ್ಲಿ ಆಚರಿಸಿರುವುದು ಸಮಾಜಕ್ಕೆ ಹೆಮ್ಮೆಯ ಸಂಗತಿ ಎಂದು ಹೇಳಿದರು. ಮಧ್ವಾಚಾರ್ಯರು ಪ್ರತಿಪಾದಿಸಿದ ದ್ವೈತ ಸಿದ್ಧಾಂತವು ಭಾರತೀಯ ತತ್ವಶಾಸ್ತ್ರದಲ್ಲಿ ವಿಶಿಷ್ಟ ಸ್ಥಾನ ಹೊಂದಿದ್ದು, ಅವರ ಚಿಂತನೆಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿವೆ ಎಂದು ತಿಳಿಸಿದರು.
ಸರ್ಕಾರದ ಮಟ್ಟದಲ್ಲಿ ಜಯಂತಿ ಆಚರಣೆಗೆ ಅವಕಾಶ ಕಲ್ಪಿಸಿರುವುದು ಶ್ರೀ ಮಧ್ವಾಚಾರ್ಯರ ತತ್ವ ಹಾಗೂ ಕೊಡುಗೆಗಳಿಗೆ ಸಲ್ಲಿಸಿದ ಗೌರವವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಇನ್ನಷ್ಟು ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಯೋಜಿಸುವ ಮೂಲಕ ಯುವ ಪೀಳಿಗೆಗೆ ಮಧ್ವಾಚಾರ್ಯರ ಜೀವನ, ತತ್ವ ಹಾಗೂ ಆದರ್ಶಗಳನ್ನು ಪರಿಚಯಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande