ಹಲಕುಂದಿ: ಜೂಜಾಟದಲ್ಲಿ ಪಾಲ್ಗೊಂಡ 10 ಜನರ ವಿರುದ್ಧ ಪ್ರಕರಣ ದಾಖಲು
ಬಳ್ಳಾರಿ, 21 ಅಕ್ಟೋಬರ್ (ಹಿ.ಸ.) ಹಲಕುಂದಿ ಗ್ರಾಮದಲ್ಲಿ ಇಸ್ಪೀಟ್ ಜೂಜಾಟದ ಸ್ಥಳದ ಮೇಲೆ ದಾಳಿ ನಡೆಸಿದ ಪೊಲೀಸರು 10 ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದಾರೆ. ಆರೋಪಿಗಳಾದ ಖಾಲಿ ಚೀಲದ ವ್ಯಾಪಾರಿ, ಬಂಡಿಮೋಟ್ ನಿವಾಸಿ ವಿಜಯ ಅಲಿಯಾಸ್ ವಿಜಯ್ ಬಾಬು ತಂದೆ ಲೇಟ್ ಗುರುಸ್ವಾಮಿ (39), ಬಳ್
gambling: Case against 10 people


ಬಳ್ಳಾರಿ, 21 ಅಕ್ಟೋಬರ್ (ಹಿ.ಸ.)

ಹಲಕುಂದಿ ಗ್ರಾಮದಲ್ಲಿ ಇಸ್ಪೀಟ್ ಜೂಜಾಟದ ಸ್ಥಳದ ಮೇಲೆ ದಾಳಿ ನಡೆಸಿದ ಪೊಲೀಸರು 10 ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದಾರೆ.

ಆರೋಪಿಗಳಾದ ಖಾಲಿ ಚೀಲದ ವ್ಯಾಪಾರಿ, ಬಂಡಿಮೋಟ್ ನಿವಾಸಿ ವಿಜಯ ಅಲಿಯಾಸ್ ವಿಜಯ್ ಬಾಬು ತಂದೆ ಲೇಟ್ ಗುರುಸ್ವಾಮಿ (39), ಬಳ್ಳಾರಿ ನಗರ ನಿವಾಸಿ ಖಾದರ್ ಅಲಿಯಾಸ್ ವಡ್ಡರಬಂಡ ಖಾದರ್ ತಂದೆ ಜಹಾಂಗೆರ್ (37) ಅವರು ಇಸ್ಪೇಟ್ ಜೂಜಾಟ ಆಡಿಸುತ್ತಿದ್ದರು. ಈ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ, ವಿಜಯ ಅಲಿಯಾಸ್ ವಿಜಿ, ಖಾದರ್, ವಿಶಾಲ್, ಮುಕ್ತಿಯಾರ್, ಪ್ರಸಾದ್, ದುರ್ಗೇಶ್, ಇರ್ಫಾನ್, ಮಣಿಕಂಠ, ರುದ್ರೇಶ, ಮದರ್ ವಲಿ, ಖಾಜಾ, ಲೋಕೇಶ ತಂದೆ ಮಲ್ಲೇಶಪ್ಪ ಸೇರಿ 10 ಆರೋಪಿತರ ವಿರುದ್ಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜಾಟದ ಸ್ಥಳದಲ್ಲಿದ್ದ ನಗದು ಹಣ ರೂಪಾಯಿ 97,020/- 19 ದ್ವಿಚಕ್ರ ವಾಹನಗಳು ಹಾಗೂ 14 ಮೊಬೈಲ್ ಫೆÇೀನ್ಗಳನ್ನು ಪೊಲೀಸರು ಈ ದಾಳಿಯಲ್ಲಿ ವಶಕ್ಕೆ ಪಡೆದಿದ್ದಾರೆ.

ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande