ಬಳ್ಳಾರಿ : ಹೊಂಡದಲ್ಲಿ ಬಿದ್ದು ಆಂಧ್ರ ಮೂಲದ ತಂದೆ - ಮಗ ಸಾವು
ಬಳ್ಳಾರಿ, 21 ಅಕ್ಟೋಬರ್ (ಹಿ.ಸ.) ಆಯುಧ ಪೂಜೆಯ ರಜೆಯನ್ನು ಕಳೆಯಲು ಮೂರು ಕುಟುಂಬಗಳು ಒಟ್ಟಾಗಿ ಏಷ್ಯಾದ ಎರಡನೇ ಏಕಶಿಲಾ ಬಳ್ಳಾರಿಯ ಬೆಟ್ಟದ ವೀಕ್ಷಣೆಗೆ ಹೋಗಿದ್ದ ತಂದೆ - ಮಗ ಇಬ್ಬರೂ ಹೊಂಡದಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ. ಮೃತರು ಮೂಲತಃ ಆಂಧ್ರಪ್ರದೇಶದ ಕಣೇಕಲ್ ಪಟ್ಟಣ ನಿವಾಸಿಗಳಾಗಿದ್ದು
ಬಳ್ಳಾರಿ : ಬೆಟ್ಟದಲ್ಲಿರುವ ಹೊಂಡದಲ್ಲಿ ಬಿದ್ದು ಕಣೇಕಲ್ಲುನ ತಂದೆ - ಮಗ ಸಾವು


ಬಳ್ಳಾರಿ, 21 ಅಕ್ಟೋಬರ್ (ಹಿ.ಸ.)

ಆಯುಧ ಪೂಜೆಯ ರಜೆಯನ್ನು ಕಳೆಯಲು ಮೂರು ಕುಟುಂಬಗಳು ಒಟ್ಟಾಗಿ ಏಷ್ಯಾದ ಎರಡನೇ ಏಕಶಿಲಾ ಬಳ್ಳಾರಿಯ ಬೆಟ್ಟದ ವೀಕ್ಷಣೆಗೆ ಹೋಗಿದ್ದ ತಂದೆ - ಮಗ ಇಬ್ಬರೂ ಹೊಂಡದಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ.

ಮೃತರು ಮೂಲತಃ ಆಂಧ್ರಪ್ರದೇಶದ ಕಣೇಕಲ್ ಪಟ್ಟಣ ನಿವಾಸಿಗಳಾಗಿದ್ದು, ವೃತ್ತಿಯಲ್ಲಿ ದೋಬಿಗಳಾಗಿದ್ದರು. ಮೃತ ಮಗ ಹೊನ್ನೂರುಸ್ವಾಮಿ (11) ಮತ್ತು ತಂದೆ ರಮೇಶ್ (38) ಎಂದು ಪೊಲೀಸರು ತಿಳಿಸಿದ್ದಾರೆ.

ಆಯುಧ ಪೂಜೆಯ ರಜೆಯನ್ನು ಕಳೆಯಲು ಬಳ್ಳಾರಿಗೆ ಬಂದಿದ್ದ ಇವರು, ತಮ್ಮ ಸಂಬಂಧಿಕರ ಜೊತೆಗೂಡಿ ಗುಡ್ಡವನ್ನು ವೀಕ್ಷಿಸಲು ಮಂಗಳವಾರ ಹೋದಾಗ, ಈ ದುರ್ಘಟನೆ ನಡೆದಿದೆ. ಮೃತರ ಜೊತೆಗಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ ಕಾರಣ ಈ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಇಬ್ಬರ ಶವಗಳನ್ನು ಹೊರ ತೆಗೆದು, ಕುಟುಂಬಗಳಿಗೆ ಒಪ್ಪಿಸಿದ್ದಾರೆ.

ಮಳೆ ನೀರಿನ ಹೊಂಡದಲ್ಲಿನ ಮೀನುಗಳನ್ನು ಕುತೂಹಲದಿಂದ ನೋಡಲು ಹೊಂಡದ ಹತ್ತಿರಕ್ಕೆ ಹೋಗಿದ್ದ ಮಗನು ಪಾಚಿಯ ಮೇಲೆ ಕಾಲಿಟ್ಟ ಕಾರಣ ಕಾಲು ಜಾರಿ ಹೊಂಡದಲ್ಲಿ ಬಿದ್ದಿದ್ದಾನೆ. ಮಗನನ್ನು ರಕ್ಷಿಸಲು ಹೋಗಿದ್ದ ತಂದೆಯು ನೀರಿಗಿಳಿದಾಗ, ಈಜಲು ಬಾರದೇ, ಹೊರ ಬರಲೂ ಆಗದೇ ಮುಳುಗಿ ಮೃತಪಟ್ಟಿದ್ದಾನೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಕೌಲ್ಬಜಾರ್ ಪೆÇಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ಹೊಂಡದಿಂದ ಹೊರತೆಗೆದಿದ್ದಾರೆ. ಈ ಕುರಿತು ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande