ಮಹಾರಾಷ್ಟ್ರದಲ್ಲಿ ದುರ್ಗಾ ಮೂರ್ತಿ ಕೊಂಡೊಯ್ಯುತ್ತಿದ್ದ ಪಿಕಪ್ಗೆ ಕಂಟೈನರ್ ಡಿಕ್ಕಿ; ಐವರು ಸಾವು
ಅಮರಾವತಿ, 02 ಅಕ್ಟೋಬರ್ (ಹಿ.ಸ.): ಮಹಾರಾಷ್ಟ್ರದಲ್ಲಿ ನವರಾತ್ರಿ ಉತ್ಸವಕ್ಕಾಗಿ ದುರ್ಗಾ ಮಾತೆಯ ಮೂರ್ತಿ ಕೊಂಡೊಯ್ಯುತ್ತಿದ್ದ ಯುವಕರ ವಾಹನಕ್ಕೆ ಸಮೃದ್ಧಿ ಮಹಾಮಾರ್ಗದಲ್ಲಿ ಕಂಟೈನರ್ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟಿರುವ ಘಟನೆ ನಡೆದಿದೆ. ಅಮರಾವತಿ ಜಿಲ್ಲೆಯ ಧಾಮಣಗಾಂವ್ ಪೊಲೀಸ್ ಠಾಣೆ ವ್ಯಾಪ್ತಿ
हादसे के लिए जिम्मेदार कंटेनर


ಅಮರಾವತಿ, 02 ಅಕ್ಟೋಬರ್ (ಹಿ.ಸ.):

ಮಹಾರಾಷ್ಟ್ರದಲ್ಲಿ ನವರಾತ್ರಿ ಉತ್ಸವಕ್ಕಾಗಿ ದುರ್ಗಾ ಮಾತೆಯ ಮೂರ್ತಿ ಕೊಂಡೊಯ್ಯುತ್ತಿದ್ದ ಯುವಕರ ವಾಹನಕ್ಕೆ ಸಮೃದ್ಧಿ ಮಹಾಮಾರ್ಗದಲ್ಲಿ ಕಂಟೈನರ್ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟಿರುವ ಘಟನೆ ನಡೆದಿದೆ. ಅಮರಾವತಿ ಜಿಲ್ಲೆಯ ಧಾಮಣಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ತಡರಾತ್ರಿ ಸುಮಾರು 1 ಗಂಟೆಗೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.

ವರ್ಧಾದ ಸಿಂಧಿ ಮೇಘೆ ಪ್ರದೇಶದ ನವದುರ್ಗಾ ಪೂಜಾ ಉತ್ಸವ ಸಮಿತಿಯ ಸದಸ್ಯರು ಪ್ರತಿವರ್ಷದಂತೆ ಈ ವರ್ಷವೂ ಶೇಗಾಂವ್‌ನಿಂದ ದುರ್ಗಾ ಮಾತೆಯ ಎತ್ತರದ ಮೂರ್ತಿಯನ್ನು ಪಿಕಪ್ ವಾಹನದಲ್ಲಿ ಕೊಂಡೊಯ್ಯುತ್ತಿದ್ದರು. ಧಾಮಣಗಾಂವ್ ಸಮೀಪದ ಸಮೃದ್ಧಿ ಮಹಾಮಾರ್ಗದ 97ನೇ ಚಾನೆಲ್‌ ಬಳಿ ಹಿಂಬದಿಯಿಂದ ಬಂದ ಕಂಟೈನರ್ ಪಿಕಪ್ ವಾಹನಕ್ಕೆ ಭಾರಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಪಿಕಪ್‌ನಲ್ಲಿದ್ದ ಕೆಲ ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ಮಾಹಿತಿ ದೊರೆತ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡು ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳಿಗೆ ವರ್ಧಾದ ಸಾವಂಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದಲ್ಲಿ ಘನಶ್ಯಾಮ್ ಪಾಟೀಲ್, ಓಂ ಗವಾಂಡೆ, ಸಚಿನ್ ಬಾದಮನ್ವಾರ್, ಪ್ರವೀಣ್ ಬಾಕಣೆ ಹಾಗೂ ದತ್ತಾ ಕುಳಸಂಗೆ ಮೃತಪಟ್ಟಿರುವುದಾಗಿ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಘಟನೆಯ ಮಾಹಿತಿ ತಿಳಿದ ಬಳಿಕ ಪೊಲೀಸ್ ಅಧಿಕಾರಿಗಳು ಹಾಗೂ ಸ್ಥಳೀಯ ಆಡಳಿತದ ಅಧಿಕಾರಿಗಳು ಅಪಘಾತ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

-------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande