ಗೋಬರ್ಧನ ಯೋಜನೆಗೆ ಚಾಲನೆ: ಸಂಕುಚಿತ ಜೈವ ಅನಿಲ ಉತ್ಪಾದನೆ ಹತ್ತು ಪಟ್ಟು ಹೆಚ್ಚಿಸುವ ಗುರಿ:ಸಚಿವ ಹರ್ದೀಪ್ ಸಿಂಗ್ ಪುರಿ
ನವದೆಹಲಿ, 01 ಅಕ್ಟೋಬರ್ (ಹಿ.ಸ.): ಗ್ರಾಮೀಣ ಪ್ರದೇಶಗಳಲ್ಲಿ ಜೈವಿಕವಾಗಿ ವಿಘಟಿಸಬಹುದಾದ ತ್ಯಾಜ್ಯ ಹಾಗೂ ಪಶು ತ್ಯಾಜ್ಯವನ್ನು ಉಪಯುಕ್ತ ಜೈವ-ಸಿಎನ್‌ಜಿ ಮತ್ತು ಸಾವಯವ ಗೊಬ್ಬರವಾಗಿ ಪರಿವರ್ತಿಸುವ ಉದ್ದೇಶದ ಗೋಬರ್ಧನ ಯೋಜನೆಗೆ ಗುರುವಾರ ಭಾರತ ಮಂಟಪದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು. ಕೇಂದ್ರ ಪೆಟ
गोबरधन योजना का शुभारंभ-2


गोबरधन योजना का शुभारंभ-1


गोबरधन योजना का शुभारंभ


ನವದೆಹಲಿ, 01 ಅಕ್ಟೋಬರ್ (ಹಿ.ಸ.):

ಗ್ರಾಮೀಣ ಪ್ರದೇಶಗಳಲ್ಲಿ ಜೈವಿಕವಾಗಿ ವಿಘಟಿಸಬಹುದಾದ ತ್ಯಾಜ್ಯ ಹಾಗೂ ಪಶು ತ್ಯಾಜ್ಯವನ್ನು ಉಪಯುಕ್ತ ಜೈವ-ಸಿಎನ್‌ಜಿ ಮತ್ತು ಸಾವಯವ ಗೊಬ್ಬರವಾಗಿ ಪರಿವರ್ತಿಸುವ ಉದ್ದೇಶದ ಗೋಬರ್ಧನ ಯೋಜನೆಗೆ ಗುರುವಾರ ಭಾರತ ಮಂಟಪದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಯೋಜನೆಗೆ ಚಾಲನೆ ನೀಡಿ, ದೇಶದಲ್ಲಿ ದೇಶೀಯ ಸಂಕುಚಿತ ಜೈವ ಅನಿಲದ ಉತ್ಪಾದನೆಯನ್ನು ಸುಮಾರು ಹತ್ತು ಪಟ್ಟು ಹೆಚ್ಚಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ರಷ್ಯಾ-ಉಕ್ರೇನ್ ಸಂಘರ್ಷ ಹಾಗೂ ಹೋರ್ಮುಜ್ ಜಲಸಂಧಿಯ ಬಿಕ್ಕಟ್ಟಿನಿಂದ ಜಾಗತಿಕ ಇಂಧನ ಕ್ಷೇತ್ರದಲ್ಲಿ ಉಂಟಾಗಿರುವ ಅಸ್ಥಿರತೆಯ ಸಂದರ್ಭದಲ್ಲಿ ಈ ಯೋಜನೆಯು ಆತ್ಮನಿರ್ಭರ ಭಾರತದತ್ತ ಮಹತ್ವದ ಪರಿವರ್ತನಕಾರಿ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಲಭ್ಯವಿರುವ ಜೈವಿಕವಾಗಿ ವಿಘಟಿಸಬಹುದಾದ ತ್ಯಾಜ್ಯ ಮತ್ತು ಪಶು ತ್ಯಾಜ್ಯವನ್ನು ಜೈವ-ಸಿಎನ್‌ಜಿ ಹಾಗೂ ಸಾವಯವ ಗೊಬ್ಬರವಾಗಿ ಪರಿವರ್ತಿಸುವುದರ ಜತೆಗೆ, ಭಾರತದ ನಿವ್ವಳ ಶೂನ್ಯ ಇಂಗಾಲ ಗುರಿ ಸಾಧನೆಗೆ ಈ ಯೋಜನೆ ನೆರವಾಗಲಿದೆ. ಆಮದು ಮಾಡಿಕೊಳ್ಳುವ ಪಳೆಯುಳಿಕೆ ಇಂಧನಗಳ ಮೇಲಿನ ದೇಶದ ಅವಲಂಬನೆಯನ್ನು ಕಡಿಮೆ ಮಾಡಲು ಸಹ ಇದು ಸಹಕಾರಿಯಾಗಲಿದೆ ಎಂದು ಪುರಿ ಹೇಳಿದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಹರ್ದೀಪ್ ಸಿಂಗ್ ಪುರಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಡಾ. ನೀರಜ್ ಮಿತ್ತಲ್ ಹಾಗೂ ಜಂಟಿ ಕಾರ್ಯದರ್ಶಿ ಅಲೋಕ್ ತ್ರಿಪಾಠಿ ಅವರೊಂದಿಗೆ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಲ ಖಾತರಿ ನೆರವಿನ ಬಗ್ಗೆಯೂ ವಿವರಿಸಿದರು.

ಪ್ರತಿ ಟನ್ ದಿನಕ್ಕೆ ಸಂಸ್ಕರಣಾ ಸಾಮರ್ಥ್ಯಕ್ಕೆ ಗರಿಷ್ಠ ₹2 ಕೋಟಿ ವರೆಗೆ ಆರ್ಥಿಕ ನೆರವು ಒದಗಿಸುವ ವ್ಯವಸ್ಥೆ ಇರಲಿದೆ ಎಂದು ತಿಳಿಸಲಾಯಿತು. ಭಾರತದಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ gobardhan.eil.co.in ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಿಂದ ವಿವಿಧ ಸೌಲಭ್ಯಗಳು ಹಾಗೂ ನೆರವು ಪಡೆಯಲು ಈ ನೋಂದಣಿ ಕಡ್ಡಾಯವಾಗಿರಲಿದೆ ಎಂದು ತಿಳಿಸಲಾಯಿತು.

ಇದಕ್ಕೂ ಮುನ್ನ ಉದ್ಘಾಟನಾ ಭಾಷಣದಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಲೋಕ್ ತ್ರಿಪಾಠಿ ಮಾತನಾಡಿ, ಪ್ರಸ್ತುತ ಗೋಬರ್ಧನ ಉಪಕ್ರಮದಡಿ 217 ಸಂಕುಚಿತ ಜೈವ ಅನಿಲ ಘಟಕಗಳು ಕಾರ್ಯಾರಂಭಿಸಿವೆ ಎಂದು ಹೇಳಿದರು. ಈ ಘಟಕಗಳಿಂದ ಪ್ರತಿದಿನ ಸುಮಾರು 0.4 ದಶಲಕ್ಷ ಪ್ರಮಾಣಿತ ಘನ ಮೀಟರ್ ಶುದ್ಧ ಹಾಗೂ ನವೀಕರಿಸಬಹುದಾದ ಇಂಧನ ಉತ್ಪಾದನೆಯಾಗುತ್ತಿದೆ ಎಂದು ತಿಳಿಸಿದರು.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಡಾ. ನೀರಜ್ ಮಿತ್ತಲ್ ಅವರು ಇಂತಹ ಉಪಕ್ರಮಗಳ ಯಶಸ್ಸಿನಲ್ಲಿ ರಾಜ್ಯ ಸರ್ಕಾರಗಳ ಪರಿಣಾಮಕಾರಿ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು. ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಗ್ರಾಮ-ಗ್ರಾಮಕ್ಕೆ ತಲುಪಿಸುವಲ್ಲಿ ರಾಜ್ಯಗಳ ಪಾತ್ರ ನಿರ್ಣಾಯಕವಾಗಿದೆ ಎಂದು ಅವರು ತಿಳಿಸಿದರು.

ಗೋಬರ್ಧನ ಯೋಜನೆಯು ಭಾರತ ಸರ್ಕಾರದ ರಾಷ್ಟ್ರೀಯ ಉಪಕ್ರಮವಾಗಿದ್ದು, ಪಶುಗಳ ಗೋಮಯ, ಕೃಷಿ ತ್ಯಾಜ್ಯ ಹಾಗೂ ಇತರ ಜೈವಿಕ ತ್ಯಾಜ್ಯಗಳನ್ನು ಸಂಕುಚಿತ ಜೈವ ಅನಿಲ ಮತ್ತು ಸಾವಯವ ಗೊಬ್ಬರದಂತಹ ಶುದ್ಧ ಇಂಧನ ಹಾಗೂ ಉಪಯುಕ್ತ ಉತ್ಪನ್ನಗಳಾಗಿ ಪರಿವರ್ತಿಸುವುದು ಇದರ ಉದ್ದೇಶವಾಗಿದೆ. ಯೋಜನೆಯ ಅನುಷ್ಠಾನಕ್ಕಾಗಿ ಭಾರತ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande