ಪಿಂಕ್ ಲೈನ್ ಮೆಟ್ರೋಗೆ 30 ಫೀಡರ್ ಬಸ್: ಐದು ಮಾರ್ಗಗಳಲ್ಲಿ 415 ಟ್ರಿಪ್ ಕಾರ್ಯಾಚರಣೆ
ನಮ್ಮ ಮೆಟ್ರೋ ಪಿಂಕ್ ಲೈನ್ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಐದು ಮಾರ್ಗಗಳಲ್ಲಿ 30 ವಿಶೇಷ ಫೀಡರ್ ಬಸ್ಗಳನ್ನು ನಿಯೋಜಿಸಲು ಯೋಜಿಸಿದೆ. ಪ್ರತಿದಿನ 415 ಟ್ರಿಪ್ಗಳು ನಡೆಯಲಿದ್ದು, ಮೆಟ್ರೋ ನಿಲ್ದಾಣಗಳಲ್ಲಿ ಬಸ್ಗಳ ನೈಜ ಸಮಯದ ಆಗಮನದ ಮಾಹಿತಿಯೂ ಲಭ್ಯವಾಗಲಿದೆ.
bmtc-feeder-bus-services-for-namma-metro-pink-line


ಬೆಂಗಳೂರು, 12 ಅಕ್ಟೋಬರ್ (ಹಿ.ಸ.):

ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಮತ್ತು ಬಿಎಂಟಿಸಿ ಜಂಟಿಯಾಗಿ ಎಪಿಐ ಆಧಾರಿತ ನೈಜ ಸಮಯದ ಬಸ್ ಆಗಮನದ ಮಾಹಿತಿ ವ್ಯವಸ್ಥೆ ಜಾರಿಗೆ ತರಲು ಯೋಜಿಸಿವೆ. ಇದರಡಿ ಮೆಟ್ರೋ ನಿಲ್ದಾಣಗಳಲ್ಲೇ ಫೀಡರ್ ಬಸ್ಗಳ ಆಗಮನದ ಸಮಯವನ್ನು ಪ್ರದರ್ಶಿಸಲಾಗುತ್ತದೆ.

ಇದರಿಂದ ಮೆಟ್ರೋದಿಂದ ಇಳಿಯುವ ಪ್ರಯಾಣಿಕರು ಬಸ್ಗಳ ಸಂಚಾರದ ಮಾಹಿತಿಯನ್ನು ತಕ್ಷಣ ತಿಳಿದುಕೊಂಡು ಮುಂದಿನ ಪ್ರಯಾಣವನ್ನು ಯೋಜಿಸಬಹುದು.

ಈಗಾಗಲೇ ನಮ್ಮ ಮೆಟ್ರೋದ ಹಸಿರು, ನೇರಳೆ ಹಾಗೂ ಹಳದಿ ಮಾರ್ಗಗಳಲ್ಲಿ ಫೀಡರ್ ಬಸ್ ಸೇವೆಗಳು ಕಾರ್ಯಾಚರಣೆ ನಡೆಸುತ್ತಿವೆ. ಪಿಂಕ್ ಲೈನ್ಗೂ ಈ ಸೌಲಭ್ಯ ವಿಸ್ತರಣೆಯಾದರೆ ಮೆಟ್ರೋ ಮತ್ತು ಬಸ್ ಸೇವೆಗಳ ನಡುವಿನ ಸಂಪರ್ಕ ಮತ್ತಷ್ಟು ಸುಧಾರಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಪಿಂಕ್ ಲೈನ್ ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಐದು ಫೀಡರ್ ಮಾರ್ಗಗಳಲ್ಲಿ 30 ವಿಶೇಷ ಬಸ್ಗಳನ್ನು ನಿಯೋಜಿಸಿ, ಪ್ರತಿದಿನ 415 ಟ್ರಿಪ್ಗಳನ್ನು ನಡೆಸುವ ಯೋಜನೆ ರೂಪಿಸಲಾಗಿದೆ.

ನೈಜ ಸಮಯದ ಬಸ್ ಆಗಮನದ ಮಾಹಿತಿ ವ್ಯವಸ್ಥೆಯಿಂದ ಪ್ರಯಾಣಿಕರಿಗೆ ತಮ್ಮ ಮುಂದಿನ ಪ್ರಯಾಣವನ್ನು ಸುಲಭವಾಗಿ ಯೋಜಿಸಲು ಅನುಕೂಲವಾಗಲಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande