ತಿನೈಘಾಟ್ ರೈಲು ನಿಲ್ದಾಣದಲ್ಲಿ ಕಬ್ಬಿಣದ ಅದಿರು ಸಾಗಣೆ ಪುನರಾರಂಭ
ಹುಬ್ಬಳ್ಳಿ, 10 ಅಕ್ಟೋಬರ್ (ಹಿ.ಸ.): ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ವ್ಯಾಪ್ತಿಯ ತಿನೈಘಾಟ್ ರೈಲು ನಿಲ್ದಾಣದಲ್ಲಿ ಕಬ್ಬಿಣದ ಅದಿರು ಸಾಗಣೆ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದೆ. ಈ ಕುರಿತು ನೈಋತ್ಯ ರೈಲ್ವೆಯ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕರು ಅಧಿಸೂಚನೆ ಹೊರಡಿಸಿದ್ದು, ತಿನೈಘಾಟ್ ರೈ
ತಿನೈಘಾಟ್ ರೈಲು ನಿಲ್ದಾಣದಲ್ಲಿ ಕಬ್ಬಿಣದ ಅದಿರು ಸಾಗಣೆ ಪುನರಾರಂಭ


ಹುಬ್ಬಳ್ಳಿ, 10 ಅಕ್ಟೋಬರ್ (ಹಿ.ಸ.):

ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ವ್ಯಾಪ್ತಿಯ ತಿನೈಘಾಟ್ ರೈಲು ನಿಲ್ದಾಣದಲ್ಲಿ ಕಬ್ಬಿಣದ ಅದಿರು ಸಾಗಣೆ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದೆ.

ಈ ಕುರಿತು ನೈಋತ್ಯ ರೈಲ್ವೆಯ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕರು ಅಧಿಸೂಚನೆ ಹೊರಡಿಸಿದ್ದು, ತಿನೈಘಾಟ್ ರೈಲು ನಿಲ್ದಾಣದಲ್ಲಿ ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಕಬ್ಬಿಣದ ಅದಿರು ಸಾಗಣೆ ಸೌಲಭ್ಯ ಲಭ್ಯವಿರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸಾಗಣೆ ಸೌಲಭ್ಯ ಪುನರಾರಂಭಗೊಂಡಿರುವುದರಿಂದ ಕಬ್ಬಿಣದ ಅದಿರು ವ್ಯಾಪಾರಿಗಳು, ಕೈಗಾರಿಕೆಗಳು ಹಾಗೂ ಸರಕು ಸಾಗಣೆ ನಿರ್ವಾಹಕರಿಗೆ ರೈಲಿನ ಮೂಲಕ ಸರಕುಗಳನ್ನು ಸಾಗಿಸಲು ಉತ್ತಮ ಅವಕಾಶ ದೊರೆತಿದೆ. ಹೀಗಾಗಿ, ಕಬ್ಬಿಣದ ಅದಿರು ವ್ಯಾಪಾರದಲ್ಲಿ ತೊಡಗಿರುವವರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ನೈಋತ್ಯ ರೈಲ್ವೆ ಮನವಿ ಮಾಡಿದೆ.

ಈ ಕ್ರಮದಿಂದ ರೈಲ್ವೆ ಮೂಲಸೌಕರ್ಯದ ಸಮರ್ಪಕ ಬಳಕೆಗೆ ಉತ್ತೇಜನ ದೊರೆಯಲಿದೆ. ಅಲ್ಲದೆ, ಸರಕು ಸಾಗಣೆಗೆ ಅಗತ್ಯವಿರುವ ಸರಕು ಸಾಗಣೆ ಬೋಗಿಗಳ ಲಭ್ಯತೆಯನ್ನು ಸುಧಾರಿಸಲು ಹಾಗೂ ಸಾಗಣೆ ಕಾರ್ಯಾಚರಣೆಗಳ ಒಟ್ಟಾರೆ ದಕ್ಷತೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿಗಳು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande