ಬಳ್ಳಾರಿ : ಕೊಟ್ಟೂರು ಸ್ವಾಮಿ ಮಠದಲ್ಲಿ ಎರಡು ದಿನ ಧಾರ್ಮಿಕ ಕಾರ್ಯಕ್ರಮಗಳು
ಬಳ್ಳಾರಿ, 01 ಅಕ್ಟೋಬರ್ (ಹಿ.ಸ.) ಬಳ್ಳಾರಿಯ ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠದಲ್ಲಿ ಅಕ್ಟೋಬರ್ 3 ಮತ್ತು 4ರಂದು ಶ್ರೀ ಹಾನಗಲ್ಲ ಕುಮಾರ ಮಹಾಶಿವಯೋಗಿಗಳ 159ನೇ ಹಾಗೂ ಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿ ಅವರ 88ನೇ ಜಯಂತ್ಯೋತ್ಸವದ ಪ್ರವಚನದ ಮಂಗಲ ಮಹೋತ್ಸವ ಮತ್ತು ವಿವಿಧ ಧಾರ್ಮಿಕ
ಬಳ್ಳಾರಿ : ಕೊಟ್ಟೂರು ಸ್ವಾಮಿ ಮಠದಲ್ಲಿ ಎರೆಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳು


ಬಳ್ಳಾರಿ : ಕೊಟ್ಟೂರು ಸ್ವಾಮಿ ಮಠದಲ್ಲಿ ಎರೆಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳು


ಬಳ್ಳಾರಿ : ಕೊಟ್ಟೂರು ಸ್ವಾಮಿ ಮಠದಲ್ಲಿ ಎರೆಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳು


ಬಳ್ಳಾರಿ : ಕೊಟ್ಟೂರು ಸ್ವಾಮಿ ಮಠದಲ್ಲಿ ಎರೆಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳು


ಬಳ್ಳಾರಿ, 01 ಅಕ್ಟೋಬರ್ (ಹಿ.ಸ.)

ಬಳ್ಳಾರಿಯ ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠದಲ್ಲಿ ಅಕ್ಟೋಬರ್ 3 ಮತ್ತು 4ರಂದು ಶ್ರೀ ಹಾನಗಲ್ಲ ಕುಮಾರ ಮಹಾಶಿವಯೋಗಿಗಳ 159ನೇ ಹಾಗೂ ಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿ ಅವರ 88ನೇ ಜಯಂತ್ಯೋತ್ಸವದ ಪ್ರವಚನದ ಮಂಗಲ ಮಹೋತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ನಿರಂಜನ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮೀಜಿಗಳ ಪಾವನ ಸನ್ನಿಧಾನ ಹಾಗೂ ಅಪ್ಪಣೆಯ ಮೇರೆಗೆ ಈ ಸಮಾರಂಭಗಳು ನಡೆಯುತ್ತಿದ್ದು, ಅಕ್ಟೋಬರ್ 3ರ ಶನಿವಾರ ಸಂಜೆ 5:30ಕ್ಕೆ ಸೋಮಸಮುದ್ರ ಹಾಗೂ ಶ್ರೀಧರಗಡ್ಡೆ ಗ್ರಾಮದಿಂದ ಶ್ರೀಮಠಕ್ಕೆ ಭಕ್ತಾಧಿಗಳು ಪಾದಯಾತ್ರೆಯಲ್ಲಿ ಆಗಮಿಸಲಿದ್ದಾರೆ.

ಪಾದಯತ್ರೆಯಲ್ಲಿ ಆಗಮಿಸಿದ ಭಕ್ತಾಧಿಗಳನ್ನು ಶ್ರೀಮಠದಲ್ಲಿ ಮಂಗಳವಾದ್ಯಗಳಿಂದ ಸ್ವಾಗತಿಸಿ ಶ್ರೀಜಗದ್ಗುರು ಕೊಟ್ಟೂರೇಶ್ವರ ರಥೋತ್ಸವವನ್ನು ನಡೆಸಲಾಗುತ್ತದೆ. ನಂತರ, ‘ಜೀವನದರ್ಶನ’ ಪ್ರವಚನ ಮಂಗಲಗೊಳ್ಳಲಿದೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಅಧ್ಯಕ್ಷರಾದ ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಮಹಾದೇವ ಬಿದರಿ ಅವರಿಗೆ ಗೌರವ ಸನ್ಮಾನ. ಸಂಸದ ಈ. ತುಕಾರಾಂ, ಶಾಸಕರಾದ ನಾರಾ ಭರತರೆಡ್ಡಿ, ಜಿ.ಎನ್. ಗಣೇಶ್, ಬಿ.ಎಂ. ನಾಗರಾಜ್, ಬಿ. ನಾಗೇಂದ್ರ ಹಾಗೂ ಎಂಎಲ್ಸಿ ವೈ.ಎಂ. ಸತೀಶ್ ಅವರು ಮುಖ್ಯ ಅತಿಥಿಗಳಾಗಿದ್ದಾರೆ.

ಅಕ್ಟೋಬರ್ 4ರ ಭಾನುವಾರ ಬೆಳಗ್ಗೆ 10ಗಂಟೆಗೆ ಶ್ರೀಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಅಕ್ಕನ ಬಳಗದ ಸಹಯೋಗದಲ್ಲಿ

ಕುರುಗೋಡು ವಿರಕ್ತಮಠದ ನಿರಂಜನ ಪ್ರಭು ಸ್ವಾಮೀಜಿ, ಶ್ರೀಧರಗಡ್ಡೆ ವಿರಕ್ತಮಠದ ಮರಿಕೊಟ್ಟೂರು ದೇಶಿಕರು ಸ್ವಾಮೀಜಿ ಸಮ್ಮುಖದಲ್ಲಿ 1111 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.

ಶಾಸಕಿ ಈ. ಅನ್ನಪೂರ್ಣ ತುಕಾರಾಂ ಸೇರಿದಂತೆ ಹಲವು ಮಹಿಳಾ ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ನಂತರ ಪೂಜ್ಯದ್ವಯರ ಜಯಂತಿ ಮಹೋತ್ಸವ ನೆರವೇರಲಿದೆ. ಕಲ್ಯಾಣಸ್ವಾಮಿ ಮಠದ ಕಲ್ಯಾಣ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದು, ವಿರಕ್ತ ಮಠದ ಸಿದ್ದೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ ನೆರವೇರಲಿದೆ.

ಮಾಜಿ ಶಾಸಕರಾದ ಬಿ. ಶ್ರೀರಾಮುಲು, ಜಿ. ಸೋಮಶೇಖರರೆಡ್ಡಿ, ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಹಾಗೂ ಇತರ ಮುಖಂಡರು ಉಪಸ್ಥಿತರಿರಲಿದ್ದಾರೆ. ಈ ಕಾರ್ಯಕ್ರಮಕ್ಕೆ ಜಿಲ್ಲೆ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಜಯಂತಿ ಮಹೋತ್ಸವ ಸಮಿತಿ ಕೋರಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande