ಶಶೀಲ್ ನಮೋಶಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ : ಶಾಸಕ ವೈ.ಎಂ. ಸತೀಶ್
ಕಂಪ್ಲಿ, 01 ಅಕ್ಟೋಬರ್ (ಹಿ.ಸ.) ಈಶಾನ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಅವರ ಪರವಾಗಿ ವಿಧಾನಪರಿಷತ್ತಿನ ಸದಸ್ಯರಾಗಿರುವ ವೈ.ಎಂ. ಸತೀಶ್ ಅವರು ಕಂಪ್ಲಿ ವಿಧಾನಸಭಾ ಕ್ಷೇತ್ರದ ವಿವಿಧ ಶಿಕ್ಷಣ ಸಂಸ್ಥೆಗಳು, ಶಾಲೆಗಳು ಮತ್ತು ಕಾಲೇಜುಗಳಿಗೆ ಗುರುವಾರ ಭೇಟಿ ನೀಡಿ, ಮತ ಕೋರಿದ್ದಾರೆ.
ಶಶೀಲ್ ನಮೋಶಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ : ಶಾಸಕ ವೈ.ಎಂ. ಸತೀಶ್

ಶಶೀಲ್ ನಮೋಶಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ : ಶಾಸಕ ವೈ.ಎಂ. ಸತೀಶ್

ಶಶೀಲ್ ನಮೋಶಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ : ಶಾಸಕ ವೈ.ಎಂ. ಸತೀಶ್

ಶಶೀಲ್ ನಮೋಶಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ : ಶಾಸಕ ವೈ.ಎಂ. ಸತೀಶ್

ಶಶೀಲ್ ನಮೋಶಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ : ಶಾಸಕ ವೈ.ಎಂ. ಸತೀಶ್

ಕಂಪ್ಲಿ, 01 ಅಕ್ಟೋಬರ್ (ಹಿ.ಸ.)

ಈಶಾನ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಅವರ ಪರವಾಗಿ ವಿಧಾನಪರಿಷತ್ತಿನ ಸದಸ್ಯರಾಗಿರುವ ವೈ.ಎಂ. ಸತೀಶ್ ಅವರು ಕಂಪ್ಲಿ ವಿಧಾನಸಭಾ ಕ್ಷೇತ್ರದ ವಿವಿಧ ಶಿಕ್ಷಣ ಸಂಸ್ಥೆಗಳು, ಶಾಲೆಗಳು ಮತ್ತು ಕಾಲೇಜುಗಳಿಗೆ ಗುರುವಾರ ಭೇಟಿ ನೀಡಿ, ಮತ ಕೋರಿದ್ದಾರೆ.

ಸುದ್ದಿಗಾರರ ಜೊತೆಯಲ್ಲಿ ಮಾತನಾಡಿದ ವೈ.ಎಂ. ಸತೀಶ್ ಅವರು, ಪ್ರಾಮಾಣಿಕ ಮತ್ತು ಬದ್ಧತೆಯ ಜನಪರ ಆಡಳಿತ ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭವಿಷ್ಯದ ಭಾರತದ ಸಂಕಲ್ಪವನ್ನು ಸಾಕಾರಗೊಳಿಸಲು ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಶಿ ಅವರಿಗೆ ಮತ ಚಲಾಯಿಸಬೇಕು ಎಂದು ಕೋರಿದರು.

ಅಲ್ಲದೇ, ಶಿಕ್ಷಕರ ವರ್ಗಾವಣೆ ಮತ್ತು ಶಿಕ್ಷಕರ ಸೌಲಭ್ಯಗಳಿಗಾಗಿ ವೈಯಕ್ತಿಕವಾಗಿ ನಡೆಸುತ್ತಿರುವ ಹೋರಾಟಗಳು, ಶಶಿಲ್ ನಮೋಶಿ ಅವರು ಶಿಕ್ಷಕರ ಬೇಡಿಕೆಗಳಿಗೆ ಸ್ಪಂದಿಸುತ್ತಿರುವುದು ಮತ್ತು

ವಿಧಾನಪರಿಷತ್ತಿನಲ್ಲಿ ನಡೆಯುವ ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಿರುವ ಕುರಿತು ವಿವರಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿರುವ ಅನಿಲ್ ನಾಯ್ಡು ಮೋಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ರೆಡ್ಡಿ ಹಾಗೂ ಮಂಡಲ ಅಧ್ಯಕ್ಷರಾದ ಮಹದೇವ್, ಕುಮಾರಸ್ವಾಮಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ತಿಮ್ಮಾರೆಡ್ಡಿ, ಜಿಲ್ಲಾ ಉಪಾಧ್ಯಕ್ಷರಾದ ವೀರೇಶ್ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

 rajesh pande