ನಿಂಬೆಯ ನಾಡು, ಅಭಿವೃದ್ಧಿಯ ಬೀಡು : ಡಿ.ಕೆ. ಶಿವಕುಮಾರ್
ವಿಜಯಪುರ, 09 ಜನವರಿ (ಹಿ.ಸ.) : ಆ್ಯಂಕರ್ : ವಿಜಯಪುರ ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಈ ಜಿಲ್ಲೆಯನ್ನು “ನಿಂಬೆಯ ನಾಡು” ಎಂದು ನುಡಿದರು. ನಿಂಬೆಹಣ್ಣು ಶ್ರೇಷ್ಠವಾದದ್ದು,
ಡಿಕೆ


ವಿಜಯಪುರ, 09 ಜನವರಿ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಈ ಜಿಲ್ಲೆಯನ್ನು “ನಿಂಬೆಯ ನಾಡು” ಎಂದು ನುಡಿದರು.

ನಿಂಬೆಹಣ್ಣು ಶ್ರೇಷ್ಠವಾದದ್ದು, ರುಚಿಗೆ, ಪೂಜೆಗೆ ಹಾಗೂ ದೃಷ್ಟಿ ತೆಗೆಯಲು ಉಪಯೋಗವಾಗುತ್ತದೆ ಎಂದು ಅವರು ಹೇಳಿದರು.

ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಜನರು ತಮ್ಮ ವಿಶ್ವಾಸದಿಂದ ಸರ್ಕಾರಕ್ಕೆ 10 ಮಂದಿ ಶಾಸಕರನ್ನು ನೀಡಿದ್ದು, ಇದಕ್ಕಾಗಿ ಅವರಿಗೆ ತಮ್ಮ ಕೋಟಿ ನಮಸ್ಕಾರಗಳನ್ನು ಅರ್ಪಿಸಿದರು. ಈ ಜಿಲ್ಲೆಗಳ ಜನರು ಸರ್ಕಾರ ಮತ್ತು ಪಕ್ಷದ ಮೇಲೆ ಅಪಾರ ವಿಶ್ವಾಸವನ್ನು ಹೊಂದಿದ್ದಾರೆ ಎಂದು ಅವರು ಸೇರಿಸಿದರು.

ಡಿ.ಕೆ. ಶಿವಕುಮಾರ್ ಅವರು ಹೇಳಿದರು : “ಇಂದು ನಾವು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ ಅವರ ಹೆಸರು ಇಟ್ಟಿದ್ದೇವೆ. ದೇವರಹಿಪ್ಪರಗಿಯಲ್ಲಿ ಮಡಿವಾಳ ಮಾಚಯ್ಯನ ಹೆಸರು, ಸುರಪುರದಲ್ಲಿ ರಾಜಾ ವೆಂಕಟಪ್ಪ ನಾಯಕ್ ಹೆಸರು, ಸಿಂದಗಿಯಲ್ಲಿ ಚನ್ನವೀರ ಸ್ವಾಮೀಜಿ ಹೆಸರು ಇಡಲಾಗಿದೆ. ನಾವು ‘ಸರ್ಮ ಧರ್ಮ ಸಮ ಬಾಳು’ ತತ್ವದಡಿಯಲ್ಲಿ ಎಲ್ಲರನ್ನೂ ಸಮಾನವಾಗಿ ಮುಂದುವರಿಸುತ್ತಿದ್ದೇವೆ.”

ಬಸವಣ್ಣನವರು ಹುಟ್ಟಿದ ವಿಜಯಪುರ ನಾಡು ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಜನರ ಸಂಕಲ್ಪ ಮತ್ತು ಸಹಕಾರದೊಂದಿಗೆ ಈ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಒಟ್ಟಾಗಿ ಮಾಡೋಣ ಎಂದು ಅವರು ಹೇಳಿದರು. ಕಬ್ಬು, ನಿಂಬೆ, ದ್ರಾಕ್ಷಿ ಬೆಳೆಸಲು ನೀರಿನ ಸೌಲಭ್ಯ ಒದಗಿಸಿ ರೈತರ ಬದುಕನ್ನು ಸುಧಾರಿಸಲು ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande