
ಬೆಂಗಳೂರು, 09 ಜನವರಿ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದಿಂದ ‘ಗಂಗಾ ಕಲ್ಯಾಣ’ ಯೋಜನೆ ಅಕ್ಷರಶಃ ಹಳ್ಳ ಹಿಡಿದಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ. ಇವರ ಭ್ರಷ್ಟಾಚಾರ ಮತ್ತು ರಾಜಕೀಯ ತರ್ಕಗಳ ಅಬ್ಬರದಲ್ಲಿ ಅನ್ನದಾತರ ಬದುಕು ಕತ್ತಲಿಗೆ ತಳ್ಳಲ್ಪಟ್ಟಿದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳ ಸಂಖ್ಯೆ 11,866 ಇದ್ದರೆ, ಇದೀಗ 3,262 ಕ್ಕೆ ಕುಸಿದಿರುವುದು ರೈತರ ಮೇಲೆ ಸರ್ಕಾರ ನಡೆಸಿದ ಮಹಾದ್ರೋಹವಾಗಿದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಅನುದಾನದ ಕೊರತೆ, ಕಮಿಷನ್ ದಂಧೆ ಮತ್ತು ವ್ಯಾಪಕ ಭ್ರಷ್ಟಾಚಾರದಿಂದ ಯೋಜನೆ ಭ್ರಷ್ಟರ ಪಾಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ರೈತರ ಹಿತವನ್ನು ಬಲಿಕೊಟ್ಟು ನಡೆಸುತ್ತಿರುವ ‘ಶೂನ್ಯ ಅಭಿವೃದ್ಧಿ ಆಡಳಿತ’ಕ್ಕೆ ಜನರು ತಕ್ಕ ಪ್ರತಿಸ್ಪಂದನ ನೀಡಲಿದ್ದಾರೆ ಎಂದು ಹೇಳಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ ನಿಗಮಗಳ ಮೂಲಕ ಅನುಷ್ಠಾನಗೊಳಿಸಲಾಗುವ ಗಂಗಾ ಕಲ್ಯಾಣ ಯೋಜನೆ ಕೂಡ ದೋಷಪೂರಿತವಾಗಿ ನಿರ್ವಹಿಸಲಾಗುತ್ತಿದ್ದು, ಯೋಜನೆಯ ದಾಖಲೆಗಳು ಹಿಂದಿಕ್ಕಲ್ಪಟ್ಟಿವೆ ಎಂದು ಅವರು ಆರೋಪಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa