
ಹುಬ್ಬಳ್ಳಿ, 09 ಜನವರಿ (ಹಿ.ಸ.);
ಆ್ಯಂಕರ್: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಧಾರವಾಡ ಜಿಲ್ಲೆಯ ಕೈಗಾರಿಕಾ ಕೇಂದ್ರ ಮತ್ತು ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಸಹಯೋಗದಲ್ಲಿ RAMP ಯೋಜನೆಯಡಿಯಲ್ಲಿ ಸಣ್ಣ ಕೈಗಾರಿಕೆಗಳ ಉದ್ಯಮಿಗಳಿಗೆ “ಮಾರಾಟ ಸ್ವೀಕೃತಿಗಳನ್ನು ನಗದು ರೂಪದಲ್ಲಿ ಪಡೆಯುವ ವ್ಯವಸ್ಥೆ” ಕುರಿತ ಅರಿವು ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಜಿಲ್ಲಾ ಕೈಗಾರಿಕಾ ಕೇಂದ್ರದ ನಿರ್ದೇಶಕರು ಶಿವಪುತ್ರಪ್ಪ ಆರ್.ಎಚ್. ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ತಜ್ಞ ಉಪನ್ಯಾಸಕರಾದ ಎಸ್.ಎಸ್. ಮೂರ್ತಿಯವರು ಹಾಗೂ ಬ್ಯಾಂಕ್ ಆಫ್ ಬರೋಡಾದ ಸ್ಥಳೀಯ ಹಣಕಾಸು ನಿರ್ವಾಹಕ ಬಸವರಾಜ ಗಡದವರು ಕಾರ್ಯಕ್ರಮದಲ್ಲಿ ಮಾರಾಟ ಸ್ವೀಕೃತಿಗಳನ್ನು ನಗದು ರೂಪದಲ್ಲಿ ಪಡೆಯುವ ವ್ಯವಸ್ಥೆಯ ಉಪಯೋಗ, ಪ್ರಯೋಜನ ಮತ್ತು ಕಾರ್ಯಪಧ್ಧತಿಗಳನ್ನು ವಿವರಿಸಿದರು. ಈ ವ್ಯವಸ್ಥೆಯಿಂದ ಉದ್ಯಮಿಗಳು ಬಾಕಿ ಇರುವ ಹಣಕ್ಕಾಗಿ ಕಾಯದೆ, ತಕ್ಷಣ ನಗದು ಲಭ್ಯಮಾಡಿಕೊಳ್ಳಬಹುದು. ಇದರ ಪರಿಣಾಮವಾಗಿ ಉದ್ಯಮಗಳಲ್ಲಿ ಕಾರ್ಯನಿರತ ಬಂಡವಾಳ ಹರಿವು ಸುಧಾರಿಸುತ್ತದೆ.
ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕರು ಶಿವಾನಂದ ಕಮ್ಮಾರ, ಸಣ್ಣ ಕೈಗಾರಿಕೆ ಸಂಘದ ಅಧ್ಯಕ್ಷರು ಶ್ರೀ ಅಶೋಕ್ ಕೂನ್ನೂರ, HEF ಹುಬ್ಬಳ್ಳಿ ಮತ್ತು ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರಮೇಶ ಪಾಟೀಲ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಶ್ರೀಪತಿ ಭಟ್ ಕಾರ್ಯಕ್ರಮವನ್ನು ನಿರ್ವಹಿಸಿದರು. ನೋಂದಾಯಿತ ಸಣ್ಣ ಕೈಗಾರಿಕೆಗಳ ಉದ್ಯಮಶೀಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಮಾರಾಟ ಸ್ವೀಕೃತಿಗಳನ್ನು ನಗದು ರೂಪದಲ್ಲಿ ಪಡೆಯುವ ವ್ಯವಸ್ಥೆಯ ಪ್ರಯೋಜನಗಳ ಕುರಿತು ಸಂಪೂರ್ಣ ಅರಿವು ಪಡೆದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa