
ವಿಜಯಪುರ, 09 ಜನವರಿ (ಹಿ.ಸ.) :
ಆ್ಯಂಕರ್ : ಕೃಷ್ಣಾ ಮೂರನೇಯ ಹಂತದ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲ, ಅನೇಕ ರಾಜ್ಯಗಳು ಈ ವಿಷಯವಾಗಿ ದಾವೆ ಹೂಡಿವೆ, ಈ ನಿಟ್ಟಿನಲ್ಲಿ ಅಂತಿಮ ಅಧಿಸೂಚನೆಯಾದರೆ ಎಲ್ಲದಕ್ಕೂ ಪರಿಹಾರವಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು.
ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಮ್ಮುಖದಲ್ಲಿ ಚಾಲನೆ ನೀಡುವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೃಷ್ಣಾ ಮೂರನೇಯ ಹಂತದ ಯೋಜನೆ ಒಳಗಾದ ಒಣ ಬೇಸಾಯಕ್ಕೆ ಸಂಬಂಧಿಸಿದ ೩೦ ಲಕ್ಷ ರೂ. ಹಾಗೂ ನೀರಾವರಿ ಜಮೀನುಗಳಿಗೆ ೪೦ ಲಕ್ಷ ರೂ. ದರ ನೀಡುವ ಕಾರ್ಯ ಮಾಡಿದೆ, ಈ ಕಾರ್ಯಕ್ಕೆ ೭೦ ಸಾವಿರ ಕೋಟಿ ರೂ. ಬೇಕಾಗಲಿದ್ದು, ಆರ್ಥಿಕ ಹೊರೆಯಾದರೂ ಚಿಂತೆ ಇಲ್ಲ ಈ ಕಾರ್ಯವನ್ನು ಅನುಷ್ಠಾನಗೊಳಿಸಲಾಗುವುದು ಎಂದರು.
ಅನೇಕ ರೈತರು ಹೆಚ್ಚಿನ ಪರಿಹಾರ ಕೋರಿ ಕೋರ್ಟ್ ಮೆಟ್ಟಲು ಹೋಗಿದ್ದಾರೆ, ಆದರೆ ಅಲ್ಲಿ ನಿಗದಿಯಾಗುವ ಪರಿಹಾರವನ್ನು ನಮ್ಮ ಸರ್ಕಾರ ಅಷ್ಟೇ ಅಲ್ಲ ಯಾವ ಸರ್ಕಾರ ಕೂಡ ಕೊಡಲು ಅಸಾಧ್ಯ, ಹೀಗಾಗಿಯೇ ಕನ್ಸಂಟ್ ಅವಾರ್ಡ್ ಮೂಲಕ ರೈತರಿಗೆ ಪರಿಹಾರ ಕೊಡುವ ಕಾರ್ಯವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು..
ಮರಕ್ಕೆ ಬೇರು ಮುಖ್ಯ : ಮನುಷ್ಯನಿಗೆ ನಂಬಿಕೆ
ಮರಕ್ಕೆ ಬೇರು ಹೇಗೆ ಮುಖ್ಯವೋ ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ, ಒಂದು ಇಲ್ಲಿ ಕೊಟ್ಟು ಹೋಗುವುದು, ಇನ್ನೊಂದು ಬಿಟ್ಟು ಹೋಗುವುದು, ಆದರೆ ಮನುಷ್ಯನಿಗೆ ನಂಬಿಕೆ ಅತಿ ಮುಖ್ಯ ಎಂದು ಡಿ.ಕೆ. ಶಿವಕುಮಾರ ಹೇಳಿದರು.
ಬುದ್ಧಿ ಇದ್ದವರು ಯುದ್ಧ ಗೆಲ್ಲುತ್ತಾರೆ, ಗುಣ ಇದ್ದವರು ಹೃದಯ ಗೆಲ್ಲುತ್ತಾರೆ, ತಾಳ್ಮೆ ಇದ್ದವರು ಜಗತ್ತನ್ನೇ ಗೆಲ್ಲುತ್ತಾರೆ, ಇದೇ ರೀತಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಇಡೀ ಜಗತ್ತನ್ನೇ ಗೆದ್ದರು ಎಂದರು.
ಈ ಕಾಂಗ್ರೆಸ್ ಸರ್ಕಾರ ಉತ್ತಮವಾಗಿ ಕಾರ್ಯ ಮಾಡುತ್ತಿದೆ. ಎಲ್ಲ ಧರ್ಮ, ಎಲ್ಲ ಜಾತಿಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತಿರುವುದೇ ಕಾಂಗ್ರೆಸ್ ಸರ್ಕಾರದ ಶಕ್ತಿ, ಸಾರಿಗೆ ಬಸ್ ನಿಲ್ದಾಣಗಳಿಗೆ ಮಹಾನ್ ವ್ಯಕ್ತಿಗಳ ಹೆಸರು ಇರಿಸಿ ಗೌರವಿಸುವ ಕೆಲಸ ಮಾಡುತ್ತಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಮಾತನಾಡಿ,ಬಕಿತ್ತೂರ ರಾಣಿ ಚೆನ್ನಮ್ಮ ಅವರಿಗೂ ಹಾಗೂ ವಿಜಯಪುರಕ್ಕೆ ಅವಿನಾಭಾವ ಸಂಬಂಧ, ಕಿತ್ತೂರ ರಾಣಿ ಚೆನ್ನಮ್ಮಳ ಜನ್ಮಭೂಮಿ ವಿಜಯಪುರ ಎಂಬುದು ಹೆಮ್ಮೆಯ ಸಂಗತಿ, ಕೊಟ್ನಾಳದ ದೇಶಮುಖ ಮನತೆನ ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಕುಟುಂಬ, ದೇಶಕ್ಕಾಗಿ ಗಲ್ಲಿಗೇರಿದ ಈ ದೇಶಮುಖ ಕುಟುಂಬದ ನೆನಪಿನಲ್ಲಿರುವ ವೃತ್ತ ಹುತಾತ್ಮ ಸರ್ಕಲ್ ಎಂದು ಜನಪ್ರಿಯವಾಗಲಿ, ಆ ಹೆಸರಿನಿಂದ ಆ ವೃತ್ತ ಕರೆಯುವಂತಾಗಲಿ ಎಂದರು.
ಬಹುದಿನಗಳ ಸೈಕ್ಲಿಸ್ಟ್ಗಳ ಕನಸಾದ ಸೈಕ್ಲಿಂಗ್ ವೆಲೋಡ್ರೋಂ, ಜಿಲ್ಲಾಡಳಿತ ಭವನ ಕಾಮಗಾರಿಗೆ ಚಾಲನೆ, ವಿವಿಧ ವಸತಿ ನಿಲಯಗಳ ಕಟ್ಟಡ, ಅತ್ಯಾಧುನಿಕ ಸೌಕರ್ಯಗಳಿಂದ ಅಭಿವೃದ್ಧಿಪಡಿಸಲಾದ ಪ್ರಾದೇಶಿಕ ಸಾರಿಗೆ ಇಲಾಖೆಯ ಕಟ್ಟಡ ಸೇರಿದಂತೆ ನೂರಾರು ಕೋಟಿ ರೂ. ಅಭಿವೃದ್ಧಿಯ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ವಿವರಿಸಿದರು.
ಧೀರ್ಘಾವಧಿ ಮುಖ್ಯಮಂತ್ರಿಯಾಗಿ ದಾಖಲೆ ಬರೆದಿರುವ ಸಿದ್ಧರಾಮಯ್ಯ ಅವರು ದೇಶದಲ್ಲಿಯೇ ಅತೀ ಹೆಚ್ಚು ರಾಜ್ಯ ಬಜೆಟ್ ಮಂಡಿಸಿದ ಹೆಗ್ಗಳಿಕೆಗೂ ಪಾತ್ರರಾಗಿದ್ದು, ಬಸವಾದಿ ಶರಣರ ಆಶಯಗಳ ಸಮ ಸಮಾಜ ನಿರ್ಮಾಣದ ಕನಸು ಹೊತ್ತ ಮಹಾನ್ ನಾಯಕ ಸಿದ್ಧರಾಮಯ್ಯ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande