
ಗದಗ, 09 ಜನವರಿ (ಹಿ.ಸ.) :
ಆ್ಯಂಕರ್ : ಗದಗ ಬೆಟಗೇರಿ ಅವಳಿ ನಗರದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ, ಗಣ್ಯ ವ್ಯಕ್ತಿಗಳಿಗೆ, ಹಿರಿಯ ನಾಗರೀಕರಿಗೆ, ಅವಳಿ ನಗರದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಹಿತೈಷಿಗಳಿಗೆ, ವಾಣಿಜ್ಯೋದ್ಯಮ ಸಂಸ್ಥೆಗಳಿಗೆ ಹಾಗೂ ಸ್ವಯಂ ಸೇವಾ ಸಂಸ್ಥೆ ಪದಾಧಿಕಾರಿಗಳಲ್ಲಿ ಹಾಗೂ ಜನ ಪ್ರತಿನಿಧಿಗಳಾದ ಎಲ್ಲಾ ಸದಸ್ಯರುಗಳಿಗೆ ವಿನಂತಿಸುವುದೇನೆಂದರೆ, ನಗರಸಭೆಯ ಸನ್ 2026-27 ನೇ ಸಾಲಿನ ಆಯವ್ಯಯ ತಯಾರಿಸಲು ಸರ್ಕಾರದ ಸುತ್ತೋಲೆ ಮಾರ್ಗಸೂಚಿಗಳ ಪ್ರಕಾರ ಸ್ಥಳೀಯ ಸಂಘ ಸಂಸ್ಥೆಗಳ, ಗಣ್ಯ ನಾಗರಿಕರ ಹಾಗೂ ಸ್ವಯಂ ಸೇವಾ ಸಂಸ್ಥೆಗಳ, ವಾಣಿಜ್ಯೋದ್ಯಮ ನಿಗಮಗಳ ಪದಾಧಿಕಾರಿಗಳೊಂದಿಗೆ ಹಾಗೂ ಜನಪ್ರತಿನಿಧಿಗಳು ಮತ್ತು ಗೌರವಾನ್ವಿತ ಸದಸ್ಯರುಗಳೊಂದಿಗೆ ಸಮಾಲೋಚಿಸಿ ಸಲಹೆ ಸೂಚನೆಗಳನ್ನು ಪಡೆದು ಬಜೆಟ್ ಆಯವ್ಯಯ ತಯಾರಿಸಿ ಮಂಡಿಸಬೇಕಾಗಿರುತ್ತದೆ.
ಈ ಕುರಿತು ಆಯವ್ಯಯದ ಮೊದಲನೇಯ ಸುತ್ತಿನ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಜನೆವರಿ 12 ರಂದು ಸೋಮವಾರ ಮುಂಜಾನೆ 11-30 ಘಂಟೆಗೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಆಡಳಿತಾಧಿಕಾರಿಗಳು ಗದಗ ಬೆಟಗೇರಿ ನಗರಸಭೆ ಇವರ ಅಧ್ಯಕ್ಷತೆಯಲ್ಲಿ ನಗರಸಭಾ ಸಭಾ ಭವನದಲ್ಲಿ ಮೊದಲನೇಯ ಸಮಾಲೋಚನಾ ಸಭೆ ಕರೆಯಲಾಗಿದ್ದು, ಸಭೆಗೆ ಆಗಮಿಸಿ ಅವಳಿ ನಗರದ ಸರ್ವತೋಮುಖ ಅಭಿವೃದ್ಧಿಗಾಗಿ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಲು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP