ದೆಹಲಿಯಲ್ಲಿ ದಟ್ಟ ಮಂಜು ; ವಿಮಾನ, ರೈಲು ಸಂಚಾರಕ್ಕೆ ಅಡಚಣೆ
ನವದೆಹಲಿ, 08 ಜನವರಿ (ಹಿ.ಸ.) : ಆ್ಯಂಕರ್ : ಉತ್ತರ ಭಾರತದಲ್ಲಿ ಮುಂದುವರಿದಿರುವ ತೀವ್ರ ಶೀತ ಹಾಗೂ ದಟ್ಟ ಮಂಜು ದೈನಂದಿನ ಸಂಚಾರ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ ದಟ್ಟ ಮಂಜಿನಿಂದ ವ
Fog


ನವದೆಹಲಿ, 08 ಜನವರಿ (ಹಿ.ಸ.) :

ಆ್ಯಂಕರ್ : ಉತ್ತರ ಭಾರತದಲ್ಲಿ ಮುಂದುವರಿದಿರುವ ತೀವ್ರ ಶೀತ ಹಾಗೂ ದಟ್ಟ ಮಂಜು ದೈನಂದಿನ ಸಂಚಾರ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ ದಟ್ಟ ಮಂಜಿನಿಂದ ವಿಮಾನ ಹಾರಾಟದ ಮೇಲೆ ಗಂಭೀರ ಪರಿಣಾಮ ಬೀರಿತು.

ಗೋಚರತೆ 50 ಮೀಟರ್‌ಗಿಂತ ಕಡಿಮೆಯಾಗಿದ್ದರಿಂದ ಏಳು ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, 100ಕ್ಕೂ ಹೆಚ್ಚು ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನಗಳು ಹಲವು ಗಂಟೆಗಳ ಕಾಲ ವಿಳಂಬವಾಗಿವೆ. ಕಡಿಮೆ ಗೋಚರತೆಯಿಂದ ಪೈಲಟ್‌ಗಳಿಗೆ ಟೇಕ್‌ಆಫ್ ಹಾಗೂ ಲ್ಯಾಂಡಿಂಗ್‌ನಲ್ಲಿ ತೊಂದರೆಯಾಯಿತು.

ಇಂಡಿಗೊ ಸಂಸ್ಥೆಯ ದೆಹಲಿ–ಅಮೃತಸರ ವಿಮಾನ (6E-5103) ರದ್ದುಗೊಂಡಿದೆ. ಸ್ಪೈಸ್‌ಜೆಟ್‌ನ ದೆಹಲಿ–ವಾರಣಾಸಿ (SG-8718) ಮತ್ತು ದೆಹಲಿ–ಶ್ರೀನಗರ (SG-661) ವಿಮಾನಗಳು ಟೇಕ್‌ಆಫ್ ಮಾಡಲು ಸಾಧ್ಯವಾಗಲಿಲ್ಲ. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ದೆಹಲಿ–ಅಮೃತಸರ (IX-1683) ಹಾಗೂ ಏರ್ ಇಂಡಿಯಾದ ದೆಹಲಿ–ಗುವಾಹಟಿ (IX-1030) ವಿಮಾನಗಳನ್ನೂ ರದ್ದುಗೊಳಿಸಲಾಗಿದೆ. ಕೆಲ ವಿಮಾನಗಳು ವಿಳಂಬವಾಗಿ ಕಾರ್ಯಾಚರಣೆ ನಡೆಸಿವೆ.

ಇದಕ್ಕೆ ಜೊತೆಗೆ, ದೇಶದ ವಿವಿಧ ಭಾಗಗಳಿಂದ ದೆಹಲಿಗೆ ಆಗಮಿಸುವ ಹಲವು ಪ್ರಮುಖ ರೈಲುಗಳು ಗಂಟೆಗಟ್ಟಲೆ ತಡವಾಗಿ ಸಂಚರಿಸುತ್ತಿದ್ದು, ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗಿದೆ.

ವಿಮಾನಯಾನ ಸಂಸ್ಥೆಗಳು ಹವಾಮಾನ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿರುವುದಾಗಿ ತಿಳಿಸಿದ್ದು, ಪ್ರಯಾಣಿಕರು ತಮ್ಮ ವಿಮಾನ ಸ್ಥಿತಿಯನ್ನು ಸಂಸ್ಥೆಗಳ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಪರಿಶೀಲಿಸುವಂತೆ ಸಲಹೆ ನೀಡಿವೆ. ಮಂಜು ಕಡಿಮೆಯಾಗುವ ನಿರೀಕ್ಷೆಯಿದ್ದು, ಶೀಘ್ರದಲ್ಲೇ ನಿಯಮಿತ ವೇಳಾಪಟ್ಟಿಗೆ ಮರಳುವ ವಿಶ್ವಾಸವನ್ನು ವ್ಯಕ್ತಪಡಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande